Randeep Hooda Wedding Pics: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ರಣದೀಪ್ ಹೂಡಾ..!
ಬಾಲಿವುಡ್ ನಟ ರಣದೀಪ್ ಹೂಡಾ ಮತ್ತು ನಟಿ ಲಿನ್ ಲೈಶ್ರಾಮ್ ಅವರ ಮದುವೆ ಅದ್ಧೂರಿಯಾಗಿ ನಡೆದಿದೆ. ಮಣಿಪುರದ ಸಂಪ್ರದಾಯದಂತೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.
ಬಿಳಿ ಬಟ್ಟೆ ತೊಟ್ಟಿದ್ದ ರಣದೀಪ್ ಮಣಿಪುರದ ಸುಂದರ ವರನಂತೆ ಕಾಣುತ್ತಿದ್ದರು. ಅದರಂತೆ ಲಿನ್ ಸಾಂಪ್ರದಾಯಿಕ ಮಣಿಪುರಿ ವಧುವಿನಂತೆ ಸಂಪ್ರದಾಯಿಕ ಉಡುಗೆ ತೊಟ್ಟು ಮೈತುಂಬಾ ಒಡವೆ ಹಾಕಿಕೊಂಡು ಮಿಂಚಿದರು.
ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರಷ್ಟೇ ಈ ಜೋಡಿಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಗೂ ಮುನ್ನ ಬುಧವಾರ ರಂದೀಪ್ ಮತ್ತು ಲಿನ್ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಜೋಡಿ ಖುಷಿ ಖುಷಿಯಿಂದಲೇ ಫೋಟೋಗಳಿಗೆ ಪೋಸು ನೀಡಿದೆ.
ಇಂಫಾಲ್‌ನ ಚುಮ್ತಾಂಗ್ ಶಾನಪುಂಗ್ ರೆಸಾರ್ಟ್‌ನಲ್ಲಿ ರಣದೀಪ್ ಮತ್ತು ಲಿನ್ ಸಾಂಪ್ರದಾಯಿಕ ಮೈತೈ ವಿವಾಹ ಸಮಾರಂಭದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಸತಿಪತಿಗಳಾದರು. ಕೆಲವು ದಿನಗಳ ಹಿಂದಷ್ಟೇ ರಣದೀಪ್ ಅವರು ಲಿನ್ ಜೊತೆ ನವೆಂಬರ್ 29ರಂದು ಇಂಫಾಲ್‌ನಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದರು.
ರಣದೀಪ್ ಮತ್ತು ಲಿನ್ಗೆ ಬಾಲಿವುಡ್ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ಕುಟುಂಬಸ್ಥರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಶುಭ ಕೋರಿದ್ದಾರೆ. ಈ ಜೋಡಿಯ ಅದ್ದೂರಿ ಮದುವೆ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.