Vastu Shastra For Wall: ಖಾಲಿ ಗೋಡೆಗೆ ಸಂಬಂಧಿಸಿದ ಈ ವಾಸ್ತು ನಿಯಮಗಳನ್ನು ನಿರ್ಲಕ್ಷಿಸಿದರೆ ಭಾರೀ ನಷ್ಟ
ಖಾಲಿ ಗೋಡೆ ಕಡೆಗೆ ಮುಖಮಾಡಿ ಕುಳಿತುಕೊಳ್ಳುವುದು ಅಪಾಯಕಾರಿ: ವಾಸ್ತು ಪ್ರಕಾರ, ಖಾಲಿ ಗೋಡೆ ಕಡೆಗೆ ಮುಖಮಾಡಿ ಕುಳಿತುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ, ಖಾಲಿ ಗೋಡೆ ಇರುವ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುವುದರಿಂದ ದೊಡ್ಡ ಹಾನಿಯಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ. ವಾಸ್ತವವಾಗಿ, ಖಾಲಿ ಗೋಡೆಯು ವ್ಯಕ್ತಿಯ ಆಲೋಚನೆಯ ಮೇಲೆ ಹೆಚ್ಚು ಪ್ರಭಾವ ಉಂಟುಮಾಡುತ್ತದೆ. ಇದರಿಂದ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗಿ ವ್ಯಕ್ತಿಯ ಆತ್ಮಸ್ಥೈರ್ಯ ಕುಗ್ಗುತ್ತದೆ ಎಂದು ಹೇಳಲಾಗುತ್ತದೆ.
ಖಾಲಿ ಗೋಡೆಯಲ್ಲಿ ಇಂತಹ ವಸ್ತುಗಳನ್ನು ಇಡುವುದು ಹೆಚ್ಚು ಸೂಕ್ತ: ಮನೆಯಿರಲಿ, ಕಚೇರಿಯಿರಲಿ ಖಾಲಿ ಗೋಡೆಯ ಮುಂದೆ ಕುಳಿತುಕೊಳ್ಳುವ ಬದಲಿಗೆ ಖಾಲಿ ಗೋಡೆಯಲ್ಲಿ ಮನಸ್ಸಿಗೆ ಮುದ ನೀಡುವ ಪೇಂಟಿಂಗ್ ಅಥವಾ ಫೋಟೋಗಳನ್ನು ಹಾಕುವುದು ಹೆಚ್ಚು ಸೂಕ್ತ ಎಂದು ಪರಿಗಣಿಸಲಾಗಿದೆ. ಓಡುವ ಕುದುರೆ, ಹೂವಿನ ಚಿತ್ರ ಅಥವಾ ದೇವ-ದೇವತೆಗಳ ಚಿತ್ರಗಳಂತಹ ಯಾವುದೇ ಶುಭ ವರ್ಣಚಿತ್ರಗಳನ್ನು ಹಾಕಬಹುದು.
ಗೋಡೆಯ ಮೇಲೆ ಅಪ್ಪಿತಪ್ಪಿಯೂ ಇಂತಹ ಫೋಟೋಗಳನ್ನು ಹಾಕಲೇಬಾರದು: ವಾಸ್ತು ಶಾಸ್ತ್ರದ ಪ್ರಕಾರ, ಖಾಲಿ ಗೋಡೆಯ ಮೇಲೆ ಮುಳ್ಳಿನ ಚಿತ್ರ, ಯುದ್ಧ, ಹಿಂಸಾತ್ಮಕ ಪ್ರಾಣಿಗಳು ಅಥವಾ ಒಣಗಿದ ಮರಗಳಂತಹ ಸಸ್ಯದ ಚಿತ್ರಗಳನ್ನು ಹಾಕುವುದನ್ನು ತಪ್ಪಿಸಬೇಕು.
ಇಂತಹ ಫೋಟೋಗಳಿಂದ ಹೆಚ್ಚುತ್ತೆ ನಿಮ್ಮ ಧನಾತ್ಮಕ ಆಲೋಚನೆ: ಕುಟುಂಬದ ಸಂತೋಷದ ಕ್ಷಣಗಳನ್ನು ಮೆಲುಕು ಹಾಕುವ ಫೋಟೋವನ್ನು ನಿಮ್ಮ ಮನೆಯ ಗೋಡೆಯ ಮೇಲೆ ಇರಿಸಿ. ಇದು ನಿಮ್ಮ ಧನಾತ್ಮಕ ಆಲೋಚನೆಗಳನ್ನು ಹೆಚ್ಚಿಸುತ್ತದೆ.
ಖಾಲಿ ಗೋಡೆಯ ಮೇಲೆ ಈ ವಸ್ತುವನ್ನು ಅಳವಡಿಸಿದರೆ ಆರಂಭವಾಗುತ್ತೆ ಒಳ್ಳೆಯ ಸಮಯ: ಖಾಲಿ ಗೋಡೆಯು ಪೂರ್ವ ದಿಕ್ಕಿನಲ್ಲಿದ್ದರೆ, ಅಲ್ಲಿ ಉತ್ತಮ ಗೋಡೆ ಗಡಿಯಾರವನ್ನು ಸಹ ಅಳವಡಿಸಬಹುದು. ಪೂರ್ವ ದಿಕ್ಕಿನಲ್ಲಿ ಗೋಡೆ ಗಡಿಯಾರವನ್ನು ಅಳವಡಿಸುವುದರಿಂದ ಖಾಲಿ ಗೋಡೆ ತುಂಬುವುದಷ್ಟೇ ಅಲ್ಲ ನಿಮ್ಮ ಒಳ್ಳೆಯ ಸಮಯವೂ ಪ್ರಾರಂಭವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಗೋಡೆ ಗಡಿಯಾರವನ್ನು ಅಳವಡಿಸುವುದರಿಂದ ಅದು ನಿಮ್ಮ ಮನೆ, ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.