Sushma Rao: ʻನನ್ನಮ್ಮ ಸೂಪರ್‌ ಸ್ಟಾರ್‌ʼ ಶೋಗೆ ನಿರೂಪಕಿಯಾಗಿ ಬಂದ ಭಾಗ್ಯಲಕ್ಷ್ಮಿ!

Sat, 03 Feb 2024-11:35 am,

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್ 3 ಶುರುವಾಗಲಿದ್ದು, ಇದೇ ಶನಿವಾರದಿಂದ ಈ ರಿಯಾಲಿಟಿ ಶೋ ಆರಂಭ ಆಗಲಿದೆ.

ಹೊಸ ಸ್ಪರ್ಧಿಗಳ ಜೊತೆಗೆ ಹೊಸ ಆ್ಯಂಕರ್ ಒಬ್ಬರು ಈ ಶೋವಿನ ಸಾರಥ್ಯ ವಹಿಸಲಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳಾಗಿ ನಟಿಸುತ್ತಿರುವ ಸುಷ್ಮಾ ರಾವ್ 'ನನ್ನಮ್ಮ ಸೂಪರ್ ಸ್ಟಾರ್'ನ ನಿರೂಪಕಿಯಾಗಿ ಮೋಡಿ ಮಾಡಲಿದ್ದಾರೆ.

ನಟಿ-ನಿರೂಪಕಿ ಸುಷ್ಮಾ ರಾವ್‌ ನನ್ನಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಮೂಲಕ ಮತ್ತೊಮ್ಮೆ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆಯಲಿದ್ದಾರೆ. 

ಸುಷ್ಮಾ ರಾವ್‌ ನಟಿಯಾಗಿ ಕಿರುತೆರೆಯಲ್ಲಿ ಮೋಡಿ ಬಳಿಕ ನಿರೂಪಣಾ ಜರ್ನಿಯನ್ನು ಸ್ಟಾರ್ ಸುವರ್ಣ  ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತರ್ಲೆ ನನ್ ಮಕ್ಳು' ಶೋ ನಿರೂಪಣೆ ಮಾಡಿದ್ದ ಸುಷ್ಮಾ, ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೀನ್ಸ್' ರಿಯಾಲಿಟಿ ಶೋವಿನ ನಿರೂಪಕಿಯಾಗಿ ಕಾಣಿಸಿಕೊಂಡರು.

ನಿರೂಪಕಿ ಸುಷ್ಮಾ ರಾವ್‌  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಮನೆ ಮನೆ ಮಹಾಲಕ್ಷ್ಮಿ' ರಿಯಾಲಿಟಿ ಶೋವಿನ ನಿರೂಪಕಿಯಾದ್ದ ಸುಷ್ಮಾ ಮುಂದೆ 'ಸೀರಿಯಲ್ ಸಂತೆ', 'ಅವಾರ್ಡ್ ಕಾರ್ಯಕ್ರಮ', ಹಾಡು ಹರಟೆ' ಕಾರ್ಯಕ್ರಮಗಳ ಸಾರಥ್ಯವನ್ನು ವಹಿಸಿದ್ದರು.

'ನನ್ನಮ್ಮ ಸೂಪರ್ ಸ್ಟಾರ್'ನ ನಿರೂಪಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಸುಷ್ಮಾ ರಾವ್ ಮೊದಲ ಬಾರಿ ಕಿರುತೆರೆಗೆ 'ಭಾಗೀರಥಿ' ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಪಾದಾರ್ಪಣೆ ಮಾಡಿದ್ದರು.

ಕಿರುತೆರೆ ಚೆಲುವೆ ಸುಷ್ಮಾ ರಾವ್‌ 'ಭಾಗೀರಥಿ' ಧಾರಾವಾಹಿಯ ನಂತರ 'ಸ್ವಾತಿಮುತ್ತು', 'ಬಿದಿಗೆ ಚಂದ್ರಮ', 'ಯಾವ ಜನ್ಮದ ಮೈತ್ರಿ', 'ಗುಪ್ತಗಾಮಿನಿ', 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಗಳಲ್ಲಿ ಸುಷ್ಮಾ ರಾವ್ ನಟಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link