ಕ್ಯಾನ್ಸರ್ ಪೀಡಿತ ಮಕ್ಕಳ ಜೊತೆಗೆ ಆಟವಾಡಿದ ನಾಗ ಚೈತನ್ಯ!
ಟಾಲಿವುಡ್ ನಟ ನಾಗ ಚೈತನ್ಯ ಹೈದರಾಬಾದ್‌ನಲ್ಲಿ ಕ್ಯಾನ್ಸರ್ ರೋಗದಿಂದ ಹಿಂಸೆ ಅನುಭವಿಸುತ್ತಿರುವ ಮಕ್ಕಳಿರು ಸೇಂಟ್ ಜೂಡ್ಸ್‌ನ ಶಾಲೆಗೆ ಮಕ್ಕಳ ದಿನಾಚರಣೆಯೆಂದು ಭೇಟಿ ನೀಡಿದ್ದಾರೆ.
ತೆಲುಗು ನಟ ನಾಗ ಚೈತನ್ಯ ಕ್ಯಾನ್ಸರ್ ಪೀಡಿತ ಪುಟಾಣಿಗಳೊಂದಿಗೆ ಸಮಯ ಕಳೆಯಲು ತಮ್ಮ ಸಿನಿಮಾ ಶೂಟಿಂಗ್‌ಗಳಿಂದ ಬಿಡುವು ತೆಗೆದುಕೊಂಡು, ಮಕ್ಕಳ ಜೊತೆಗೆ ತಮ್ಮ ಅಮೂಲ್ಯ ಸಮಯವನ್ನು ಕಳೆದಿದ್ದಾರೆ.
ನಟ ನಾಗ ಚೈತನ್ಯ ಸೇಂಟ್ ಜೂಡ್ಸ್‌ನಲ್ಲಿರುವ ಮಕ್ಕಳನ್ನು ಮಾತನಾಡಿಸಿ ಹಾಗೆಯೇ ಅವರೊಂದಿಗೆ ಮ್ಯೂಸಿಕಲ್ ಛೇರ್ ಆಟ ಆಡಿದ್ದಾರೆ.
ಮಕ್ಕಳ ದಿನಚಾರಣೆಯಂದು ನಟ ಕ್ಯಾನ್ಸರ್ ಪೀಡಿತ ಪುಟಾಣಿಗಳೊಂದಿಗೆ ಸಮಯ ಕಳೆದಿದ್ದು, ಆ ದಿನ ಅವರಿರುವ ಜಾಗಕ್ಕೆ ಭೇಟಿದಾಗ ಮಕ್ಕಳನ್ನು ನೋಡಿಕೊಳ್ಳಲು ಅಗತ್ಯವಿರುವ ಸಾಮಗ್ರಿಗಳನ್ನು ನೀಡಿದ್ದಾರೆ.
ನಾಗ ಚೈತನ್ಯ ಸೇಂಟ್ ಜೂಡ್ಸ್‌ನಿಂದ ಹೊರಡುವ ಮೊದಲು ಅಲ್ಲಿ ಮಕ್ಕಳು ಮತ್ತು ಸಿಬ್ಬಂದಿಯೊಂದಿಗೆ ಫೋಟೋ ಕ್ಲಿಕ್‌ಗಳಿಗೆ ಪೋಸ್ ನೀಡಿದ್ದಾರೆ.
ನಟ ನಾಗ ಚೈತನ್ಯ ಮಕ್ಕಳ ಜೊತೆಗೆ ಮಾತನಾಡುತ್ತಿರುವುದು ಹಾಗೂ ಆಟವಾಡುತ್ತಾ, ಸಂತೋಷದಿಂದ ನಗುತ್ತಿರುವುದು ಸೇರಿದಂತೆ ಹಲವು ಫೋಟೋಗಳನ್ನುಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾಗ ಚೈತನ್ಯ ಶೀಘ್ರದಲ್ಲೇ ವಿಕ್ರಮ್ ಕುಮಾರ್ ನಿರ್ದೇಶನದ 'ಧೂತ' ಎಂಬ ವೆಬ್ ಸೀರಿಸ್ ಮೂಲಕ ಓಟಿಟಿಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ವೆಬ್ ಸೀರಿಸ್ ಡಿಸೆಂಬರ್ 1 ರಂದು ಸ್ಟ್ರೀಮಿಂಗ್ ಪ್ರಾರಂಭ ಮಾಡಲಿದೆ.