ಆಸ್ಪತ್ರೆ ಬೆಡ್‌ ಮೇಲೆ ಕಾಲಿವುಡ್ ನಟ ಅಜಿತ್ ಪತ್ನಿ..! ಏನಾಯ್ತು ನಟಿ ಆರೋಗ್ಯಕ್ಕೆ.?

Wed, 03 Jul 2024-8:21 pm,

Shalini Ajith : ಕಾಲಿವುಡ್‌ ನಟ ಅಜಿತ್ ಪತ್ನಿ ಶಾಲಿನಿ ಆಸ್ಪತ್ರೆಗೆ ದಾಖಲಾಗಿದ್ದು, ಆಪರೇಷನ್‌ಗೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದೆ.. ಅಲ್ಲದೆ, ಪತ್ನಿಯನ್ನು ನೋಡಲು ತರಾತುರಿಯಲ್ಲಿ ಅಜರ್ ಬೈಜಾನ್ ನಿಂದ ನಟ ಚೆನ್ನೈಗೆ ವಾಪಸಾಗಿದ್ದು, ಸದ್ಯ ಆಸ್ಪತ್ರೆಯಲ್ಲಿರುವ ಶಾಲಿನಿ ಜೊತೆ ಅಜಿತ್ ಇರುವ ಫೋಟೋ ವೈರಲ್ ಆಗುತ್ತಿದೆ.

ತಮಿಳು ಚಿತ್ರರಂಗದಲ್ಲಿ ಟಾಪ್ ನಟ ಎನಿಸಿಕೊಂಡಿರುವ ಅಜಿತ್... ನಟನೆ, ಬೈಕ್ ರೇಸ್, ಕಾರ್ ರೇಸ್, ಶೂಟಿಂಗ್, ಮಾಡೆಲಿಂಗ್ ಹೀಗೆ ಸದಾ ಬ್ಯುಸಿಯಾಗಿದ್ದರೂ ಹೆಂಡತಿ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮರೆಯುವುದಿಲ್ಲ. ಸಧ್ಯ ಪತ್ನಿ ಶಾಲಿನಿ ಆಸ್ಪತ್ರೆಯ ಬೆಡ್‌ ಮೇಲೆ ಇರುವ ಫೊಟೋಸ್‌ ವೈರಲ್‌ ಆಗುತ್ತಿದೆ..

ಹುಟ್ಟುಹಬ್ಬದಂತಹ ಭಾವನಾತ್ಮಕ ದಿನಗಳಲ್ಲಿ ಮಕ್ಕಳ ಮತ್ತು ಹೆಂಡತಿಯ ಜೊತೆ ಫೋಟೋ ಹಂಚಿಕೊಳ್ಳುತ್ತಿದ್ದ ಅಜಿತ್‌, ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದರೂ ಸಹ ಕುಟುಂಬವನ್ನು ಭೇಟಿ ಮಾಡುತ್ತಾರೆ. ಇಲ್ಲದಿದ್ದಲ್ಲಿ ತಾನಿರುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಬಾರಿ ಅಜಿತ್ ತಮ್ಮ ಮಗಳ ಹುಟ್ಟುಹಬ್ಬವನ್ನು ದುಬೈನಲ್ಲಿ ಹಡಗಿನಲ್ಲಿ ಆಚರಿಸಿದ್ದರು.  

ಅಜಿತ್ ಕೆಲವು ದಿನಗಳ ಹಿಂದೆ ತಮ್ಮ ಮುಂಬರುವ ಸಿನಿಮಾದ ಚಿತ್ರೀಕರಣಕ್ಕಾಗಿ ಚೆನ್ನೈನಿಂದ ಅಜರ್‌ಬೈಜಾನ್‌ಗೆ ತೆರಳಿದ್ದರು. ಒಂದು ತಿಂಗಳ ಕಾಲ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಹೋದ ಕೂಡಲೇ ದಿಢೀರನೆ ಚೆನ್ನೈಗೆ ವಾಪಸಾಗಿದ್ದಾರೆ. ವೈಯಕ್ತಿಕ ಕಾರಣಕ್ಕಾಗಿ ಅಜಿತ್ ಚೆನ್ನೈಗೆ ಬಂದಿದ್ದಾರೆ ಎನ್ನಲಾಗಿದೆ.  

ಅಜಿತ್ ಬಂದ ಬಳಿಕ ಪತ್ನಿ ಹಠಾತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಪರೇಷನ್ ಮಾಡುವಂತೆ ಸೂಚಿಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ..  

ಆದರೆ ಅಜಿತ್‌ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ಮಾಹಿತಿ ಹೊರಬಿದ್ದಾಗಿನಿಂದಲೂ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಧ್ಯ ಅಜಿತ್ ಅವರು ಆಸ್ಪತ್ರೆಯಲ್ಲಿ ಶಾಲಿನಿ ಅವರ ಕೈ ಹಿಡಿದಿರುವ ಫೋಟೋ ವೈರಲ್ ಆಗಿದ್ದು, ಶಾಮಿಲಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link