ಬಿಗ್‌ ಬಾಸ್‌ ಅರ್ಧಕ್ಕೆ ಕೈಬಿಟ್ಟ ಕಿಚ್ಚ ಸುದೀಪ್‌: ಇನ್ಮುಂದೆ ಈ ಸೀಸನ್‌ನ್ನು ಹೋಸ್ಟ್‌ ಮಾಡೋದು ಇವರೇ! ಕನ್ನಡದ ರಾಷ್ಟ್ರಪ್ರಶಸ್ತಿ ವಿಜೇತ ನಟನಿಗೆ ʼಬಿಗ್‌ʼ ಜವಾಬ್ದಾರಿ!?

Mon, 14 Oct 2024-3:39 pm,
Bigg Boss Host

ಕರುನಾಡ ಹೆಸರಾಂತ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ತನ್ನ ಹನ್ನೊಂದನೆಯ ಸೀಸನ್‌ ಅನ್ನು ನಡೆಸುತ್ತಿದೆ. ಭರ್ಜರಿ ರೆಸ್ಪಾನ್ಸ್‌ ಪಡೆದಿರುವ ಈ ಶೋ ನಲ್ಲಿ ಸದ್ಯ ಸ್ಪಷ್ಟವಾಗಿ, ಅಚ್ಚುಕಟ್ಟಾಗಿ ಕಿಚ್ಚ ಸುದೀಪ್‌ ಅವರು ಹೋಸ್ಟ್‌ ಮಾಡುತ್ತಿದ್ದಾರೆ.

Bigg Boss Host

ಕಳೆದ ದಿನ ವಾರದ ಪಂಚಾಯ್ತಿ ಮುಕ್ತಾಯಗೊಳಿಸಿದ ಬಳಿಕ ಶಾಕಿಂಗ್‌ ನಿರ್ಧಾರವನ್ನು ಕಿಚ್ಚ ಸುದೀಪ್‌ ಸೋಶಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ಇದು ತಮ್ಮ ಕೊನೆಯ ಸೀಸನ್‌ ಎಂದು ಉಲ್ಲೇಖಿಸಿದ್ದರು.  ಆ ಪೋಸ್ಟ್‌ ನೋಡಿದ್ದೇ ತಡ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.

 

Bigg Boss Host

"ಬಿಗ್ ಬಾಸ್‌ ಕನ್ನಡ ಸೀಸನ್‌ 11ಕ್ಕೆ ನೀವು ತೋರಿಸುತ್ತಿರುವ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಗೆ ನಮನ. ಇದು ಉತ್ತಮ 10+1 ವರ್ಷಗಳ ಪ್ರಯಾಣವಾಗಿದೆ. ಅಂತೆಯೇ ಇನ್ಮುಂದೆ ನಾನು ಏನು ಮಾಡಬೇಕೆಂದು ನಿರ್ಧರಿಸಲು ಇದು ಉತ್ತಮ ಸಮಯ. ಹೀಗಾಗಿ BBKಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ಕಲರ್ಸ್‌ ವಾಹಿನಿ ಮತ್ತು ಈ ಎಲ್ಲಾ ವರ್ಷಗಳಿಂದ ಬಿಗ್‌ ಬಾಸ್‌ ಅನ್ನು ಫಾಲೋ ಮಾಡಿಕೊಂಡು ಬಂದಿರುವ ಎಲ್ಲರೂ ಗೌರವಿಸುತ್ತಾರೆ ಎಂದು ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ. ಹಾಗೆಯೇ ನಾನು ಕೂಡ ನನ್ನ ಅತ್ಯುತ್ತಮವಾಗಿರುವುದನ್ನು ನೀಡಿ ಮನರಂಜಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

 

ಈ ಪೋಸ್ಟ್‌ ನೋಡಿದ ಅನೇಕರಲ್ಲಿ ಮೂಡಿದ ಪ್ರಶ್ನೆ ಏನೆಂದರೆ, ಕಿಚ್ಚ ಅವರು ಬಿಗ್‌ ಬಾಸ್‌ ಸೀಸನ್ 11ರ ಹೋಸ್ಟ್‌ ಆಗಿ ಮುಂದುವರೆಯುತ್ತಾರಾ? ಅಥವಾ ಸೀಸನ್‌ 11ರ ನಂತರ ಗುಡ್‌ ಬೈ ಹೇಳುತ್ತಾರಾ? ಎಂಬುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

 

ಕಿಚ್ಚ ಸದ್ಯ ಸೀಸನ್‌ 11ರಲ್ಲಿ ಹೋಸ್ಟ್‌ ಆಗಿ ಮುಂದುವರೆಯಲಿದ್ದಾರೆ. ಆದರೆ ಈ ಸೀಸನ್‌ ನಂತರ ಅವರು ತಮ್ಮ ವೈಯಕ್ತಿಕ ವಿಚಾರಕ್ಕೆ ಸಮಯ ಕೊಡಲಿರುವ ಕಾರಣಕ್ಕೆ ಗುಡ್‌ ಬೈ ಹೇಳಲಿದ್ದಾರೆ.

 

ಇನ್ನೊಂದೆಡೆ 10 ಸೀಸನ್‌ ಮಾತ್ರವೇ ಸುದೀಪ್‌ ಹೋಸ್ಟ್‌ ಮಾಡಲಿದ್ದಾರೆ ಎಂಬ ಮಾತು ಈ ಹಿಂದೆಯೇ ಕೇಳಿಬಂದಿತ್ತು. ಆದರೆ 11ರಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಇದೀಗ ಬಿಗ್‌ ಬಾಸ್‌ ಸೀಸನ್‌ 11 ಆರಂಭವಾಗಿ 2 ವಾರ ಕಳೆಯುವಷ್ಟರಲ್ಲಿ ಶಾಕಿಂಗ್‌ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

 

ಇದೆಲ್ಲದರ ಜೊತೆ, ಮುಂದೆ ಯಾರು ಬಿಗ್‌ ಬಾಸ್‌ ಹೋಸ್ಟ್‌ ಮಾಡಲಿದ್ದಾರೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಈ ರೇಸ್‌ನಲ್ಲಿ ಕನ್ನಡದ ಕೆಲ ನಟರಿದ್ದು, ರಮೇಶ್‌ ಅರವಿಂದ್‌, ಡಾ. ಶಿವರಾಜ್‌ ಕುಮಾರ್‌, ಗೋಲ್ಡನ್‌ ಸ್ಟಾರ್‌ ಗಣೇಶ್ ಹೆಸರು ಕೇಳಿಬರುತ್ತಿದೆ.

 

ಆದರೆ ಇವರೆಲ್ಲರನ್ನೂ ಮೀರಿದ ಹೆಸರು ಈಗಾಗಲೇ ಫಿಕ್ಸ್‌ ಆಗಿದೆ ಎನ್ನಲಾಗುತ್ತಿದೆ. 11ನೇ ಸೀಸನ್‌ಗೇ ಆ ನಟ ಹೋಸ್ಟ್‌ ಆಗಿ ಬರಬೇಕಿತ್ತು. ಆದರೆ ಪ್ರಮುಖ ಸಿನಿಮಾವೊಂದರ ಶೂಟಿಂಗ್‌ ಹಿನ್ನೆಲೆಯಲ್ಲಿ ಅಸಾಧ್ಯವಾಗಿತ್ತು ಎನ್ನಲಾಗಿದೆ. ಅಂದಹಾಗೆ ಆ ನಟ ಬೇರಾರು ಅಲ್ಲ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ರಿಷಬ್‌ ಶೆಟ್ಟಿ.

 

ಕಾಂತಾರಾ ಭಾಗ ಒಂದರ ಶೂಟಿಂಗ್‌ ಕಾರಣದಿಂದ 11 ನೇ ಸೀಸನ್‌ ಹೋಸ್ಟ್‌ ಮಾಡಲು ಕಷ್ಟವಾಗಿತ್ತು. ಇದೀಗ ಮುಂಬರುವ ಸೀಸನ್‌ನಲ್ಲಿ ಇವರೇ ನಿರೂಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ವಾಹಿನಿ ಏನು ಅಪ್ಡೇಟ್‌ ನೀಡುತ್ತೆ ಎಂಬುದನ್ನು ಕಾದುನೋಡಬೇಕಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link