ಸಿನಿಮಾ ಪೋಸ್ಟರ್‌ಗಾಗಿ ನಗ್ನ ಪೋಸ್‌ ಕೊಟ್ಟ ಸ್ಟಾರ್‌ ನಟ-ನಟಿಯರು

Sun, 03 Jul 2022-11:18 am,

ಅಮೀರ್ ಖಾನ್ ಅಭಿನಯದ ಪಿಕೆ ಚಿತ್ರ ಭಾರೀ ಹಿಟ್ ಆಗಿತ್ತು. ಈ ಚಿತ್ರದ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಅಮೀರ್ ಖಾನ್ ಸಂಪೂರ್ಣವಾಗಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರು ಕೈಯಲ್ಲಿ ಟೇಪ್ ರೆಕಾರ್ಡರ್ ಹಿಡಿದುಕೊಂಡು ಫೋಸ್‌ ಕೊಟ್ಟಿದ್ದರು. ಈ ಚಿತ್ರವು ಭಾರೀ ಚರ್ಚೆಗೆ ಕಾರಣವಾಗಿತ್ತು. 

ಕುರ್ಬಾನ್ ಬಾಲಿವುಡ್ ಹಿಟ್ ಚಿತ್ರವಾಗಿದ್ದು, ಇದರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಪೋಸ್ಟರ್‌ಗಾಗಿ ಸೈಫ್ ಮತ್ತು ಕರೀನಾ ಆ ಸಮಯದಲ್ಲಿ ನ್ಯೂಡ್ ಫೋಟೋಶೂಟ್ ಮಾಡುವ ಮೂಲಕ ಸಾಕಷ್ಟು ಸಂಚಲನ ಮೂಡಿಸಿದ್ದರು. ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸಿನಿಮಾ ಮಾಡಲಾಗಿದೆ.

ಪಂಜಾಬಿ ಮತ್ತು ಹಿಂದಿ ಚಿತ್ರಗಳಲ್ಲಿ ಸುರ್ವೀನ್ ಚಾವ್ಲಾ ಸಾಕಷ್ಟು ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ಟಿವಿ ಪರದೆ ಮೇಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಹೇಟ್ ಸ್ಟೋರಿ 2 ರಲ್ಲಿ ಸುರ್ವೀನ್ ಚಾವ್ಲಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ಚಿತ್ರದ ಪೋಸ್ಟರ್‌ನಲ್ಲಿ ಅವರ ನಗ್ನ ಚಿತ್ರದ ಪೋಸ್‌ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿತ್ತು.

ನೇಹಾ ಧೂಪಿಯಾ ಅವರು ಬಯಸದಿದ್ದರೂ ಬಿ ಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡಲು ಒತ್ತಾಯಿಸಿದ ಸಮಯವಿತ್ತು. ಅದರಲ್ಲಿ ಜೂಲಿ ಸಿನಿಮಾ ಸಹ ಒಂದು. ಈ ಚಿತ್ರದ ಪೋಸ್ಟರ್‌ನಲ್ಲಿ ನೇಹಾ ಧೂಪಿಯಾ ನಗ್ನವಾಗಿ ಕಾಣಿಸಿಕೊಂಡಿದ್ದು, ಜನರು ಅದನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು.   

ಜಿಸ್ಮ್ ಚಿತ್ರದಲ್ಲಿ ಬಿಪಾಶಾ ಬಸು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ ಸನ್ನಿ ಲಿಯೋನ್ ಅವರ ಬೋಲ್ಡ್ ಅವತಾರ ಸಹ ಈ ಸಿನಿಮಾದಲ್ಲಿದೆ. ಇನ್ನು ಈ ಸಿನಿಮಾದ ಪೋಸ್ಟರ್‌ನಲ್ಲಿ ಸನ್ನಿಯ ಬೋಲ್ಡ್ ಪೋಸ್‌ ಕಂಡುಬಂದಿದೆ. ಈ ಚಿತ್ರದಿಂದ ಸನ್ನಿ ಲಿಯೋನ್‌ಗೆ ಬಾಲಿವುಡ್‌ನಲ್ಲಿ ವಿಶೇಷ ಮನ್ನಣೆ ಸಿಕ್ಕಿತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link