7 ಕೋಟಿಯ 2 ಮನೆ, 6 ಕೋಟಿಯ 2 ಕಾಂಪ್ಲೆಕ್ಸ್... ಅಂದು ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಆಗಿದ್ದ ದರ್ಶನ್ ಇಂದು ಎಷ್ಟು ಕೋಟಿ ಆಸ್ತಿ ʼಒಡೆಯʼ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಿನ್ನೆಲೆ ಅಂತಿಂಥದ್ದಲ್ಲ. ಇವರ ನಿಜವಾದ ಹೆಸರು ಹೇಮಂತ್ ಕುಮಾರ್. ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಬಳಿಕ ದರ್ಶನ್ ಎಂದು ಬದಲಾಯಿಸಿಕೊಂಡರು. ಇನ್ನು ಚಲನಚಿತ್ರ ನಿರ್ಮಾಪಕ ಮತ್ತು ವಿತರಕರಾಗಿಯೂ ದರ್ಶನ್ ಕೆಲಸ ಮಾಡಿದ್ದಾರೆ.
2017 ರಲ್ಲಿ, ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದ ದರ್ಶನ್ ಅವರು ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು 2006 ರಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯ ಮೊದಲ ಸಿನಿಮಾ ಜೊತೆ ಜೊತೆಯಲಿ.
ಇನ್ನು ದರ್ಶನ್ ಅದ್ಭುತ ಕಲಾವಿದ. ಇವರ ಅನಾಥರು (2007) ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (2012) ಸಿನಿಮಾದಲ್ಲಿ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಅವರ ಅಭಿನಯವು ಅವರಿಗೆ ಅತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿದೆ.
ದರ್ಶನ್ ಹುಟ್ಟಿದ್ದು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 16 ಫೆಬ್ರವರಿ 1977 ರಂದು. ನಟ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಯ ಪುತ್ರನಾಗಿ ಜನಿಸಿದರು.
ಒಂದು ಕಾಲದಲ್ಲಿ ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಆಗಿದ್ದ ದರ್ಶನ್ ಅದಾದ ಬಳಿಕ ಕೋಟ್ಯಾಧಿಪತಿಯಾಗಿ ಸ್ಯಾಂಡಲ್ವುಡ್ʼನಲ್ಲಿ ಮೆರೆದರು.
ಆರ್ ಆರ್ ನಗರದಲ್ಲಿ 6 ರಿಂದ 7 ಕೋಟಿ ಬೆಲೆಬಾಳುವ 2 ಮನೆಗಳನ್ನು ಹೊಂದಿದ್ದಾರಂತೆ. ಅಷ್ಟೇ ಅಲ್ಲದೆ, ಚಂದ್ರ ಲೇಔಟ್ʼನಲ್ಲಿ 5-6ಕೋಟಿ ಬೆಲೆ ಬಾಳುವ ಕಾಂಪ್ಲೆಕ್ಸ್ ಕೂಡ ದರ್ಶನ್ ಹೆಸರಿನಲ್ಲಿದೆ ಎನ್ನಲಾಗಿದೆ. ಇವೆಲ್ಲದ ಜೊತೆಗೆ 4-5 ಕೋಟಿ ಬೆಲೆ ಬಾಳುವ ನಾಲ್ಕು ಐಷಾರಾಮಿ ಕಾರುಗಳ ಒಡೆಯ ದರ್ಶನ್.
ಇದರ ಜೊತೆಗೆ ದರ್ಶನ್ ಅವರಿಗೆ ವಾಚ್ ಎಂದರೆ ಬಲು ಪ್ರೀತಿ. ಈ ಕಾರಣದಿಂದ ಕೋಟಿ ಕೋಟಿ ಬೆಲೆ ಬಾಳುವ ವಾಚುಗಳನ್ನು ಖರೀದಿಸಿದ್ದಾರೆ. ಇನ್ನು ಮೈಸೂರು- ನರಸೀಪುರ ರಸ್ತೆಯಲ್ಲಿ 5 ಕೋಟಿ ಮೌಲ್ಯದ ನಾಲ್ಕು ಎಕರೆ ಫಾರ್ಮ್ ಹೌಸ್ ಕೂಡಾ ದರ್ಶನ್ ಹೊಂದಿದ್ದಾರೆ ಎನ್ನಲಾಗಿದೆ.