4 ಸ್ಟಾರ್ ಹೀರೋಯಿನ್ಗಳ ಜೊತೆ ಅಫೇರ್.. 2 ಟಾಪ್ ನಟಿಯರ ಜೊತೆ ಮ್ಯಾರೇಜ್ ಆದ ಈ ಸ್ಟಾರ್ ಹೀರೋ ಯಾರು ಗೊತ್ತಾ..?
Kamal Haasan: ಸೌತ್ ಫಿಲಿಂ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಹವಾಗೆ ಏನೂ ಕಡಿಮೆ ಇಲ್ಲ. ಸಿನಿಮಾ ಇಂಡಸ್ಟ್ರಿಯನ್ನು ಆಳಿ ಮೆರೆದ ನಟರು ಅನೇಕರಿದ್ದಾರೆ, ಇವರಿಗೆ ಇಂದಿಗೂ ಕೂಡ ಸೆಪೆರೇಟ್ ಫ್ಯಾನ್ ಬೇಸ್ ಇದೆ.
ದಿಗ್ಗಜ ನಟರು ತಾವು ಪ್ರೀತಿಸಿದ ಹುಡುಗಿಯರನ್ನು ಮದುವೆಯಾಗಿ ಸುಂದರವಾದ ಸಂಸಾರವನ್ನು ನಡೆಸುತ್ತಿದ್ದಾರೆ, ಇನ್ನೂ ಕೆಲವರು ವಿವಾಹ ವಿಚ್ಛೇದನ ಎಂಬ ಸಂಸಾರ ಗಲಾಟೆಯಿಂದ ಹೊರಬಂದು ಒಂಟಿ ಜೀವನವನ್ನು ನಡೆಸುತ್ತಿದ್ದಾರೆ.
ಹೀಗೆ ಅತೀ ಚಿಕ್ಕ ವಯಸ್ಸಿಗೆ ಸಿನಿಮಾಗೆ ಎಂಟ್ರಿ ಕೊಟ್ಟು, ಸಿನಿಮಾ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿರುವ ನಟರೊಬ್ಬರು, 4 ನಟಿಯರ ಜೊತೆ ಅಫೇರ್ ಇಟ್ಟುಕೊಂಡಿದ್ದರು, ಅಷ್ಟೆ ಅಲ್ಲ, ಒಬ್ಬರಲ್ಲ ಇಬ್ಬರು ಸ್ಟಾರ್ ನಟಿಯರನ್ನು ಮದುವೆಯಾಗಿದ್ದರು, ಅವರು ಯಾರು ಗೊತ್ತಾ..?
ಸೌತ್ ಫಿಲಿಂ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ ಬಗ್ಗೆ ನಾವಿಂದು ಹೇಳಲು ಹೊರಟಿದ್ದೇವೆ.
ನಟ ಕಮಲ್ ಹಾಸನ್ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರು. ಎರಡು ಮದುವೆ, ಇಬ್ಬರು ಹೆಣ್ಣು ಮಕ್ಕಳು ಹೀಗೆ ಹಲವು ವೈಯಕ್ತಿಕ ಕಾರಣಗಳಿಂದ ನಟ ಸದಾ ಸುದ್ದಿಯಲ್ಲಿರುತ್ತಾರೆ.
ನಟ ಕಮಲ್ ಹಾಸನ್ ಅವರ ಆಕ್ಟಿಂಗ್ಗೆ ಸಖತ್ ಪ್ಯಾನ್ ಬೇಸ್ ಇದೆ ಅಂತಲೇ ಹೇಳಬಹುದು. ಈ ನಟ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಅಂದ್ರೆನೆ ಪ್ರೇಕ್ಷಕರಿಗೆ ಗೂಸ್ ಬಂಪ್ಸ್ ಪಕ್ಕಾ ಎಂದರ್ಥ.
1960 ಯಲ್ಲಿ ಕಮಲ್ ಹಾಸನ್ ಅವರು ಕಲತ್ತೂರ್ ಕಣ್ಣಮ್ಮ ಸಿನಿಮಾದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಅಂದಿನಿಂದ ಇಂದಿನವರೆಗೂ ನಟನ ಸಿನಿಮಾಗಳಿಗೆ ಕ್ರೇಜ್ ಏನೂ ಕಡಿಮೆಯಾಗಿಲ್ಲ.
ತಮ್ಮ ವೃತ್ತಿಯ ಕಾರಣದಿಂದ ಅಷ್ಟೆ ಅಲ್ಲದೆ ತಮ್ಮ ವೈಯಕ್ತಿಕ ಕಾರಣದಿಂದಲೂ ನಟ ಕಮಲ್ ಹಾಸನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟ ಮೊದಲನೆ ಭಾರಿಯದ್ದಾಗಿ ಜನಪ್ರಿಯ ಶಾಸ್ತ್ರೀಯ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ವಿವಾಹವಾದರು.
ಇಬ್ಬರು ಕೂಡ ಸುಖ ಸಂಸಾರ ನಡೆಸುತ್ತಿದ್ದರು, ಆದರೆ ನಂತರ ಮಸಸ್ಥಾಪಗಳ ಕಾರಣದಿಂದಾಗಿ ಈ ಜೋಡಿ 1998 ವಿಚ್ಛೇದನ ಪಡೆದುಕೊಂಡಿದ್ದರು.
ಮೊದಲ ಹೆಂಡತಿಯ ಜೊತೆಯ ವಿಚ್ಛೇದನ ಪಡೆದುಕೊಂಡು ನಂತರ ನಟ ಕಮಲ್ ಹಾಸನ್ ಅವರು ನಟಿ ಮತ್ತು ವಸ್ತ್ರ ವಿನ್ಯಾಸಕಿ ಸಾರಿಕಾ ಅವರನ್ನು ಮದುವೆಯಾದರು. ಈ ದಂಪತಿಗೆ ಶ್ರುತಿ ಮತ್ತು ಅಕ್ಷರ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಕಮಲ್ ಹಾಸನ್ ಅವರು ವಾಣಿ ಗಣಪತಿಯನ್ನು ಮದುವೆಯಾಗುವ ಮೊದಲು ನಟಿ ಶ್ರೀವಿದ್ಯಾ ಅವರನ್ನು ಪ್ರೀತಿಸುತ್ತಿದ್ದರು, ನಂತರ ಇವರಿಬ್ಬರ ಬ್ರೇಕಪ್ ಆದ ನಂತರ ಕಮಲ್ ಹಾಸನ್ ಅವರು ಸಾರಿಕಾ ಅವರನ್ನು ಮದುವೆಯಾಗಿದ್ದರು.
ಸಾರಿಕಾ ಅವರೊಂದಿಗೆ ಮದುವೆಯಾಗಿದ್ದ ಕಮಲ್ ಹಾಸನ್ ಅವರು ಸಾರಿಕಾ ಅವರೊಂದಿಗೆ ಇರುವಾಗಲೆ, ಸಾರಿಕಾ ಅವರ ಗೆಳತಿ ಗೌತಮಿ ಜತೆ ಅಫೇರ್ ಇಟ್ಟುಕೊಂಡಿದ್ದರು.
ಇದೀಗ ನಟ ಕಮಲ್ ಹಾಸನ್ ಅವರು ತನಗಿಂಲೂ 22 ವರ್ಷ ಚಿಕ್ಕವರಾಗಿರುವ ನಟಿ ಸಿಮ್ರನ್ ಅವರೊಂದಿಗೆ ಅಫೇರ್ ಇಟ್ಟುಕೊಂಡಿದ್ದಾರೆ ಎನ್ನು ವದಂತಿಗಳು ಹರಿದಾಡುತ್ತಿವೆ. ಆದರೆ ಸಿಮ್ರಾನ್ ಈ ಸುದ್ದಿಯನ್ನು ತಿರಸ್ಕರಿಸಿ ತನ್ನ ಸ್ನೇಹಿತೆಯನ್ನು ಮದುವೆಯಾಗಿದ್ದಾಳೆ. ಇಷ್ಟಲ್ಲಾ ಸುದ್ದಿಗಳ ನಡುವೆ ಕಮಲ್ ಹಾಸನ್ ಅವರು ಸದ್ಯ ಇದೀಗ ಒಂಟಿ ಜೀವನ ನಡೆಸುತ್ತಿದ್ದಾರೆ.