`ಬಿಗ್‌ ಬಾಸ್‌ಗೆ ಸುದೀಪ್‌ ಗುಡ್‌ಬೈ ಹೇಳಿದ್ದು ಕೇಳಿ ನನಗೆ ಬಹಳ ಖುಷಿ ಆಯ್ತು`- ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ

Tue, 26 Nov 2024-4:30 pm,

ಬಿಗ್‌ ಬಾಸ್‌ಗೆ ನಾನು ಹೋಗಿಲ್ಲ ಅಂತ ಹೊಟ್ಟೆ ಉರಿ ಇಲ್ಲ, ಅಂತಹ ಕಾರ್ಯಕ್ರಮ ಅದೇನು ಅಲ್ಲ ಅಂತಾ ನಟಿ ಚಿತ್ರಾಲ್‌ ರಂಗಸ್ವಾಮಿ ಬೋಲ್ಡ್‌ ಸ್ಟೇಟ್‌ಮೆಂಟ್‌ ನೀಡಿದ್ದಾರೆ.

ನ್ಯಾಷನಲ್ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಅವರು, "ಬಿಗ್‌ ಬಾಸ್‌ ಬಗ್ಗೆ ಸಾಮಾನ್ಯವಾಗಿ ನಮ್ಮ ಅಭಿಪ್ರಾಯ ಹೇಳಲು ಆಗಲ್ಲ. ಯಾಕಂದ್ರೆ ಕೆಲವರು ನೀವು ಹೋಗಿಲ್ಲ ಅಂತಾ ಹೊಟ್ಟೆ ಉರಿಗೆ‌ ಹಾಗೆ ಮಾತನಾಡುತ್ತೀರಿ ಅಂತಾರೆ. ಆದರೆ ಆ ಕಾರ್ಯಕ್ರಮ ಹೊಟ್ಟೆ ಉರಿ ಪಟ್ಟುಕೊಳ್ಳುವಂತಹದಲ್ಲ" ಎಂದು ನೇರವಾಗಿ ಹೇಳಿದ್ದಾರೆ.

 

"ನಮ್ಮ ಜನ ಹೇಗೆ ಆಗಿದ್ದಾರೆ ಅಂದ್ರೆ ಕರ್ನಾಟಕದಿಂದ ಒಲಿಂಪಿಕ್ಸ್‌ಗೆ ಯಾರು ಹೋಗಿದ್ದಾರೆ  ಅನ್ನೋದು ಗೊತ್ತಿರಲ್ಲ. ಆದ್ರೆ ಬಿಗ್‌ ಬಾಸ್‌ ಸ್ಪರ್ಧಿಗಳು ಯಾರು? ವೈಲ್ಡ್‌ ಕಾರ್ಡ್‌ ಎಂಟ್ರಿ ಯಾರು? ಇದೆಲ್ಲಾ ಗೊತ್ತಿರುತ್ತದೆ. ಯುವ ಜನತೆ ಆ ರೀತಿ ಆಗಿದ್ದಾರೆ. ನನಗೆ ಅದನ್ನು ಮೀರಿದ ಮೆಚ್ಯುರಿಟಿ ಇದೆ. ಹೀಗಾಗಿ ನನಗೆ ಅದ್ರ ಬಗ್ಗೆ ಮಾತನಾಡಲು ಇಷ್ಟವಿಲ್ಲ" ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ.

 

"ಒಂದು ಲೆಕ್ಕದಲ್ಲಿ ಬಿಗ್‌ ಬಾಸ್‌ಗೆ ನಾನು ಹೋಗದೇ ಇದ್ದದ್ದು ಒಳ್ಳೆದಾಯಿತು. ಯಾಕಂದ್ರೆ ಅಲ್ಲಿ ಸುಮ್ಮ ಸುಮ್ಮನೆ ಜಗಳ ಆಡುವವರು ಬೇಕು. ಅಲ್ಲಿ ನನ್ನ ವ್ಯಕ್ತಿತ್ವವನ್ನು ಯಾರೋ ಎಡಿಟರ್‌ ಕೈಗೆ  ಕೊಟ್ಟು ಗೊಂಬೆಯಂತಾಗಲು ನನಗೆ ಇಷ್ಟ ಇಲ್ಲ" ಎಂದಿದ್ದಾರೆ.

 

ಇನ್ನು ನಟ ಕಿಚ್ಚ ಸುದೀಪ್‌ ಅವರು, ಬಿಗ್‌ ಬಾಸ್‌ ಮುಂದಿನ ಸೀಸನ್‌ ನಡೆಸಿಕೊಡಲ್ಲ ಎಂದಾಗ ನನಗೆ ತುಂಬಾ ಖುಷಿಯಾಯಿತು ಎಂದು ಹೇಳಿದ್ದಾರೆ ಚಿತ್ರಾಲ್‌.

 

"ನನಗೆ ಈ ವಿಷಯ ಕೇಳಿ ತುಂಬಾ ಖುಷಿಯಾಯ್ತು. ಯಾಕಂದ್ರೆ ಅಂತಹ ಒಂದು ರಿಯಾಲಿಟಿ ಇಲ್ಲದ ಶೋವನ್ನು ಅಂತಹ ತೂಕ ಇರುವ ವ್ಯಕ್ತಿ ಹೋಸ್ಟ್‌ ಮಾಡಬಾರದು. ಸುದೀಪ್‌ ಸರ್‌ಗಾಗಿಯೇ ಅದೆಷ್ಟೋ ಜನ ಆ ಶೋ ನೋಡ್ತಿದ್ದಾರೆ" ಎಂದು ಹೇಳಿದ್ದಾರೆ.

 

"ಸುದೀಪ್‌ ಸರ್‌ ಒಳ್ಳೆ ಶೋಗಳನ್ನು ಪ್ರಚಾರ ಮಾಡಬೇಕು. ಹಾಗಂತ ಇದು ಕೆಟ್ಟ ಶೋ ಅಂತ ನಾನು ಹೇಳುತ್ತಿಲ್ಲ. ಆದರೆ ಮಾನಸಿಕವಾದ ಭಾವನೆಗಳ ಜೊತೆ ಆಟವಾಡುವ ಶೋ ಇದು. ಇಂತಹ ಒಂದು ಶೋ ಅವರಿಗೆ ಬೇಡ. ಹೀಗಾಗಿ ಮುಂದಿನ ಸೀಜನ್‌ ಕಿಚ್ಚ ನಡೆಸಿಕೊಡಲ್ಲ ಅಂತಾ ಹೇಳಿದ್ದನ್ನು ಕೇಳಿ ನನಗೆ ಖುಷಿ ಆಯ್ತು" ಎಂದು ನೇರವಾಗೇ ನಟಿ ಚಿತ್ರಾಲ್‌ ಹೇಳಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link