‘ಕಾಟೇರ’ದಲ್ಲಿ ದರ್ಶನ್ ಜೊತೆ ನಟಿಸಲು ಮಾಲಾಶ್ರೀ ಮಗಳು ಆರಾಧನಾ ಪಡೆದ ಸಂಭಾವನೆ ಎಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಇನ್ನೇನು ತೆರೆಗೆ ಎಂಟ್ರಿಯಾಗಲಿದೆ. ಈ ಸಿನಿಮಾದ ಮೂಲಕ ಕೆಲ ನಟಿಯರು ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಅವರಲ್ಲಿ ಒಬ್ಬರು ಆರಾಧನಾ ರಾಮ್.
ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ದಿವಂಗತ ರಾಮ್ ಹಾಗೂ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ. ಇವರು ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಕಾಟೇರದ ಮೂಲಕ ಸಿನಿಲೋಕಕ್ಕೆ ಕಾಲಿಡುತ್ತಿದ್ದಾರೆ.
ಕನ್ನಡಿಗರ ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ, ಅಮ್ಮನನ್ನೇ ಮೀರಿಸುವಷ್ಟು ಸೌಂದರ್ಯವತಿ.
ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ, ಮೊದಲ ಸಿನಿಮಾದಲ್ಲೇ ದರ್ಶನ್ ಅವರ ಜೊತೆ ಅಭಿನಯಿಸುವ ಅವಕಾಶ ಪಡೆದಿದ್ದಾರೆ.
ಅಂದಹಾಗೆ ಮೂಲಗಳ ಪ್ರಕಾರ ಆರಾಧನಾ ಕಾಟೇರ ಸಿನಿಮಾದಲ್ಲಿ ಅಭಿನಯಿಸಲು ಬರೋಬ್ಬರಿ 10 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.