ಟೀಂ ಇಂಡಿಯಾದ ಈ ಕ್ರಿಕೆಟಿಗನ ಮೇಲೆ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಲವ್!! ಆ ಆಟಗಾರ ಕನ್ನಡಿಗನೂ ಹೌದು..

Tue, 28 May 2024-7:21 pm,

ದಕ್ಷಿಣ ಭಾರತದ ಬ್ಯೂಟಿ ಕ್ವೀನ್ ನಟಿ ಅನುಷ್ಕಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಆದರೆ ನಟಿಗೆ ಟೀಂ ಇಂಡಿಯಾದ ಕ್ರಿಕೆಟಿಗನೊಬ್ಬನ ಮೇಲೆ ಕ್ರಷ್ ಆಗಿದೆಯಂತೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ತಾನು ಯಾರನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.

ಅನುಷ್ಕಾ ಶೆಟ್ಟಿ ಸೌತ್ ಸೂಪರ್‌ ಸ್ಟಾರ್ ಪ್ರಭಾಸ್ ಅವರ ಹೆಸರನ್ನು ಹೇಳಿದ್ದಾರೆ ಎಂದು ನೀವು ಭಾವಿಸುತ್ತಿದ್ದರೆ ಅದು ತಪ್ಪು. ಅನುಷ್ಕಾ ಶೆಟ್ಟಿ ಪ್ರೀತಿ ಪ್ರಭಾಸ್ ಮೇಲಲ್ಲ.

ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸಂಬಂಧದ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ, ಅನೇಕ ಬಾರಿ ಇಬ್ಬರೂ ಸ್ಟಾರ್‌’ಗಳು ಅಫೇರ್ ಸುದ್ದಿಯನ್ನು ನಿರಾಕರಿಸಿದ್ದಾರೆ.

ಇದೀಗ ಅನುಷ್ಕಾ ಶೆಟ್ಟಿ ಕೂಡ ತಮ್ಮ ಕ್ರಶ್ ಹೆಸರನ್ನು ಇಡೀ ಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರನ್ನು ತನ್ನ ಕ್ರಷ್ ಎಂದು ಪರಿಗಣಿಸಿದ್ದಾರೆ.

ಸಂದರ್ಶನದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಅನುಷ್ಕಾ ಶೆಟ್ಟಿಯವರಿಗೆ ನಿಮ್ಮ ನೆಚ್ಚಿನ ಆಟಗಾರ ಯಾರೆಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅನುಷ್ಕಾ ಶೆಟ್ಟಿ, ದ್ರಾವಿಡ್ ಹೆಸರನ್ನು ತೆಗೆದುಕೊಂಡು ಅವರು ನನ್ನ ಕ್ರಶ್ ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link