ದೇಹದ ʻಆʼ ಭಾಗಕ್ಕೆ ಸರ್ಜರಿ ಮಾಡಿಸಿಕೊಂಡು ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್ ನಟಿ! ನಂತರ ಆಗಿದ್ದೇನು ಗೊತ್ತಾ..?
Priyanka Chopra: ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಅವರು ಮಾಡಿದ್ದ ಒಂದೆ ಒಂದು ತಪ್ಪಿನ ಕಾರಣದಿಂದಾಗಿ ಅವರು ಹಲವು ಸಿನಿಮಾ ಚ್ಯಾನ್ಸ್‌ಗಲನ್ನು ಮಿಸ್ ಮಾಡಿಕೊಂಡು ಬಿಟ್ಟಿದ್ದಾರೆ.
ಬಾಲಿವುಡ್‌ನ ಸ್ಟಾರ್ ನಟಿಯಾಗಿ ಸದ್ಯ ಸಿನಿಮಾ ಇಂಡಸ್ಟ್ರಿಯನ್ನು ರೂಲ್ ಮಾಡುತ್ತಿರುವ ಪ್ರಿಯಾಂಕ ಚೋಪ್ರಾ ಅವರನ್ನು ಒಂದು ಕಾಲದಲ್ಲಿ ಸಿನಿಮಾಗಲಿಂದ ತೆಗೆದು ಹಾಕಲಾಗಿತ್ತು.
ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ತಮ್ಮ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಆಕೆಯ ಮೂಗಿನ ಆಕಾರವು ಹದಗೆಟ್ಟಿದ್ದರಿಂದ ಅನೇಕ ಚಿತ್ರಗಳಿಂದ ಅವರನ್ನು ಕೈಬಿಡಲಾಯಿತು.
ಶಸ್ತ್ರಚಿಕಿತ್ಸೆಯ ನಂತರ, ಪ್ರಿಯಾಂಕಾ ಚೋಪ್ರಾ ಅವರನ್ನು ಅನೇಕ ಯೋಜನೆಗಳಿಂದ ತೆಗೆದುಹಾಕಲಾಯಿತು. ಇದಾದ ನಂತರ ನಟಿ ಮುಂಬೈ ತೊರೆದು ಸಿನಿಮಾ ಇಂಡಸ್ಟ್ರಿಯಿಂದ ಬ್ರೇಕ್ ತೆಗೆದುಕೊಳ್ಳಲು ಬಯಸಿದ್ದಳು, ಆದರೆ ಅನಿಲ್ ಕಪೂರ್ ಅವರು ಪ್ರಿಯಾಂಕ ಚೋಪ್ರಾ ಅವರನ್ನು ಮುಂಬೈ ತೊರೆಯದಂತೆ ತಡೆದಿದ್ದರು.
ಅನಿಲ್ ಕಪೂರ್ ಅವರು ಪ್ರಿಯಾಂಕ ಚೋಪ್ರಾ ಅವರಿಗೆ ಒಂದೊಳ್ಳೆ ಆಫರ್ ಕೊಟ್ಟಿದ್ದರು. ಒಂದು ಸಿನಿಮಾಗಾಗಿ ನಟಿಗೆ 5 ಲಕ್ಷ ರೂ. ಅಡ್ವಾನ್ಸ್ ಸಹ ನೀಡಲಾಗಿತ್ತು. ನಟಿ ತನ್ನ ಮೂಗಿನ ಸರ್ಜರಿಯ ನಂತರ ಅನಿಲ್ ಕಪೂರ್ ಅವರ ಬಳಿ ಬಂದು ಹಣವನ್ನು ಹಿಂದಿರುಗಿಸುವ ನಿರ್ಧಾರ ಮಾಡಿದ್ದರು.
ಹಣ ವಾಪಸ್ ತೆಗೆದುಕೊಳ್ಳು ನನಗೆ ಸಿನಿಮಾ ಮಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಪ್ರಿಯಾಂಕ ಚೋಪ್ರಾ ಅವರನ್ನು ಗದರಿಸಿದ ಅನಿಲ್ ಕಪೂರ್ ಅವರು ಪ್ರಿಯಾಂಕ ಚೋಪ್ರಾ ಅವರನ್ನು ಸಮಾಧಾನ ಮಾಡಿದ್ದರು.
ಮೇಕ್‌ಅಪ್ ಆರ್ಟಿಸ್ಟ್ ಅನ್ನು ಕರೆಸಿ ಪ್ರಿಯಾಂಕ ಅವರ ಲುಕ್ ಅನ್ನು ಬದಲಾಯಿಸಿ ಅವರಿಗೆ ಸಿನಿಮಾ ಮಾಡಲು ಹೇಳಿದ್ದರು. ಈ ಸಿನಿಮಾ ನೋಡಿದ ನಂತರ ಅಬ್ಬಬ್ಬಾ ಯಾರು ಈ ಹುಡುಗಿ ಇಷ್ಟು ಚೆಂದ ಇದ್ದಾಳೆ ಎಂದು ಎಲ್ಲರು ಅಚ್ಚರಿ ಪಟ್ಟಿದ್ದರು ಎಂದು ಅನಿಲ್ ಕಪೂರ್ ಅವರು ಪ್ರಿಯಾಂಕ ಚೋಪ್ರಾ ಅವರ ಸರ್ಜರಿ ಸಮಯದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.