ಪೊರಕೆಯನ್ನು ಇದೇ ದಿಕ್ಕಿನಲ್ಲಿ ಇಡಬೇಕು... ಲಕ್ಷ್ಮೀ ಕಟಾಕ್ಷದಿಂದ ಸುಖ ಸಮೃದ್ಧಿ ಜೊತೆಗೆ ಹಣದ ಹರಿವು ಹೆಚ್ಚಾಗುತ್ತೆ !
ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಹೇಗೆ ಇಡಬೇಕು ಮತ್ತು ಯಾವ ದಿಕ್ಕಿಗೆ ಇಡಬೇಕು ಎಂಬುದರ ಕುರಿತು ಕೆಲವು ಪ್ರಮುಖ ನಿಯಮಗಳಿವೆ.
ಪೊರಕೆಯನ್ನು ಎಂದಿಗೂ ಪೂಜಾ ಕೊಠಡಿ ಬಳಿ ಇಡಬಾರದು. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಅಡುಗೆಮನೆಯ ಬಳಿ ಪೊರಕೆ ಇಡಬಾರದು. ಇದು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹಾಳು ಮಾಡುತ್ತದೆ.
ಮುಖ್ಯ ಬಾಗಿಲಿನ ಮುಂದೆ ಪೊರಕೆ ಇಡುವುದು ವಾಸ್ತು ದೋಷಕ್ಕೆ ಕಾರಣಾಗುತ್ತದೆ. ಇದು ಮನೆಯಲ್ಲಿ ಕೆಟ್ಟ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ವೇಳೆ ಮನೆಯನ್ನು ಗುಡಿಸುವುದು ಒಳ್ಳೆಯದಲ್ಲ. ಇದು ಲಕ್ಷ್ಮಿ ದೇವಿಗೆ ಅಗೌರವ. ಮನೆಯಲ್ಲಿನ ಸಂಪತ್ತು ಮಾಯವಾಗುತ್ತದೆ.
ಶನಿವಾರದಂದು ಹೊಸ ಪೊರಕೆ ಖರೀದಿಸುವುದು ಉತ್ತಮ. ಇದು ಬಡತನವನ್ನು ತೊಡೆದುಹಾಕುತ್ತದೆ. ಸಂಪತ್ತನ್ನು ತರುತ್ತದೆ. ಜೊತೆಗೆ ಧನತ್ರಯೋದಸಿಯಂದು ಮನೆಗೆ ಪೊರಕೆಯನ್ನೂ ತರಬೇಕು.
ಪೊರಕೆಯನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಶ್ರೀಮಂತಿಕೆ ಹೆಚ್ಚುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.