Anchor Anushree: ನಟಿ, ಆಂಕರ್ ಅನುಶ್ರೀ ಲವ್ ಮಾಡ್ತಿದ್ದಾರಂತೆ ನಟ ಜಗ್ಗೇಶ್ ಸಹೋದರ!

Fri, 19 Jul 2024-4:44 pm,

ಆಂಕರ್‌ ಅನುಶ್ರೀ ಎಂದರೇ ಯಾರಿಗೆ ಇಷ್ಟವಿಲ್ಲ ಹೇಳಿ.. ಅಚ್ಚ ಕನ್ನಡದ ಚಟಪಟ ಮಾತಿನ ಮೂಲಕವೇ ಎಲ್ಲನ್ನು ಮೋಡಿ ಮಾಡುವ ಮುದ್ದು ಮುಖದ ಚೆಲುವೆ ಅನುಶ್ರೀ..   

ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋ ವೇದಿಕೆ ಮೇಲೆ ಕಾಣಿಸಿಕೊಂಡ ನಟ ಜಗ್ಗೇಶ್ ಅವರ ಎರಡನೇ ಸಹೋದರ ರಾಮಚಂದ್ರ ಅವರು ಅನುಶ್ರೀ ಅವರನ್ನು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ..   

ನಟ ಜಗ್ಗೇಶ್‌ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಛಾಪು ಮೂಡಿಸಿದ್ದಾರೆ.. ಇದೀಗ ಅವರು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಜಡ್ಜ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..   

ಈ ಕಾಮಿಡಿ ಕಿಲಾಡಿ ಶೋನ ಒಂದು ತಂಡದ ಓನರ್‌ ಆಗಿರುವ ಅನುಶ್ರೀ ಮೇಲೆ ನನಗೆ ಪ್ರೀತಿಯಾಗಿದೆ ಎಂದು ನಟ ಜಗ್ಗೇಶ್ ಅವರ ಸಹೋದರ ಹೇಳಿಕಕೊಂಡಿದ್ದಾರೆ..  

ಶೋನಲ್ಲಿ ಫ್ಯಾಮಿಲಿ ರೌಂಡ್‌ ಸಮಯದಲ್ಲಿ ಮಾತನಾಡುವಾಗ ನಟ ಜಗ್ಗೇಶ್ ಸಹೋದರ ರಾಮಚಂದ್ರನ ಕುರಿತಾಗಿ ಮಾತನಾಡಿದ್ದಾರೆ.. ಅದೇ ವೇಳೆ ರಾಮಚಂದ್ರ ಅವರು ದಿಢೀರನೇ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ.. ಬಳಿಕ ಅವರನ್ನು ಜಗ್ಗೇಶ್‌ ಪರಿಚಯಿಸಿದ್ದಾರೆ..  

ಹೀಗೆ ಸಹೋದರ ರಾಮಚಂದ್ರ ಅವರ ಬಗ್ಗೆ ಮಾತನಾಡುತ್ತಾ ಅವನಿಗೆ ಈಗಾಗಲೇ 3 ಜನರು ಹೆಂಡತಿಯರಿದ್ದಾರೆ.. ಅವರನ್ನು ಬಿಟ್ಟು ಬೇರೆ ಇಬ್ಬರನ್ನು ಮೇಂಟೇನ್‌ ಮಾಡುತ್ತಿದ್ದಾನೆ.. ಎಲ್ಲಿ ಹೋದಲ್ಲೆಲ್ಲಾ ಪರಿಚಯವಾದವರನ್ನು ಸಲಿಗೆ ಬೆಳೆದರೇ ಲವ್ ಮಾಡುತ್ತಾನೆ.. ಈಗ ಈ ವೇದಿಕೆ ಮೇಲೆ ಯಾರಿಗೆ ಲವ್‌ ಆಗಿದೆ ಎಂದು ಕೇಳಿದಾಗ ರಾಮಚಂದ್ರ ಅವರು ಆಂಕರ್ ಅನುಶ್ರೀ ಎಂದು ಹೇಳಿದ್ದಾರೆ. ಬಳಿಕ ಅನುಶ್ರೀ ಜೊತೆಗೆ ಡ್ಯಾನ್ಸ್‌ ಕೂಡಾ ಮಾಡಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link