ನಟಿ ಅನುಷ್ಕಾ ಶೆಟ್ಟಿ ಮೊದಲು ನಟಿಸಿದ್ದು ಕನ್ನಡದ ಈ ಖ್ಯಾತ ಧಾರಾವಾಹಿಯಲ್ಲಿ… ತೆಲುಗಿನಲ್ಲಿ ಅಲ್ಲ! ಆ ಸೀರಿಯಲ್ ಯಾವುದು?

Mon, 08 Apr 2024-4:15 pm,

ಕರ್ನಾಟಕದ ದಕ್ಷಿಣ ಕನ್ನಡ ಮೂಲದವರಾದ ನಟಿ ಅನುಷ್ಕಾ ಶೆಟ್ಟಿ ಸದ್ಯ ತೆಲುಗು ಇಂಡಸ್ಟ್ರೀಯಲ್ಲಿ ಖ್ಯಾತಿ ಪಡೆದಿದ್ದಾರೆ. ಆದರೆ ಇವೆಲ್ಲದಕ್ಕೂ ಮೊದಲು ಈ ನಟಿ ಕನ್ನಡ ಸೀರಿಯಲ್ ಒಂದರಲ್ಲಿ ನಟಿಸಿದ್ದರು ಎಂದರೆ ನಂಬುತ್ತೀರಾ? ನಂಬಿಕೆ ಬಂದಿಲ್ಲವಾದರೂ ಅದು ನಿಜ.

ನಟಿ ಅನುಷ್ಕಾ ಶೆಟ್ಟಿ ಬೇರೆ ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರೂ ತನ್ನ ನೆಲದ ಅಸ್ತಿತ್ವದ ಬಗ್ಗೆ ಎಂದೂ ಮರೆತವರಲ್ಲ.

ಅಷ್ಟೇ ಅಲ್ಲದೆ, ತನ್ನ ನಟನೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿರುವ ಅನುಷ್ಕಾ, ಜೇಜಮ್ಮನೆಂದೇ ಹೆಸರು ಮಾಡಿದ್ದಾರೆ. ಅರುಂಧತಿ ಸಿನಿಮಾದಲ್ಲಿ ಜೇಜಮ್ಮನಾಗಿ ಬಣ್ಣ ಹಚ್ಚಿದ್ದ  ನಟಿ ಅನುಷ್ಕಾ ಎಲ್ಲರಿಂದಲೂ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ, ಇವರ ನಟನೆ ಎಷ್ಟರ ಮಟ್ಟಿಗೆ ಜನಮನ್ನಣೆ ಗಳಿಸಿತ್ತೆಂದರೆ, ನಟ ಇಲ್ಲದಿದ್ದರೂ ಪರವಾಗಿಲ್ಲ. ಇಂತಹ ಅಭಿನೇತ್ರಿ ಸಿನಿರಂಗಕ್ಕೆ ಬೇಕು ಎಂದು ಕೊಂಡಾಡಿದ್ದರು.

ಅಂದಹಾಗೆ ಹಲವಾರು ಮಂದಿ, ಅನುಷ್ಕಾ ಮೊದಲು ಅಭಿನಯಿಸಿದ್ದು ತೆಲುಗು ಸಿನಿಮಾದಲ್ಲಿ ಎಂದು ಭಾವಿಸಿದ್ದಾರೆ. ಆದರೆ ನಿಮ್ಮ ಊಹೆ ತಪ್ಪು. ಕನ್ನಡದ ಒಂದು ಧಾರವಾಹಿಯಲ್ಲಿ ಮೊದಲು ಅಭಿನಯಿಸಿದ್ದರು ಅನುಷ್ಕಾ.

ಅನುಷ್ಕಾ ಅವರ ತಂದೆ ಎ.ಎನ್‌ ವಿಠ್ಠಲ್ ಶೆಟ್ಟಿ ಅವರು ಇಂಜಿನಿಯರ್ ಆಗಿದ್ದರು. ಈ ಕಾರಣದಿಂದ ಬೆಂಗಳೂರಿನಲ್ಲೇ ಇವರ ಕುಟುಂಬ ಸೆಟಲ್ ಆಗಿತ್ತು. ಇನ್ನು ಅನುಷ್ಕಾಗೆ ಇಬ್ಬರು ಸಹೋದರರಿದ್ದು, ಅವರ ಹೆಸರು ಗುಣರಂಜನ್ ಮತ್ತು ರಮೇಶ್.

ಅನುಷ್ಕಾ ಎಂಬಿಎ ಪದವೀಧರೆ. ಒಂದೊಮ್ಮೆ ಅನುಷ್ಕಾಗೆ ಕನ್ನಡದ 'ಬಣ್ಣ' ಧಾರಾವಾಹಿಯಲ್ಲಿ ನಟಿಸುವಂತೆ ಮನವಿ ಮಾಡಲಾಗಿತ್ತು. ಆ ಸೀರಿಯಲ್‌’ನಲ್ಲಿ ಇನ್ವೆಸ್ಟಿಗೇಟೀವ್ ಆಫೀಸರ್ ಆಗಿ ಪಾತ್ರ ನಿಭಾಯಿಸಿದ್ದರು.

ಆದರೆ ಕನ್ನಡದಲ್ಲಿ ಅನೇಕ ಬಾರಿ ಆಡಿಷನ್ ಕೊಟ್ಟರೂ ಸಹ ಅನುಷ್ಕಾಗೆ ಅವಕಾಶ ಸಿಕ್ಕಿರಲಿಲ್ಲ. ಇದೇ ಕಾರಣ, ಟಾಲಿವುಡ್ ಕಡೆ ಮುಖ ಮಾಡಿದ ಅನುಷ್ಕಾ, ಅಲ್ಲಿ ಯಶಸ್ಸು ಕಂಡರು. ಹೀಗಂತ ಕೆಲ ಮೂಲಗಳು ಮಾಹಿತಿ ನೀಡಿವೆ. ಅಂದಹಾಗೆ ಅನುಷ್ಕಾ ತೆಲುಗಿನಲ್ಲಿ ಅಭಿನಿಯಿಸಿದ ಮೊದಲ ಸಿನಿಮಾ 'ಸೂಪರ್'.

ZEENEWS TRENDING STORIES

By continuing to use the site, you agree to the use of cookies. You can find out more by Tapping this link