ಇದುವರೆಗೆ 35ರ ಹರೆಯದಲ್ಲಿ 10 ಬಾರಿ ವಧುವಾಗಿದ್ದಾಳಂತೆ ಈ ನಟಿ!

Fri, 27 Jan 2023-6:04 pm,

1. ಹಿಂದಿ ಕಿರುತೆರೆ ವಾಹಿನಿಯಲ್ಲಿ ಮೂಡಿಬರುವ 'ಕುಂಡಲಿ ಭಾಗ್ಯ' ದಾರಾವಾಹಿ ಖ್ಯಾತಿಯ ನಟಿ ಶ್ರದ್ಧಾ ಆರ್ಯ ಅವರಿಗೆ ಇದೀಗ 35 ವರ್ಷ. ಅವರು ದಕ್ಷಿಣ ಚಲನಚಿತ್ರರಂಗದಿಂದ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾಳೆ. ತನ್ನ ಕುರಿತು ರಹಸ್ಯವೊಂದನ್ನು ಬಹಿರಂಗಗೊಳಿಸಿರುವ ನಟಿ ತಾನು 10 ಬಾರಿ ವಧು ಆಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ನಟಿ ತಮ್ಮ ವಧುವಿನ ಗೆಟಪ್ ಅನ್ನು ಸಹ Instagram ನಲ್ಲಿ ಹಂಚಿಕೊಂಡಿದ್ದಾಳೆ. ಆದರೆ ಚಿತ್ರಗಳಲ್ಲಿ ಅವರು ತಮ್ಮ ಪತಿ ರಾಹುಲ್ ನಾಗಲ್ ಜೊತೆ ಅಲ್ಲ ಬೇರೆಯವರೊಂದಿಗೆ ಕಾಣಿಸಿಕೊಂಡಿದ್ದಾಳೆ.  

2. ಆದರೆ, ಆಕೆ 10 ಬಾರಿ ವಧುವಾಗಿರುವ ಸಂಗತಿ ಅವಳ ರೀಲ್ ಜೀವನಕ್ಕೆ ಸಂಬಂಧಿಸಿದೆ. ಕೇವಲ ಕುಂಡಲಿ ಭಾಗ್ಯ ದಾರಾವಾಹಿಯಲ್ಲಿ ಅಷ್ಟೇ ಅಲ್ಲ, ಈ ಮೊದಲು ಕೂಡ 10-10 ಬಾರಿ ವಧುವಾಗಿ ನಟಿಸಿರುವುದಾಗಿ ಹೇಳಿಕೊಂಡಿದ್ದಾಳೆ.  

3. ಸಿರಿಯಲ್ ಸೆಟ್ ನಿಂದ ತನ್ನ ಮದುವೆಯ ಹಲವಾರು ಚಿತ್ರಗಳನ್ನು ಶ್ರದ್ಧಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಚಿತ್ರಗಳನ್ನು ಹಂಚಿಕೊಂಡ ಶ್ರದ್ಧಾ 'ಒಂದೇ ಸಿರಿಯಲ್ ನಲ್ಲಿ ನಿಮಗೆ 10 ಬಾರಿ ವಿವಾಹವಾದರೆ, ಯಾವುದೇ ಚಿಂತೆ ಇಲ್ಲದೆ ನೀವು ವಿವಾಹ ಮಾಡಿಕೊಳ್ಳುವಿರಿ. ಏಕೆಂದರೆ ಇದು ಕುಂಡಲಿ ಭಾಗ್ಯ' ಎಂದು ಬರೆದುಕೊಂಡಿದ್ದಾಳೆ.  

4. ಈ ಚಿತ್ರಗಳಲ್ಲಿ ಶ್ರದ್ಧಾ ವಧುವಿನ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ ಮತ್ತು ತನ್ನ ಸಹ ಕಲಾವಿದನ ಜೊತೆಗೆ ಭಾರಿ ತಮಾಷೆ ಮಾಡುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ ಅಭಿಮಾನಿಗಳು ಕೂಡ ನಟಿಯ ಈ ಚಿತ್ರಗಳಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಂಚಿಕೊಂಡ ಕೆಲವೇ ಸಮಯದಲ್ಲಿ ಶ್ರದ್ಧಾಳ ಈ ಪೋಸ್ಟ್ ಗಳಿಗೆ 3 ಲಕ್ಷ 65 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.  

5. ಶ್ರದ್ಧಾ ಆರ್ಯ ಅವರ ವೈಯಕ್ತಿಕ ಜೀವನ ಕುರಿತು ಹೇಳುವುದಾದರೆ, ಆಕೆ 2015 ರಲ್ಲಿ ಎನ್ಆರ್ಐ ಉದ್ಯಮಿ ಜಯಂತ್ ರಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆದರೆ ಆಕೆಯ ಈ ಸಂಬಂಧವು ಮದುವೆಗೆ ಮುಂಚೆಯೇ ಕೊನೆಗೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, ಮದುವೆಗೆ ಮುನ್ನ ಜಯಂತ್ ಅವರು ತಮ್ಮ ನಟನಾ ವೃತ್ತಿಯನ್ನು ತ್ಯಜಿಸಬೇಕು ಎಂದು ಶ್ರದ್ಧಾ ಮುಂದೆ ಷರತ್ತು ಹಾಕಿದ್ದರು ಎನ್ನಲಾಗಿದ್ದು, ಇದಕ್ಕೆ ನಟಿ ಸಿದ್ಧರಿರಲಿಲ್ಲ. ಇದೇ ಕಾರಣಕ್ಕೆ ಅವರು ನಿಶ್ಚಿತಾರ್ಥ ಮುರಿದುಕೊಂಡಿದ್ದಾರೆ.  

6. ಜಯಂತ್ ಜೊತೆಗಿನ ನಿಶ್ಚಿತಾರ್ಥವನ್ನು ಅಂತ್ಯವಾದ ಬಳಿಕ ಆಲಂ ಸಿಂಗ್ ಮಕ್ಕರ್ ಶ್ರದ್ಧಾ ಆರ್ಯಳ ಜೀವನಕ್ಕೆ ಪ್ರವೇಶಿಸಿದ್ದಾರೆ. ‘ನಾಚ್ ಬಲಿಯೇ’ ರಿಯಾಲಿಟಿ ಡ್ಯಾನ್ಸ್ ಶೋನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಆದರೆ ಶ್ರದ್ಧಾ ಮತ್ತು ಆಲಂನ ಬ್ರೇಕ್ ಅಪ್ ಕೂಡ  ಕೆಲವು ತಿಂಗಳ ನಂತರ ಸಂಭವಿಸಿದೆ.  

7. ನಂತರ ಶ್ರದ್ಧಾ ಆರ್ಯ ತನ್ನ ನಿಜವಾದ ಪ್ರೀತಿಯನ್ನು ರಾಹುಲ್ ನಾಗಲ್ನಲ್ಲಿ ಕಂಡುಕೊಂಡಿದ್ದಾಳೆ. ರಾಹುಲ್ ನೌಕಾಪಡೆಯ ಅಧಿಕಾರಿ. ಇಬ್ಬರೂ ನವೆಂಬರ್ 2021 ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ನಟಿಯ ಸಾಮಾಜಿಕ ಮಾಧ್ಯಮವು ಶ್ರದ್ಧಾ ಮತ್ತು ರಾಹುಲ್ ಅವರ ರೋಮ್ಯಾಂಟಿಕ್ ಚಿತ್ರಗಳಿಂದ ತುಂಬಿದೆ. ಅಭಿಮಾನಿಗಳು ಕೂಡ ಅವರ ಜೋಡಿಯನ್ನು ತುಂಬಾ ಮೆಚ್ಚುಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link