`ರಣಬೀರ್ʼಗೆ ಒಂದು ಪ್ಯಾಕ್ ಕಾಂ***ಮ್ ಗಿಫ್ಟ್ ಕೊಡ್ತೇನೆ, ಅದನ್ನು ಆತ ಹೆಚ್ಚು ಬಳಸ್ತಾನೆ`- ಖ್ಯಾತ ನಟಿ ದೀಪಿಕಾ ಪಡುಕೋಣೆ ಸೆನ್ಸೇಷನಲ್ ಹೇಳಿಕೆ ವೈರಲ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ಚೊಚ್ಚಲ ತಾಯ್ತನದ ಸಂತಸದಲ್ಲಿರುವ ದೀಪಿಕಾ ಈ ಹಿಂದೆ ರಣಬೀರ್ ಕಪೂರ್ ಬಗ್ಗೆ ನೀಡಿದ ಹೇಳಿಕೆಯೊಂದು ಸದ್ಯ ಮುನ್ನಲೆಗೆ ಬಂದಿದೆ.
ನಟಿ ದೀಪಿಕಾ ಮತ್ತು ನಟ ರಣಬೀರ್ ಕಪೂರ್ ಒಂದು ಕಾಲದಲ್ಲಿ ಪ್ರೇಮಪಕ್ಷಿಗಳಾಗಿದ್ದರು ಎಂಬುದು ತಿಳಿದ ಸಂಗತಿಯೇ. ಆದರೆ ಬ್ರೇಕಪ್ ಮಾಡಿಕೊಂಡ ಈ ಜೋಡಿ ಬೇರೆ ಬೇರೆ ಮದುವೆಯಾಗಿ ಇದೀಗ ಸುಖೀ ಸಂಸಾರ ನಡೆಸುತ್ತಿದ್ದಾರೆ.
ರಣಬೀರ್ ಮತ್ತು ದೀಪಿಕಾ 'ಬಚ್ನಾ ಏ ಹಸೀನೋ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಪ್ರೀತಿಯಲ್ಲಿ ಬಿದ್ದಿದ್ದರು. ಅಷ್ಟೇ ಅಲ್ಲದೆ, ರಣಬೀರ್ʼನನ್ನು ಅತಿಯಾಗಿ ಪ್ರೀತಿಸುತ್ತಿದ್ದ ದೀಪಿಕಾ ತನ್ನ ಕತ್ತಿನ ಹಿಂಭಾಗದಲ್ಲಿ ಹಚ್ಚೆ ಕೂಡ ಹಾಕಿಸಿಕೊಂಡಿದ್ದರು. ಆದರೆ ಸುಮಾರು ಒಂದೆರಡು ವರ್ಷಗಳ ಬಳಿಕ ಈ ಪ್ರೀತಿ ಮುರಿದುಬಿತ್ತು. ಆ ಸಂದರ್ಭದಲ್ಲಿ ತೀವ್ರವಾಗಿ ನೊಂದಿದ್ದ ದೀಪಿಕಾ, ಖಿನ್ನತೆಗೆ ಕೂಡ ಒಳಗಾಗಿದ್ದರು ಎಂದು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು.
2010 ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ, ರಣಬೀರ್ ಕಪೂರ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅದನ್ನು ನಟ ನಂತರ ಒಪ್ಪಿಕೊಂಡರು ಸಹ. ಅದೇ ವರ್ಷ ದೀಪಿಕಾ ಪಡುಕೋಣೆ ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್'ನಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ, ಆ ಸಂದರ್ಭದಲ್ಲಿ ರಣಬೀರ್ ಅವರನ್ನು ಗೇಲಿ ಮಾಡಿದ್ದು, ನೀತು ಕಪೂರ್ ಮತ್ತು ರಿಷಿ ಕಪೂರ್ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ದೀಪಿಕಾ ಜೊತೆ ಸೋನಂ ಕಪೂರ್ ಕೂಡ ಇದ್ದರು. ಸಂಭಾಷಣೆಯ ಸಮಯದಲ್ಲಿ, ಕರಣ್ ಜೋಹರ್ ದೀಪಿಕಾ ಪಡುಕೋಣೆ ಅವರನ್ನು ರಣಬೀರ್ʼಗೆ ಏನು ಉಡುಗೊರೆ ನೀಡಲು ಬಯಸುತ್ತೀರಿ ಎಂದು ಕೇಳಿದಾಗ, ನಟಿ ʼಕಾಂಡೋಮ್ʼ ಎಂದು ಪ್ರತಿಕ್ರಿಯಿಸಿದ್ದರು. "ರಣಬೀರ್ ಕಾಂಡೋಮ್ʼಗಳನ್ನು ಹೆಚ್ಚಾಗಿ ಬಳಸುವುದರಿಂದ ಅವರಿಗೆ ಕಾಂಡೋಮ್ ಪ್ಯಾಕೆಟ್ ಉಡುಗೊರೆಯಾಗಿ ನೀಡಲು ನಾನು ಬಯಸುತ್ತೇನೆ' ಎಂದು ದೀಪಿಕಾ ಹೇಳಿದ್ದರು. ಆದರೆ ಸೋನಂ ರಣಬೀರ್ ಅನ್ನು ಒಳ್ಳೆಯ ಸ್ನೇಹಿತ ಎಂದು ಕರೆದಿದ್ದರು.
ಇನ್ನು ವಿವಾದ ಕಳೆದು ಕೆಲವು ವರ್ಷಗಳ ನಂತರ, ದೀಪಿಕಾ ಮತ್ತು ರಣಬೀರ್ ಉತ್ತಮ ಸ್ನೇಹಿತರಾದರು. ದೀಪಿಕಾ ರಣವೀರ್ ಸಿಂಗ್ ಜೊತೆಗೆ ಜೀವನದಲ್ಲಿ ಮುಂದೆ ಸಾಗಿದರೆ, ಆಲಿಯಾ ಭಟ್ ರಣಬೀರ್ ಜೀವನದಲ್ಲಿ ಪ್ರವೇಶಿಸಿದರು.