64 ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ 3 ನೇ ಬಾರಿ ಸಪ್ತಪದಿ ತುಳಿದ ಸ್ಟಾರ್ ಹೀರೋಯಿನ್!
ನಟಿ ಜಯಸುಧಾ ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದವರು. ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು.
ಸದ್ಯ ನಟಿ ಜಯಸುಧಾ ರಾಜಕಾರಣಿ ಆಗಿದ್ದಾರೆ. ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಅವರ ಸಹೋದರನನ್ನು ವಿವಾಹವಾದರು. ಈ ಮದುವೆಯು ವಿಚ್ಛೇದನದಲ್ಲಿ ಕೊನೆಗೊಂಡಿತು.
1985 ರಲ್ಲಿ ನಟಿ ಜಯಸುಧಾ ನಟ ಜೀತೇಂದ್ರ ಅವರ ಸೋದರಸಂಬಂಧಿ ನಿರ್ಮಾಪಕ ನಿತಿನ್ ಕಪೂರ್ ಅವರನ್ನು ಎರಡನೇ ಬಾರಿ ಮದುವೆಯಾದರು.
ಈ ದಂಪತಿಗೆ ನಿಹಾರ್ ಮತ್ತು ಶ್ರೇಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ಟಾಲಿವುಡ್ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.
ನಿತಿನ್ ಕಪೂರ್ 2017 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅಂದಿನಿಂದ ನಟಿ ಜಯಸುಧಾ ಒಂಟಿಯಾದರು.
ತೆಲುಗಿನ ಜನಪ್ರಿಯ ನಟಿ ಜಯಸುಧಾ ಅವರು ತಮ್ಮ 64 ನೇ ವಯಸ್ಸಿನಲ್ಲಿ ಮತ್ತೊಮ್ಮೆ ವಿವಾಹವಾಗಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.
ವಿದೇಶಿ ಉದ್ಯಮಿ ಜೊತೆ ನಟಿ ಜಯಸುಧಾ ಮೂರನೇ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ವದಂತಿಯ ಬಗ್ಗೆ ಜಯಸುಧಾ ಯಾವುದೇ ಪ್ರತಿಕ್ರಿಯೆ ನೀಡಲೇ ಇಲ್ಲ. ಹೀಗಾಗಿ ಇದು ಗಾಳಿ ಸುದ್ದಿ ಆಗಿಯೇ ಉಳಿದಿದೆ.