ಜೈಲಾಧಿಕಾರಿಗಳಿಗೆ ದರ್ಶನ್ ಪತ್ರ... ಅಸಲಿಗೆ ಇದರಲ್ಲಿ ಇರೋದೇನು?
ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದು, ಇಲ್ಲಿನ ಊಟ ಸರಿ ಹೊಂದುತ್ತಿಲ್ಲ. ಈ ಹಿಂದೆ ಮನೆ ಊಟ ಹಾಗೂ ಹಾಸಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾ ಆಗಿತ್ತು.
ಆದರೆ ತಾಂತ್ರಿಕ ಕಾರಣ ನೀಡಿ ವಕೀಲರು ದರ್ಶನ್ ಅರ್ಜಿಯನ್ನು ಇತ್ತೀಚೆಗಷ್ಟೆ ಹಿಂಪಡೆದಿದ್ದರು. ದರ್ಶನ್ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಜೈಲು ಅಧಿಕಾರಿಗಳಿಗೆ ಬರೆದ ಪತ್ರವೊಂದು ಈಗ ವೈರಲ್ ಆಗುತ್ತಿದೆ.
ಜೈಲು ವೈದ್ಯಾಧಿಕಾರಿ, ಕಾರಾಗೃಹ ಎಡಿಜಿಪಿಗೆ ನಟ ದರ್ಶನ್ ಮನವಿ ಮಾಡಿಕೊಂಡು ಪತ್ರವೊಂದನ್ನು ಬರೆದಿದ್ದರು. ತಮಗೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ಕೊಡುವಂತೆ ಈ ಪತ್ರದ ಮೂಲಕ ಕೇಳಿಕೊಂಡಿದ್ದರು.
22/06/24 ರಂದು ಕೇಂದ್ರ ಕಾರಾಗೃಹಕ್ಕೆ ನಾನು ಬಂದಿರುವೆ. ನನ್ನ ಮನೆಯಲ್ಲಿದ್ದಾಗ ದಿನನಿತ್ಯ ವ್ಯಾಯಾಮ ಮಾಡುತ್ತಿದ್ದೆ. ಜೊತೆ ಪೌಷ್ಟಿಕ ಅಂದರೆ ಪ್ರೋಟಿನ್ ಯುಕ್ತ ಆಹಾರ ಸೇವಿಸುತ್ತಿದ್ದೆ ಎಂದು ದರ್ಶನ್ ಪತ್ರದಲ್ಲಿ ಬರೆದಿದ್ದರು ಎನ್ನಲಾಗಿದೆ.
ಕೇಂದ್ರ ಕಾರಾಗೃಹದಲ್ಲಿ ನನಗೆ ಬೇಕಾದ ಆಹಾರ ಕೊರತೆ ಇದೆ. ಇದರಿಂದ ನನ್ನ ದೇಹದ ತೂಕದಲ್ಲಿ ಸುಮಾರು ಹತ್ತು ಕೆ.ಜಿ ಯಷ್ಟು ಇಳಿಕೆ ಆಗಿದೆ ಎಂದು ದರ್ಶನ್ ಪತ್ರದಲ್ಲಿ ಬರೆದಿದ್ದರು ಎನ್ನಲಾಗಿದೆ.
ಆದ್ದರಿಂದ ದಯವಿಟ್ಟು, ನನಗೆ ಮನೆ ಊಟ ತರಿಸಲು ವ್ಯವಸ್ಥೆ ಮಾಡಿಕೊಡಲು ತಮ್ಮಲ್ಲಿ ಕೋರಿ ಕೊಳ್ಳುತ್ತೇನೆ ಎಂದು ಪತ್ರದಲ್ಲಿ ನಟ ದರ್ಶನ್ ಬರೆದಿದ್ದರು ಎನ್ನಲಾಗಿದೆ.