`ಲೋಹಿತ್` ಎನ್ನುವ ಹೆಸರನ್ನು `ಪುನೀತ್` ಎಂದು ಬದಲಿಸಿದ್ದಕ್ಕೆ ಇತ್ತು ʼಈʼ ಬಲವಾದ ಕಾರಣ!
ಅಭಿಮಾನಿಗಳ ಅಚ್ಚು ಮೆಚ್ಚಿನ ಅಪ್ಪು ಅಲಿಯಾಸ್ ಪುನೀತ್ ರಾಜ್‌ಕುಮಾರ್ ಹುಟ್ಟಿದಾಗಿನಿಂದಲೇ ಜನಪ್ರಿಯತೆ ಪಡೆದುಕೊಂಡರು.. ಹಿಟ್ ನಟನ ಪುತ್ರನಾಗಿರುವುದರಿಂದ ಕನ್ನಡದ ಮೊದಲ ಸ್ಟಾರ್ ಕಿಡ್ ಪುನೀತ್ ಎಂದರೇ ಅತಿಶಯೋಕ್ತಿಯಲ್ಲ..
ಬಾಲ ಕಲಾವಿದನಾಗಿ ಮಿಂಚಿದ್ದ ಪುನೀತ್ ರಾಜ್‌ಕುಮಾರ್ ಅವರ ಮೊದಲ ಹೆಸರು ಲೋಹಿತ್.. ಅವರ ಮೊದಲ ಸಿನಿಮಾಗಳ ಟೈಟಲ್ ಕಾರ್ಡ್‌ಗಳಲ್ಲೆಲ್ಲ ಈ ಹೆಸರೇ ಇತ್ತು.. ಆದರೆ ಅವರ ಮೊದಲ ಸಿನಿಮಾ ಅಪ್ಪು ಬಂದಾಗ ಅವರ ಹೆಸರು ಪುನೀತ್ ಎಂದು ಬದಲಾಗಿತ್ತು.. ಹಾಗಾದರೇ ಈ ಹೆಸರನ್ನು ಬದಲಾಯಿಸಿದ್ದೇಕೆ? ಅಸಲಿ ಕಾರಣ ಏನು?
ಪುನೀತ್ ಅವರಿಗೆ ಲೋಹಿತ್ ಎಂದು ಹೆಸರು ಇಡಲು ಕಾರಣವೆಂದರೇ ಡಾ. ರಾಜ್‌ಕುಮಾರ್ ಅವರು ನಟಿಸಿದ್ದ 'ಸತ್ಯ ಹರಿಶ್ಚಂದ್ರ' ಸಿನಿಮಾ.. ಈ ಸಿನಿಮಾದಲ್ಲಿ ಸತ್ಯ ಹರಿಶ್ಚಂದ್ರನ ಮಗನ ಹೆಸರು ಲೋಹಿತಾಶ್ವ ಎಂದಾಗಿತ್ತ.. ಹೀಗಾಗಿ ಈ ಹೆಸರನ್ನೇ ಪುನೀತ್ ಅವರಿಗೆ ಇಡಲಾಗಿತ್ತು.. ಈ ಬಗ್ಗೆ ದೊಡ್ಮನೆ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದರು..
"ಲೋಹಿತ್ ಎನ್ನುವುದು ಅರ್ಧಾಯುಷ್ಯದ ಹೆಸರು.. ಪುನೀತ್ ಎಂದು ಮರುನಾಮಕರಣ ಮಾಡಿ ಇದರಿಂದ ಅವರಿಗೆ ಒಳ್ಳೆಯದಾಗುತ್ತೆ.. ಸಿನಿರಂಗದಲ್ಲೂ ಪ್ರಗತಿ ಸಾಧಿಸುತ್ತಾರೆ ಎಂದು ಹೇಳಿದ್ದರು.. ಅಲ್ಲಿಂದ ಇಲ್ಲಿಯವರೆಗೂ ಅಪ್ಪು ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ.. ಈ ಕಾರಣದಿಂದಾಗಿ ಅಪ್ಪು ಅವರ ಹೆಸರನ್ನು ಲೋಹಿತ್ ಬದಲಾಗಿ ಪುನೀತ್ ಎಂದು ಇಡಲಾಗಿದೆ.. " ಎಂದಿದ್ದರು..
ದೊಡ್ಮನೆಯ ಕಣ್ಣು, ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಬಾಲ್ಯದಿಂದಲೂ ದೊಡ್ಡ ಹೆಸರನ್ನು ಪಡೆದುಕೊಂಡು ಬೆಳೆದವರು.. ಬಾಲ ನಟನಾಗಿ ಬರೀ 10ನೇ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಸ್ವೀಕಾರ ಮಾಡಿ ಸಾಧನೆಗೈದವರು.. ಬಳಿಕ ತೆರೆಮರೆಯಲ್ಲಿ ಕೆಲಸ ಮಾಡಿ ಬಳಿಕ ಅಪ್ಪು ಸಿನಿಮಾದಿಂದ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಮಿಂಚಿನ ಹೆಜ್ಜೆ ಇಟ್ಟರು.. ಅಲ್ಲಿಂದ ಅವರಿಗೆ ಯಶಸ್ಸು ಕೈ ಹಿಡಿದಿತ್ತು..
ಕನ್ನಡದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅಪ್ಪು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಣಕ್ಕೂ ಇಳಿದಿದ್ದರು.. ಆದರೆ ವಿಧಿಯಾಟವೇ ಬೇರೆಯಾಗಿತ್ತು.. ಇಂದು ಅವರು ನಮ್ಮೊಂದಿಗಿಲ್ಲವಾದರೂ ಅವರ ನೆನಪು ಮಾತ್ರ ಅಜರಾಮರ..