Actor Shashikumar : ಬಿಜೆಪಿ ಸೇರಿದ ನಟ ಶಶಿಕುಮಾರ್

Thu, 03 Nov 2022-2:11 pm,

ಬಿಜೆಪಿ ಪಕ್ಷಕ್ಕೆ ನಾನು ಹೊಸಬನಲ್ಲ. ಜೆಡಿಯು‌ನಲ್ಲಿದ್ದಾಗ ಎನ್‌ಡಿಎ ಭಾಗವಾಗಿದ್ದೆ. ವಾಜಪೇಯಿ ವೇಳೆ ಅವರ ಜೊತೆ ಕೆಲಸ ಮಾಡಿದ್ದೇನೆ. ಕೆಲವೊಂದು ಏಳು ಬೀಳುಗಳು ಆಗುತ್ತವೆ ಎಂದು ನಟ ಶಶಿಕುಮಾರ್‌ ಹೇಳಿದರು.  

ಜೀವನದಲ್ಲಿ ಕೆಲವೊಂದು ಸುರುಳಿಗಳು ಬರುತ್ತವೆ. ಆಸೆ, ನೀರಿಕ್ಷೆಗಳಿಂದ ಕೆಲವು ತಪ್ಪುಗಳಾಗುತ್ತದೆ. ನಾನು ಎಸ್ ಟಿ ಸಮುದಾಯದವನು. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವ ಕೆಲಸ ಮಾಡ್ತೇನೆ ಎಂದು ನಟ ಶಶಿಕುಮಾರ್‌ ಹೇಳಿದರು.  

ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲಾ ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸ್ತೇನೆ. ನಾನು ಇಲ್ಲಿ ಟಿಕೆಟ್ ಕೇಳಿಲ್ಲ. ಪ್ರಧಾನಿ ಕಾರ್ಯವೈಖರಿ ಮೆಚ್ಚಿ ಬಂದಿದ್ದೇನೆ. SC, ST ಸಮುದಾಯಕ್ಕೆ ನೀಡಿದ ಕೊಡುಗೆ ನೋಡಿ ಬಂದೆ. ಬಹು ವರ್ಷದ ಮೀಸಲಾತಿ ಬೇಡಿಕೆ ಈಡೇರಿಸಿದ್ದಾರೆ ಎಂದು ತಿಳಿಸಿದರು.  

ಚಳ್ಳಕೆರೆ ಟಿಕೆಟ್ ವಿಚಾರವಾಗಿ ಮಾತನಾಡಿದ ನಟ ಶಶಿಕುಮಾರ್, ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನಾನು ಸನ್ಯಾಸಿಯಲ್ಲ, ಪಕ್ಷದ ತೀರ್ಮಾನವೇ ಅಂತಿಮ. ಪಕ್ಷ ಟಿಕೆಟ್ ಕೊಟ್ರೆ ಸ್ಪರ್ಧಿಸುವ ಉತ್ಸಾಹ ಇದೆ ಎಂದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link