BBK11: ʻಕೆಲವೊಮ್ಮೆ ಮೂವ್‌ಆನ್ ಆಗಬೇಕು..ʼ ಬಿಗ್‌ಬಾಸ್ ʻಗೆ ಕಿಚ್ಚ ಸುದೀಪ್ ಗುಡ್ ಬೈ !?
ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ನಟ ಸುದೀಪ್ ನಿರೂಪಣೆಯೇ ಬಿಗ್ ಬಾಸ್ ಶೋನ ಸೆಂಟರ್ ಆಫ್ ಅಟ್ರೆಕ್ಷನ್ ಆಗಿದೆ.
ಈ ಬಾರಿ ಬಿಗ್ ಬಾಸ್ ಅನ್ನು ಸುದೀಪ್ ನಡೆಸಿಕೊಡುವುದಿಲ್ಲವೇ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಖುದ್ದು ಸುದೀಪ್ ಉತ್ತರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸುದೀಪ್, ಈ ಬಗ್ಗೆ ಮಾತುಕತೆ ನಡೆಯುತ್ತಿದೆ. 10 ವರ್ಷ ಬಿಗ್ ಬಾಸ್ ನಡೆಸಿದ್ದೇನೆ. ಡೆಡಿಕೇಟ್ ಆಗಿದ್ದೆ. ಬಿಗ್ ಬಾಸ್ ಒಂದು ದೊಡ್ಡ ಶ್ರಮ. ಎಲ್ಲರಿಗೂ ನಾನು ನಡೆಸಿಕೊಟ್ಟಿದ್ದೇನೆ ಅನ್ನೋದಷ್ಟೇ ಗೊತ್ತು ಎಂದು ಹೇಳಿದ್ದಾರೆ.
ಮ್ಯಾಕ್ಸ್ ಸಿನಿಮಾ ಶೂಟಿಂಗ್ ರಾತ್ರಿ ನಡೆಯುತ್ತಿತ್ತು. ಬೆಳಿಗ್ಗೆ 3:30 ಕ್ಕೆ ಮುಗಿಯುತ್ತಿತ್ತು. ವಿಮಾನ ಲೇಟ್ ಆಗುತ್ತದೆ ಎಂದು ನನ್ನದೇ ದುಡ್ಡಲ್ಲಿ ಚಾಟೆರ್ಡ್ ಫ್ಲೈಟ್ ಬಾಡಿಗೆಗೆ ತೆಗೆದುಕೊಂಡಿದ್ದೆ. ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ನೇರವಾಗಿ ಮನೆಗೆ ಹೋಗಿ ನಂತರ ಬಿಗ್ ಬಾಸ್ ಸೆಟ್‌ಗೆ ಹೋಗುತ್ತಿದ್ದೆ ಎಂದು ಸುದೀಪ್ ತಿಳಿಸಿದ್ದಾರೆ.
ಬೆಳಿಗ್ಗೆ ಬಿಗ್ ಬಾಸ್ ಶೂಟಿಂಗ್ ಮಾಡಲು ನಿಂತರೇ ಮಧ್ಯಾಹ್ನದವರೆಗೆ ನಡೆಯುತ್ತಿತ್ತು. ಆ ಬಳಿಕ 2 ಗಂಟೆ ಗ್ಯಾಪ್ ತೆಗೆದುಕೊಳ್ಳುತ್ತಿದ್ದೆ. ನಂತರ ಮತ್ತೊಂದು ಎಪಿಸೋಡ್ ಶೂಟ್ ಮಾಡಬೇಕಿತ್ತು ಎಂದಿದ್ದಾರೆ.
ಇದೆಲ್ಲ ಮುಗಿಸಿ ರಾತ್ರೋರಾತ್ರಿ ಚೆನ್ನೈಗೆ ಹೋಗಿ, ಅಲ್ಲಿಂದ ಮಹಾಬಲಿಪುರಂಗೆ ಹೋಗುತ್ತಿದ್ದೆ. ಹೋದ ತಕ್ಷಣ ಶೂಟಿಂಗ್. ನನಗೆ ಸಿನಿಮಾಗೆ ನ್ಯಾಯ ಕೊಡಬೇಕೋ ಅಥವಾ ಬಿಗ್ ಬಾಸ್ ಶೋಗೆ ನ್ಯಾಯ ಕೊಡಬೇಕೋ ಎಂದು ಫೀಲ್ ಆಗುತ್ತಿತ್ತು ಎಂದು ಸುದೀಪ್ ತಿಳಿಸಿದ್ದಾರೆ.
ಬಿಗ್ ಬಾಸ್ ಶೋನ ಎಂಜಾಯ್ ಮಾಡಿದ್ದೇನೆ. ನನಗೆ ಬಿಗ್ ಬಾಸ್ ನಡೆಸಿಕೊಡುವ ಆಸಕ್ತಿಯೂ ಇದೆ. ಆದರೆ ಕೆಲವು ಬಾರಿ ಮೂವ್ ಆನ್ ಆಗಲೇಬೇಕು. ಇದರ ಅರ್ಥ ನನಗೆ ಮಾಡೋಕೆ ಇಂಟ್ರೆಸ್ಟಿಲ್ಲ.. ಅವರಿಗೆ ನಾನು ಬೇಡ ಎಂದು ಅಲ್ಲ ಎಂದು ಸುದೀಪ್ ತಿಳಿಸಿದ್ದಾರೆ.