ವಾತ್ಸಾಯನನ ಕಾಮಸೂತ್ರದ ಪ್ರಕಾರ ಮದುವೆಯಾಗುವ ಗಂಡಿಗೆ ಇದು ಇರಲೇಬೇಕಂತೆ!! ಏನದು ಅಂತಾ ನೋಡಿ
ಯಾವುದೇ ವ್ಯಕ್ತಿ ಮದುವೆಯಾಗುವ ಮೊದಲು ತಾನು ಸಾಂಸಾರಿಕ ಬದುಕಿಗೆ ಫಿಟ್ ಹೌದೋ ಅಲ್ಲವೋ ಎಂಬುದನ್ನ ಖಚಿತಪಡಿಸಿಕೊಂಡಿರಬೇಕು. ಅಂದರೆ ಹೆಂಡತಿಗೆ ದೈಹಿಕ ಸುಖ ಕೊಡಲು, ಆಕೆಯಿಂದ ಅದನ್ನು ಪಡೆಯಲು ಆತ ಸಮರ್ಥನಾಗಿರಬೇಕಂತೆ. ಆತನ ಲೈಂಗಿಕತೆ ಸ್ಪಷ್ಟವಾಗಿರಬೇಕು ಅಂದರೆ ಆತ ನಪುಂಸಕನಾಗಿರಬಾರದು, ಸಲಿಂಗಕಾಮಿ ಆಗಿರಬಾರದು, ವಿಕೃತಕಾಮಿಯೂ ಆಗಿರಬಾರದಂತೆ.
ರಾಜರ ಕಾಲದಲ್ಲಿ ರಾಜಕುಮಾರರಿಗೆ ಲೈಂಗಿಕ ಶಿಕ್ಷಣ ನೀಡಲು ಪಂಡಿತರನ್ನು, ಸಖಿಯರನ್ನು ನೇಮಿಸುತ್ತಿದ್ದರು. ಮದುವೆಗುವ ಮೊದಲೇ ಅವರಿಗೆ ಸಾಕಷ್ಟು ಲೈಂಗಿಕತೆಯ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಇತರರಿಗೆ ಆ ಅವಕಾಶ ಇರಲಿಲ್ಲ. ಹೀಗಾಗಿ ಆತ ತನ್ನ ಗೆಳೆಯರಿಂದಲೇ ಅದನ್ನೆಲ್ಲ ಕೇಳಿ ತಿಳಿದಿರಬೇಕಾಗುತ್ತಿತ್ತು. ಆಚಾರ್ಯ ಚಾಣಕ್ಯರು ಸಹ ʼಹಿರಿಯ ಗೆಳೆಯʼರಿಂದ ಸೂಕ್ತ ಲೈಂಗಿಕ ತಿಳುವಳಿಕೆ ಪಡೆಯಬೇಕು ಎಂದು ಹೇಳುತ್ತಾರೆ.
ವಿವಾಹ ಮಾಡಿಕೊಳ್ಳುವ ಯಾವುದೇ ಪುರುಷ ಮಾನಸಿಕವಾಗಿ ಅದಕ್ಕೆ ಸಜ್ಜಾಗಿರಬೇಕು. ಸಂಸಾರಕ್ಕೆ ಹೊಸ ಸದಸ್ಯೆ ಸೇರಿಸಲು, ಪತ್ನಿಯನ್ನ ತನ್ನ ಬದುಕಿನ ಪ್ರಮುಖ ಭಾಗವಾಗಿ ಮಾಡಿಕೊಳ್ಳಲು ಸಿದ್ಧವಾಗಿರಬೇಕು. ಹೆಂಡತಿಯನ್ನು ತನ್ನ ಸಮಾನ ವ್ಯಕ್ತಿಯಾಗಿ ಪರಿಗಣಿಸಬೇಕು. ಆಕೆಯ ಮೇಲೆ ಅಧಿಕಾರವನ್ನು ಹೇರಬಾರದು. ಆತ ವಿಕೃತಕಾಮಿ ಆಗಿರಬಾರದು. ಸಮಾಜ ಒಪ್ಪುವ ರೀತಿಯ ಲೈಂಗಿಕ ಸುಖವನ್ನು ಬಯಸುವವನಾಗಿರಬೇಕು. ಮದುವೆಗೆ ಮೊದಲೇ ವೇಶ್ಯೆಯರ ಬಳಿ ಹೋಗಿ ಲೈಂಗಿಕ ಕಾಯಿಲೆಗಳನ್ನು ಅಂಟಿಸಿಕೊಂಡಿರಬಾರದು.
ʼಉದ್ಯೋಗಂ ಪುರುಷ ಲಕ್ಷಣಂʼ ಎನ್ನುತ್ತಾನೆ ಚಾಣಕ್ಯ. ದುಡಿಯುವ ಸಾಮರ್ಥ್ಯವಿದ್ದು, ಕೆಲಸ ಮಾಡಿ ಹಣ ಸಂಪಾದಿಸುವವನನ್ನು ಮಾತ್ರ ಹೆಣ್ಣು ಇಷ್ಟಪಡುತ್ತಾಳೆ. ಮೂರು ಹೊತ್ತೂ ಓತ್ಲಾ ಹೊಡೆಯುವ, ʼಭೂಮಿಗೆ ಭಾರ ಕೂಳಿಗೆ ದಂಡʼ ಅನ್ನೋ ಗಾದೆ ಮಾತಿನಂತೆ ಇರುವ ಯಾರನ್ನೂ ಆಕೆ ಇಷ್ಟಪಡುವುದಿಲ್ಲ. ದುಡಿದು ತನ್ನನ್ನೂ ಮತ್ತು ಮಕ್ಕಳನ್ನೂ ಸಾಕುವ ಸಾಮರ್ಥ್ಯ ಆತನಲ್ಲಿ ಇದೆಯಾ ಅಂತಾ ಪ್ರತಿಯೊಬ್ಬ ಹೆಣ್ಣು ನೋಡುತ್ತಾಳೆ. ಇಂದು ಸ್ವತಃ ಹೆಣ್ಣುಮಕ್ಕಳೇ ದುಡಿಯುತ್ತಿದ್ದಾರೆ. ಆದರೆ ಗಂಡಿಗೆ ದುಡಿಯುವ ಸಾಮರ್ಥ್ಯ ಅತಿಮುಖ್ಯವಾಗಿರುತ್ತದೆ.
ಚಾಣಕ್ಯನ ಪ್ರಕಾರ ಪತಿ-ಪತ್ನಿಯರ ಸಂಬಂಧದಲ್ಲಿ ಸಮರ್ಪಣಾ ಭಾವ ಇರಬೇಕು. ಸಾಂಗತ್ಯದಲ್ಲಿ ಬದ್ಧತೆಯ ಭಾವನೆ ಇಲ್ಲದಿದ್ದರೆ ಸಂಪರ್ಕದ ಮಾಧುರ್ಯವು ಗಟ್ಟಿಯಾಗುವುದಿಲ್ಲ. ಗಂಡ-ಹೆಂಡತಿ ಬದ್ಧತೆಯ ಭಾವನೆ ಹೊಂದಿರುವಾಗ, ಅವರು ಪರಸ್ಪರರ ನ್ಯೂನತೆಗಳನ್ನು ಕಡೆಗಣಿಸುತ್ತಾರೆಂದು ಚಾಣಕ್ಯ ಹೇಳುತ್ತಾನೆ. ಅಂದರೆ ಶರಣಾಗತ ಆಗಲು ಪುರುಷ ಸಿದ್ಧನಿರಬೇಕು. ತನ್ನ ಪ್ರೀತಿಯನ್ನು ನಿವೇದಿಸುವಾಗ ಆತ ಆಕೆಯ ಮುಂದೆ ಮಂಡಿಯೂರಲೇಬೇಕು!
ಪುರುಷನ ಹಿನ್ನೆಲೆಯನ್ನೂ ಪ್ರತಿಯೊಬ್ಬ ಹೆಣ್ಣುಮಗಳು ಗಮನಿಸುತ್ತಾಳಂತೆ. ಅಂದರೆ ಆತನ ಮನೆತನಕ್ಕೆ ಗೌರವ ಇದೆಯಾ? ಆತನಿಗೆ ಎಷ್ಟು ಆಸ್ತಿ ಇದೆ? ಆತನ ತಂದೆ-ತಾಯಿ ಹೇಗಿರುತ್ತಾರೆ? ಅವರ ಮನೆ ಹೇಗಿದೆ? ಸಂಬಳ ಎಷ್ಟು? ಬಂಧುಗಳು ಹೇಗಿದ್ದಾರೆ? ಅವರ ಮನೆತನದ ಬಗ್ಗೆ ಸಮಾಜದಲ್ಲಿ ಗೌರವ ಇದೆಯೋ ಇಲ್ಲವೋ? ಈ ರೀತಿ ಎಲ್ಲವನ್ನೂ ಗಮನಿಸುತ್ತಾರಂತೆ.