Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?
ನಟಿ ಆರತಿ ಆ ಕಾಲದ ಟಾಪ್ ಕನ್ನಡ ನಟಿಯರಲ್ಲಿ ಒಬ್ಬರಾದವರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಿನುಗು ತಾರೆ ಕಲ್ಪನಾ ಮುಂದೆ ಆರತಿಯನ್ನು ಚಿತ್ರರಂಗಕ್ಕೆ ಪರಿಚಯಿಸಿ ಸ್ಟಾರ್ ಪಟ್ಟ ತಂದುಕೊಟ್ಟರು.
ಈ ಸಮಯದಲ್ಲಿಯೇ ಆರತಿ ಮತ್ತು ಪುಟ್ಟಣ್ಣ ಕಣಗಾಲ್ ನಡುವೆ ಪ್ರೀತಿ ಹುಟ್ಟಿತು ಎಂಬ ಮಾತಿದೆ. 1975ರಲ್ಲಿ ಬಿಳಿ ಹೆಂಡ್ತಿ ಸಿನಿಮಾ ಶೂಟಿಂಗ್ ವೇಳೆ ಪುಟ್ಟಣ್ಣ ಕಣಗಾಲ್ ಮತ್ತು ಆರತಿ ವಿವಾಹವಾದರಂತೆ. ಮದುವೆಯಾಗಿ ಶೂಟಿಂಗ್ ಸೆಟ್ ಗೆ ತೆರಳಿದ್ದರಂತೆ.
ಪುಟ್ಟಣ್ಣ ಕಣಗಾಲ್ ಮತ್ತು ಆರತಿ ದಾಂಪತ್ಯ ಜೀವನವೂ ಸುಖವಾಗಿತ್ತು. ಇವರ ಪ್ರೀತಿಯ ಫಲವಾಗಿ ಯಶಸ್ವಿನಿ ಎಂಬ ಮಗಳು ಜನಿಸಿದಳು. ಆದರೆ ಕಾಲ ಕಳೆದಂತೆ ಮನಸ್ತಾಪ ಶುರುವಾಯಿತು.
ಪುಟ್ಟಣ್ಣ ಕಣಗಾಲ್ ಕೋಪದಿಂದ ಸಂಬಂಧದಲ್ಲಿ ಬಿರುಕು ಮೂಡಿತು. ವೈವಾಹಿಕ ಜೀವನ ಹದಗೆಟ್ಟ ಸಮಯದಲ್ಲೇ ಆರತಿಗೆ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ, ಕಾರ್ಮಿಕ, ಶಿಕ್ಷಣ ಸಚಿವರಾಗಿದ್ದ ಎಂ.ರಘುಪತಿ ಪರಿಚಯವಾಯಿತು.
ಆರತಿ ಮತ್ತು ಸಚಿವ ಎಂ.ರಘುಪತಿ ನಡುವೆ ಒಳ್ಳೆಯ ಭಾಂದವ್ಯ ಬೆಳೆಯಿತು. ಆರತಿ ಮತ್ತು ಎಂ.ರಘುಪತಿ ನಡುವಿನ ಅತಿಯಾದ ಸ್ನೇಹದಿಂದ ಪುಟ್ಟಣ್ಣ ಕಣಗಾಲ್ ಮನನೊಂದು ಖಿನ್ನತೆಗೆ ಜಾರಿದರು. ಸಿನಿಮಾಗಳಿಂದ ದೂರವಾಗಿ, ಹಾರ್ಟ್ ಅಟ್ಯಾಕ್ ನಿಂದ ಪುಟ್ಟಣ್ಣ ಕಣಗಾಲ್ ಸಾವನ್ನಪ್ಪಿದ್ದರು.
ಸಚಿವ ಎಂ.ರಘುಪತಿ ಅವರು ಆರತಿ ಅವರನ್ನು ಎಂಎಲ್‌ಸಿ ಮಾಡಿದರು. ಜೆಪಿ ನಗರದಲ್ಲಿ ಬಿಡಿಎ ಕಡೆಯಿಂದ ದೊಡ್ಡ ಬಂಗಲೆ ದೊರೆಯಿತು. ಕಾರ್ಯಕ್ರಮವೊಂದರಲ್ಲಿ ಆರತಿಯ ಕೈ ಹಿಡಿದು ಎಂ.ರಘುಪತಿ ಕಾಣಿಸಿಕೊಳ್ಳುತ್ತಾರೆ. ಇಬ್ಬರು ಮದುವೆಯಾಗಿದ್ದಾರೆ ಎಂದು ವದಂತಿ ಹಬ್ಬುತ್ತದೆ.
ಕೆಲದಿನಗಳ ಬಳಿಕ ಎಂ.ರಘುಪತಿ ಮತ್ತು ಆರತಿ ನಡುವೆ ವೈಮನಸ್ಸು ಶುರುವಾಗುತ್ತದೆ. ಆರತಿ ಸಿನಿರಂಗದಿಂದಲೂ ದೂರ ಸರಿಯುತ್ತಾರೆ. ಕೊನೆಗೆ ಎಂ ರಘುಪತಿ ಕೂಡ ದೂರವಾಗುತ್ತಾರೆ.