ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನಕ್ಕೆ ಹೊಸ ಟ್ವಿಸ್ಟ್..ಡಿವೋರ್ಸ್ ನಂತರ ಮತ್ತೆ ಒಂದಾಗಲಿದ್ದಾರೆ ಸ್ಟಾರ್ ಜೋಡಿ!
Actor Dhanush and Aishwarya: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಹಾಗೂ ಖ್ಯಾತ ನಟ ಧನುಷ್ ಅವರು ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು,ಇಬ್ಬರು ಗಂಡು ಮಕ್ಕಳು ಪುಟ್ಟ ಸುಂದರ ಸಂಾರ ಒಡೆದುಚೂರಾಗಿತ್ತು, ಇದೀಗ ಈ ಸುಂದರ ಸಂಸಾರ ಮತ್ತೆ ಒಂದಾಗುವ ಗಳಿಗೆ ಬಂದಂತಿದೆ, ಇದಕ್ಕೆ ನುಗುಣವಾಗಿ ಜೋಡಿ ಸುಳಿವು ಕೊಟ್ಟಿದ್ದಾರೆ.
ಕಾಲಿವುಡ್‌ನ ಸ್ಟಾರ್ ಹೀರೋ ಹಾಗೂ ರಜನಿಕಾಂತ್ ಅವರ ಪುತ್ರಿ ಐಶರ್ಯ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ, ಹಿರಿಯ ಪುತ್ರನ ಹೆಸರು ಲಿಂಗ, ಎರಡನೇ ಪುತ್ರ ಹೆಸರು ಯಾತ್ರಾ.
ಕಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಫೇಮ್, ಸಕ್ಸಸ್, ಸುಂದರ ಸಂಸಾರ, ಇಬ್ಬರು ಮಕ್ಕಳು ಈ ಪುಟ್ಟ ಗೂಡಿನ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ, ಈ ಜೋಡಿ 20ವರ್ಷಗಳ ಸುಂದರ ಸಂಸಾರಕ್ಕೆ ಇಂತಿ ಹಾಡಿದ್ದರು.
ಈ ಜೋಡಿ ತಮ್ಮ ವೈವಾಹಿಕ ಜೀವನವನ್ನು ಅಂತ್ಯಗೊಳಿಸಲು ಪರಸ್ಪರ ವಿಚ್ಛೇದನಕ್ಕಾಗಿ ಚೆನ್ನೈ ಕುಟುಂಬ ಕಲ್ಯಾಣ ನ್ಯಾಯಾಲಯದ ಮೆಟ್ಟಿಲೇರಿದ್ದರು. 2004 ರ ಮದುವೆಯಾಗಿದ್ದ ಈ ಜೋಡಿ, ತಮ್ಮ ಸಂಸಾರವನ್ನು ಅಂತ್ಯ ಗೊಳಿಸುವ ನಿರ್ಧಾರಕ್ಕೆ ಬಂದಿದ್ದರು.
ಇಬ್ಬರ ಮಕ್ಕಳಿಂದ ಬೇರಾಗಿ ಇರುವುದಕ್ಕೂ ಸಾಧ್ಯ ಇಲ್ಲ ಹಾಗಂತ, ಭಿನ್ನಾಬಿಪ್ರಾಯಗಳಿರುವ ಜಾಗದಲ್ಲಿ ಜೊತೆಯಾಗಿ ಬದುಕಲು ಕೂಡ ಸಾಧ್ಯವಿಲ್ಲದೆ ಈ ಜೋಡಿ ಗಟ್ಟಿ ಮನಸ್ಸು ಜೋಡಿ ವಿಚ್ಚೇದನ ಪಡೆಯುವ ನಿರ್ಧಾರಕ್ಕೆ ಬಂದಿತ್ತು.
ವಿಚ್ಛೇದನಕ್ಕಾಗಿ ದಂಪತಿ ಸಲ್ಲಿಸಿದ್ದ ಅರ್ಜಿಯು ಪ್ರಧಾನ ಕುಟುಂಬ ಕಲ್ಯಾಣ ನ್ಯಾಯಾಲಯದ ನ್ಯಾಯಾಧೀಶೆ ಸುಭಾದೇವಿ ಅವರ ಮುಂದೆ ವಿಚಾರಣೆಗೆ ಬಂದಿತು. ಆಗ ಈ ಪ್ರಕರಣದಲ್ಲಿ ನಟ ಧನುಷ್ ಮತ್ತು ಐಶ್ವರ್ಯಾ ಹಾಜರಾಗಿರಲಿಲ್ಲ. ನಂತರ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದರು. ಇದನ್ನು ನೋಡಿದರೆ ಇವರಿಬ್ಬರು ಮತ್ತೆ ಒಂದಾಗಲಿದ್ದಾರೆ, ಮುಂದಿನ ವರ್ಷ ರಜಿನಿ ಫಂಕ್ಷನ್ ಮಾಡಲಿದ್ದಾರೆ, ಅವರ ಸಮ್ಮಿಲನಕ್ಕೆ ನಾಂದಿಯಾಗಲಿದೆ ಎಂಬ ವರದಿಗಳು ಸದ್ಯ ಕೇಳಿ ಬರುತ್ತಿದೆ.
ಮತ್ತೊಂದೆಡೆ ಧನುಷ್ ಕೆಲವು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ಅವರ ಪೋಸ್ಟ್‌ಗಳನ್ನು ಲೈಕ ಮಾಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಇಬ್ಬರೂ ಮತ್ತೆ ಮದುವೆಯಾಗಲಿದ್ದಾರೆ ಹಾಗಾಗಿ ವಿಚ್ಛೇದನಕ್ಕಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿಲ್ಲ ಎಂದಿದ್ದಾರೆ.
ಎರಡು ದಶಕಗಳ ಕಾಲ ಒಟ್ಟಿಗೆ ಬಾಳಿದ ಈ ತಾರಾ ಜೋಡಿ ತಮ್ಮ ಮಕ್ಕಳ ಭವಿಷ್ಯ ಹಾಗೂ ಇಬ್ಬರಲ್ಲಿ ಹಿರಿಯರಾದ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ಮನಸ್ಸು ಬದಲಿಸಿದಂತಿದೆ. ಹಾಗಾಗಿಯೇ ವಿಚ್ಛೇದನ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.