ಸಲ್ಮಾನ್ ಖಾನ್ ಗೂ ಮುನ್ನ ʼಈʼ ವ್ಯಕ್ತಿಯನ್ನು ಹುಚ್ಚಳಂತೆ ಪ್ರೀತಿಸಿ ಮೋಸ ಮಾಡಿದ್ದ ಐಶ್ವರ್ಯಾ ರೈ! ಸತ್ಯ ಬಯಲಾಗಿದ್ದು ಹೀಗೆ!
![](https://kannada.cdn.zeenews.com/kannada/sites/default/files/2024/08/31/438928-abhi-aish-2.jpg?im=FitAndFill=(500,286))
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ಸಂಬಂಧವು ನಿಜವಾಗಿಯೂ ಚೆನ್ನಾಗಿದೆಯೇ ಎನ್ನುವುದರ ಬಗ್ಗೆ ಹಲವಾರು ಚರ್ಚೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.. ಇದೆಲ್ಲದರ ನಡುವೆ ಐಶ್ವರ್ಯಾ ರೈ ಅವರ ಮದುವೆಗೂ ಮುನ್ನ ಲವ್ ಅಫೇರ್‌ಗಳ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
![](https://kannada.cdn.zeenews.com/kannada/sites/default/files/2024/08/31/438927-aishwaryarai.jpg?im=FitAndFill=(500,286))
ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೊದಲು ಐಶ್ವರ್ಯಾ ರೈ ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಅವರೊಂದಿಗೆ ಕೆಲವು ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ..
![](https://kannada.cdn.zeenews.com/kannada/sites/default/files/2024/08/31/438926-aishwarya-rai-shrima-rai.jpg?im=FitAndFill=(500,286))
ಸಲ್ಮಾನ್ ಖಾನ್ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ ನಂತರ, ಐಶ್ವರ್ಯಾ ರೈ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟ್ ಮಾಡಿದರು. ಆದರೆ, ನಂತರ ಇಬ್ಬರೂ ಬೇರ್ಪಟ್ಟರು. ಆದರೆ ಸಲ್ಮಾನ್ ಖಾನ್ ಗಿಂತ ಮೊದಲು ಮಾಜಿ ವಿಶ್ವ ಸುಂದರಿ ವಿಶೇಷ ವ್ಯಕ್ತಿಯನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದರಂತೆ... ಆದರೆ ಕೆಲವೇ ಜನರಿಗೆ ಇದರ ಬಗ್ಗೆ ತಿಳಿದಿದೆ.
ಮಾಹಿತಿಯ ಪ್ರಕಾರ, ಬಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭ ಮಾಡುವ ಮೊದಲು, ಐಶ್ವರ್ಯಾ ರೈ ಮಾಡೆಲ್ ಆಗಿ ಕೆಲಸ ಮಾಡಿದರು. ಆ ಸಮಯದಲ್ಲಿ ಐಶ್ವರ್ಯಾ ರೈ ತನ್ನ ಸ್ನೇಹಿತ ರಾಜೀವ್ ಮೂಲಚಂದನಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದರಂತೆ..
ವಾಸ್ತವವಾಗಿ ಐಶ್ವರ್ಯಾ ರೈ ಮತ್ತು ರಾಜೀವ್ ಮಾಡೆಲಿಂಗ್ ಸಮಯದಲ್ಲಿ ಸ್ನೇಹಿತರಾದರು.. ಬಳಿಕ ಅವರ ಪ್ರೀತಿ ಅರಳಿತು. ಐಶ್ವರ್ಯಾ ರೈ ಅವರ ಮಾಡೆಲಿಂಗ್ ದಿನಗಳಿಂದಲೂ ಬಾಲಿವುಡ್‌ನಲ್ಲಿ ಬೇಡಿಕೆಯಿತ್ತು.. ಐಶ್ವರ್ಯಾ ರೈ ಬಾಲಿವುಡ್ ನಟ ಅಮೀರ್ ಖಾನ್ ಜೊತೆ ಕೋಕ್ ಜಾಹೀರಾತಿನಲ್ಲಿ ಕಾಣಿಸಿಕೊಂಡರು..
ಕೆಲವೇ ಸಮಯದಲ್ಲಿ ಅವರು ಪ್ರೇಕ್ಷಕರ ಹೃದಯದಲ್ಲಿ ತಮ್ಮ ಸ್ಥಾನವನ್ನು ಪಡೆದರು... ವಿಶ್ವ ಸುಂದರಿ ಪಟ್ಟವನ್ನು ಗೆದ್ದ ನಂತರ, ಐಶ್ವರ್ಯಾ ರೈಗೆ ಬಾಲಿವುಡ್‌ನಿಂದ ಸಾಕಷ್ಟು ಆಫರ್‌ಗಳು ಬರಲು ಪ್ರಾರಂಭಿಸಿದವು ಮತ್ತು ಅಂತಿಮವಾಗಿ 1997 ರಲ್ಲಿ ಅವರು ಬಾಬಿ ಡಿಯೋಲ್ ಅವರೊಂದಿಗೆ 'ಔರ್ ಪ್ಯಾರ್ ಹೋ ಗಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ತಮ್ಮ ಮಾಡೆಲಿಂಗ್ ದಿನಗಳಲ್ಲಿ, ಐಶ್ವರ್ಯಾ ರೈ ಮಾಡೆಲ್ ರಾಜೀವ್ ಮೂಲಚಂದಾನಿ ಅವರನ್ನು ಪ್ರೀತಿಸುತ್ತಿದ್ದರು. ಆ ದಿನಗಳಲ್ಲಿ, ರಾಜೀವ್ ಮೂಲಚಂದಾನಿ ಜನಪ್ರಿಯ ಭಾರತೀಯ ಸೂಪರ್ ಮಾಡೆಲ್ ಆಗಿದ್ದರು. ಇಬ್ಬರೂ ತಮ್ಮ ಮಾಡೆಲಿಂಗ್ ವೃತ್ತಿಜೀವನವನ್ನು ಬಹುತೇಕ ಒಟ್ಟಿಗೆ ಪ್ರಾರಂಭಿಸಿದರು ಮತ್ತು ಶೀಘ್ರದಲ್ಲೇ ಐಶ್ವರ್ಯಾ ಸಿನಿರಂಗ ಪ್ರವೇಶಿಸಿದರು..
ಐಶ್ವರ್ಯಾ ತನ್ನ ಯಶಸ್ಸಿನ ದೃಷ್ಟಿಯಿಂದ ರಾಜೀವ್ ಜೊತೆಗಿನ ಸಂಪರ್ಕವನ್ನು ಮುರಿದುಕೊಂಡಿದ್ದಾಳೆ ಎಂದು ಮಾಧ್ಯಮ ವರದಿಗಳಲ್ಲಿ ವರದಿಯಾಗಿದೆ. ಇದಾದ ನಂತರ ಸಲ್ಮಾನ್ ಖಾನ್ ಜೊತೆ ಐಶ್ವರ್ಯಾ ರೈ ಹೆಸರು ಕೇಳಿ ಬರತೊಡಗಿತು...
ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಐಶ್ವರ್ಯಾ ರೈ ರಾಜೀವ್‌ನಿಂದ ದೂರವಾಗಿದ್ದರು. ಐಶ್ವರ್ಯಾ ರೈ ರಾಜೀವ್ ಅವರನ್ನು ಪ್ರೀತಿಸಿ ಮೋಸ ಮಾಡಿದ್ದಾರೆ ಮತ್ತು ನಂತರ ನಟಿ ಅಭಿಷೇಕ್ ಬಚ್ಚನ್ ಅವರನ್ನು ತನ್ನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅನೇಕ ವರದಿಗಳು ಹೇಳಿವೆ.