ನಟ ದರ್ಶನ್‌ಗೆ ಸ್ಟ್ರೋಕ್‌..?! ಬೇಲ್‌ ವಿಚಾರಣೆಗೂ ಮುನ್ನ ಶಾಕಿಂಗ್‌ ಸುದ್ದಿ ಕೊಟ್ಟ ವೈದ್ಯರು!!

Tue, 29 Oct 2024-10:55 am,

Darshan Stroke: ನಟ ದರ್ಶನ್‌ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಸದ್ಯ ಬಳ್ಳಾರಿ ಜೈಲಿನಲ್ಲಿ ಇರುವ ದಾಸನ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆದ್ಯಾವಾಗ ಜೈಲಿನಿಂದ ಹೊರಬರುತ್ತಾರೆ ಎಂದು ಎದುರು ನೋಡುತ್ತಿದ್ದಾರೆ.   

ಬಳ್ಳಾರಿ ಜೈಲಿನಲ್ಲಿ ಶಿಕ್ಟೆ ಅನುಭಾವಿಸುತ್ತಿರುವ ದಾಸನಿಗೆ ತೀವ್ರವಾದ ಬೆನ್ನು ನೋವು ಕಾಡುತ್ತಿದೆ. ಇದಕ್ಕಾಗಿ ದಾಸ ಒಂದೆರೆಡುದಿನಗಳ ಹಿಂದೆ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿ ಚಿಕಿತ್ಸೆ ಕೂಡ ಪಡೆದುಕೊಂಡು ಹೊರಬಂದಿದ್ದಾರೆ.  

ಈ ನಡುವೆ ದರ್ಶನ್‌ ಅವರ ಬೇಲ್‌ ವಿಚಾರಣೆ ಇಂದು ನಡೆಯಲಿದೆ, ಒಂದು ಕಡೆ ದಾಸನಿಗೆ ತಮ್ಮ ಅಭಿಮಾನಿಗಳೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಳ್ಳುವ ಅವಕಾಶ ಸಿಗುತ್ತಾ ಅಥವಾ ಮತ್ತೆ ನಿರಾಶೆ ಎದುರಾಗುತ್ತಾ ಎನ್ನುವ ಕುತೂಹಲಕ್ಕೆ ಇಂದು ವಿಚಾರಣೆ ನಡೆದ ಮೇಲೆ ತೀರ್ಪು ಸಿಗಲಿದೆ.   

ಇದರ ಮಧ್ಯೆ ವೈದ್ಯರು ದರ್ಶನ್‌ ಅವರ ಆರೋಗ್ಯದ ಕುರಿತು ಶಾಕಿಂಗ್‌ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೌದು, ನಟ ದರ್ಶನ್‌ ಅವರಿಗೆ ಸ್ಟ್ರೋಕ್‌ ಹೊಡೆಯುವ ಸಾಧ್ಯತೆ ಇದೆ ಎಂದು ವಾದಗಳು ನಡೆಯುತ್ತಿದೆ.  

ಸದ್ಯ ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ ಅವರಿಗೆ, ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಲಾಗಿದೆ, ಈ ಟೆಸ್ಟ್‌ ಮಾಡಿದ ವೈದ್ಯರ ದರ್ಶನ್‌ ಅವರ ಆರೋಗ್ಯದ ಕುರಿತು ಮೂರು ಪ್ರಮುಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.   

ಸದ್ಯ ವೈದ್ಯರು ದರ್ಶನ್‌ ಅವರ ಕುಟುಂಬಸ್ಥರಿಗೆ ಹೇಳಿರುವುದೇನೆಂದರೆ, ದರ್ಶನ್‌ ಅವರಿಗೆ ನಂಬ್‌ನೆಸ್ ಇದೆ ಅವರಿಗೆ ಸರಿಯಾಗಿ ರಕ್ತಪರಿಚಲನೆ ಆಗುತ್ತಿಲ್ಲ. ಇದರಿಂದಾಗ ಅವರ ಕಿಡ್ನಿಗೂ ಸಹ ಸಮಸ್ಯೆಯಾಗಬಹುದು. ತಕ್ಷಣ ಸರ್ಜರಿ ಮಾಡಲೇಬೇಕು, ಇಲ್ಲವಾದಲ್ಲಿ ನಟ ದರ್ಶನ್‌ ಅವರ ಕಾಲಿಗೆ ಲಕ್ವಾ ಹೊಡೆಯಲಿದೆ ಎಂದು ವೈದ್ಯರು ಸೂಚಿಸಿದ್ದಾರೆ.  

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಿಗೆ ಬೇಲ್‌ ಸಿಗುತ್ತಾ ಅಥವಾ ಇಲ್ವಾ ಎನ್ನುವ ಚಿಂತೆ ಒಂದು ಕಡೆಯಾದರೆ, ತಮ್ಮ ದಾಸನ ಪರಿಸ್ಥಿತಿ ಹೀಗಾಯಿತಲ್ಲಾ ಎಂದು ಅವರ ಆರೋಗ್ಯ ಸಮಸ್ಯೆಯ ಕುರಿತು ಚಿಂತಿತರಾಗಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link