ನಟಿ ಐಶ್ವರ್ಯಾರಂತೆ ಮಗಳು ಆರಾಧ್ಯ ಅವರ ಕಣ್ಣು ನೀಲಿ ಇಲ್ಲ! ಇದಕ್ಕೆ ಕಾರಣವೇನು ಗೊತ್ತೇ?
ಆರಾಧ್ಯ ತಾಯಿ ಐಶ್ವರ್ಯಾ ಅವರಿಂದ ಜೀನ್‌ಗಳ ಮೂಲಕ ಅನೇಕ ಸೌಂದರ್ಯ ವೈಶಿಷ್ಟ್ಯಗಳನ್ನು ಪಡೆದಿದ್ದಾರೆ. ಆದರೆ ಐಶ್ವರ್ಯಾಳಂತೆ ಕಣ್ಣಿನ ಬಣ್ಣ ಆಕೆಗೆ ಸಿಗಲಿಲ್ಲ. ಇದಕ್ಕೆ ಕಾರಣವೇನು? ಐಶ್ವರ್ಯಾ ರೈ ಕಣ್ಣುಗಳು ನೀಲಿ ಏಕೆ? ಅಲ್ಲದೆ ಆಕೆಯ ಮಗಳು ಆರಾಧ್ಯ ಅವರ ಕಣ್ಣುಗಳು ಕಡು ಕಂದು, ಕಪ್ಪು ಏಕೆ?
ಐಶ್ವರ್ಯಾಗೆ ನೀಲಿ ಕಣ್ಣುಗಳಿವೆ. ಆದರೆ ಆರಾಧ್ಯ ಅವರ ಕಣ್ಣಿನ ಬಣ್ಣ ಕಪ್ಪು. ಒಂದು ಪ್ರಮುಖ ಕಾರಣವೆಂದರೆ ಅವರು ಜೆನೆಟಿಕ್ಸ್ ಮೂಲಕ ತನ್ನ ತಾಯಿಯ ಕಣ್ಣಿನ ಬಣ್ಣವನ್ನು ಆನುವಂಶಿಕವಾಗಿ ಪಡೆಯಲಿಲ್ಲ.
ನೀಲಿ ಕಣ್ಣುಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಜೈವಿಕ ಪೋಷಕರು ನೀಲಿ ಕಣ್ಣುಗಳನ್ನು ಹೊಂದಿದ್ದರೂ ಸಹ, ಮಕ್ಕಳು ನೀಲಿ ಕಣ್ಣುಗಳನ್ನು ಹೊಂದುವ ಸಾಧ್ಯತೆ ಕೇವಲ 50 ಪ್ರತಿಶತದಷ್ಟು ಮಾತ್ರ.
ನೀಲಿ ಕಣ್ಣುಗಳ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿವೆ. ಕಣ್ಣಿನ ಬಣ್ಣವು ಮೆಲನಿನ್ ವರ್ಣದ್ರವ್ಯವನ್ನು ಅವಲಂಬಿಸಿರುತ್ತದೆ. ಮೆಲನಿನ್ ಪಿಗ್ಮೆಂಟ್ ಕಣ್ಣಿನಲ್ಲಿ ಇರುತ್ತದೆ.
ಅನೇಕ ಪೋಷಕರು ಕಪ್ಪು ಕಣ್ಣಿನ ಬಣ್ಣವನ್ನು ಹೊಂದಿದ್ದಾರೆ. ಆದರೆ ಅವರ ಮಕ್ಕಳ ಕಣ್ಣುಗಳು ನೀಲಿ. ಇದೆಲ್ಲವೂ ಮೆಲನಿನ್ ವರ್ಣದ್ರವ್ಯದಿಂದಾಗಿ.
ನೀಲಿ ಕಣ್ಣುಗಳಿದ್ದರೆ ಮೆಲನಿನ್ ಕೊರತೆ ಎಂದು ಅರ್ಥವಲ್ಲ. ಆದರೆ ಐರಿಸ್ ಎನ್ನುವುದು ನಿಮ್ಮ ಕಣ್ಣಿನ ಒಂದು ಭಾಗವಾಗಿದ್ದು, ಕಡಿಮೆ ಮೆಲನಿನ್ ಅನ್ನು ಹೊಂದಿರುತ್ತದೆ.