Virat- Anushka: ಮುರಿದು ಬೀಳುವತ್ತ 16 ವರ್ಷಗಳ ಅಪೂರ್ವ `ಸಂಬಂಧ`! ಅಕಾಯ್ ಜನನದ ಬೆನ್ನಲ್ಲೇ ಅನುಷ್ಕಾ ಮಹತ್ವದ ನಿರ್ಧಾರ
)
ಪವರ್ ಕಪಲ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇದೀಗ ಇಬ್ಬರು ಮಕ್ಕಳ ಪೋಷಕರು. ಈ ಸಂದರ್ಭಲ್ಲಿ ಅವರ ಜೀವನದಲ್ಲಿ ಆಗುವ ಮಹತ್ತರವಾದ ಬದಲಾವಣೆಯನ್ನು ಹೇಳಬೇಕಾಗಿಲ್ಲ. ಸಾಮಾನ್ಯ ಜನರ ಬದುಕಿನಲ್ಲಿ ನಡೆಯುವಂತೆಯೇ ಇವರ ಬಾಳಲ್ಲೂ ಏರುಪೇರುಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ
)
ವಿರುಷ್ಕಾ ಮಗಳು ವಾಮಿಕಾ ಕೊಹ್ಲಿ ಹುಟ್ಟಿದ್ದು ಭಾರತದಲ್ಲಿ. ಆದರೆ, ಅಕಾಯ್’ಗೆ ಜನ್ಮ ಲಂಡನ್’ನಲ್ಲಿ. ಪ್ರಸ್ತುತ ವಿರಾಟ್ ಮತ್ತು ಅನುಷ್ಕಾ ಅಲ್ಲಿಯೇ ವಾಸಿಸುತ್ತಿದ್ದಾರೆ. ಈ ನಡುವೆ ಅನುಷ್ಕಾ ಶರ್ಮಾ 16 ವರ್ಷಗಳ ಸಂಬಂಧ ಮುರಿದು ಮುನ್ನಡೆಯುವತ್ತ ಯೋಚಿಸುತ್ತಾರೆ ಎಂದು ಹೇಳಲಾಗುತ್ತಿದೆ.
)
ಅನುಷ್ಕಾ 2008 ರಲ್ಲಿ ‘ರಬ್ ನೇ ಬನಾ ದಿ ಜೋಡಿ’ ಚಿತ್ರದ ಮೂಲಕ ಬಾಲಿವುಡ್’ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ 16 ವರ್ಷಗಳು ಕಳೆದಿವೆ. ಮುಂದೆ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಮಧ್ಯೆ ಅನುಷ್ಕಾ ಅವರ ಹಳೆಯ ಸಂದರ್ಶನದ ತುಣುಕುಗಳು ವೈರಲ್ ಆಗಿವೆ. ಆ ಸಂದರ್ಶನದಲ್ಲಿ ತಾನು ಹೆಚ್ಚು ಕೆಲಸ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಅಂದಿನಿಂದ, ಅನುಷ್ಕಾ ಮತ್ತು ಬಾಲಿವುಡ್ ನಡುವಿನ 16 ವರ್ಷಗಳ ಸಂಬಂಧವನ್ನು ಮುರಿದು ಬೀಳುತ್ತದೆ ಎಂಬ ಊಹಾಪೋಹಗಳು ಇದ್ದವು. ಅಷ್ಟೇ ಅಲ್ಲದೆ, ವಾಮಿಕಾ ಜನನದ ನಂತರವೂ ಈ ಬಗ್ಗೆ ಭಾರಿ ಸುದ್ದಿಯಾಗಿತ್ತು.
ಅನುಷ್ಕಾ ನಟನೆಯಿಂದ ಹಿಂದೆ ಸರಿಯಬಹುದು ಎಂಬ ಮಾತು ಕೇಳಿಬರುತ್ತಿದೆ. ಮಕ್ಕಳು ಮತ್ತು ಪತಿಯೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಅನುಷ್ಕಾ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ.
ಇನ್ನೊಂದೆಡೆ ವಿರಾಟ್ ಕೊಹ್ಲಿ ಜೀವನವೂ ಸಾಕಷ್ಟು ಬದಲಾಗಿದೆ. ಈಗಾಗಲೇ ತಮ್ಮ ಪತ್ನಿ ಮತ್ತು ಕುಟುಂಬಕ್ಕೆ ಸಮಯ ನೀಡುವ ಉದ್ದೇಶದಿಂದ ಕ್ರಿಕೆಟ್’ನಿಂದ ಕೊಂಚ ದೂರ ಉಳಿದಿದ್ದಾರೆ ಕೊಹ್ಲಿ.