ಸಿನಿಮಾಗಾಗಿ ಸರ್ಕಾರಿ ನೌಕರಿ ಬಿಟ್ಟಕೊಟ್ಟ ನಟಿ ಸಧ್ಯ ನಂ1 ಸ್ಟಾರ್ ಹೀರೋಯಿನ್..! ಯಾರವಳು...?
ಬಾಲಿವುಡ್ ಗ್ಲಾಮರ್ ಕ್ವೀನ್ ದಿಶಾ ಪಟಾನಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದಿಶಾ ಪಟಾನಿಯ ಜನಪ್ರಿಯತೆ ಅಷ್ಟಿಷ್ಟಲ್ಲ. ದಿಶಾ ಆಗಾಗ್ಗೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಪಡ್ಡೆ ಹೈಕ್ಲಿ ನಿದ್ದೆ ಕದಿಯುವ ಕೆಲಸ ಮಾಡುತ್ತಿರುತ್ತಾರೆ..
ಫಿಟ್‌ನೆಸ್‌ನಲ್ಲಿಯೂ ದಿಶಾ ಪಟಾನಿಯನ್ನು ಸೋಲಿಸುವ ನಾಯಕಿ ಇಲ್ಲ. ಪ್ರಸ್ತುತ, ದಕ್ಷಿಣ ಸಿನಿರಂಗ ಮತ್ತು ಹಿಂದಿಯಲ್ಲಿ ಬ್ಯಾಕ್-ಟು-ಬ್ಯಾಕ್ ಪ್ರಾಜೆಕ್ಟ್‌ಗಳಲ್ಲಿ ಈ ಚೆಲುವೆ ಸಖತ್ ಬ್ಯುಸಿಯಾಗಿದ್ದಾಳೆ.
ಇತ್ತೀಚೆಗೆ ಬಿಡುಗಡೆಯಾದ ಕಲ್ಕಿಯಲ್ಲಿ ರಾಕ್ಸಿ ಪಾತ್ರದಲ್ಲಿ ದಿಶಾ ಮಿಂಚಿದ್ದರು. ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಅಂದ್ರೂ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾಳೆ. ಸದ್ಯ ಈ ಚೆಲುವೆ ಕಾಲಿವುಡ್‌ನಲ್ಲಿ ಸೂರ್ಯ ಜೊತೆ ಕಂಗುವಾ ಸಿನಿಮಾ ಮಾಡುತ್ತಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ದಿಶಾ, ಸಿನಿಮಾಗಾಗಿ ತನ್ನ ಕನಸನ್ನು ತ್ಯಾಗ ಮಾಡಿದ್ದಾಳೆ... ಗೊತ್ತಾ? ಹೌದು. ಈ ವಿಷಯವನ್ನು ಸ್ವತಃ ನಟಿ ಹೇಳಿಕೊಂಡಿದ್ದಾರೆ.. ಅಷ್ಟಕ್ಕೂ ನಟಿ ಮಾಡಿದ ತ್ಯಾಗವೇನು..? ಬನ್ನಿ ನೋಡೋಣ..
ದಿಶಾಗೆ ಸಿನಿಮಾದಲ್ಲಿ ನಟಿಸುವ ಆಸೆಯೇ ಇರಲಿಲ್ಲ. ಮೂಲತಃ ಜೆಟ್ ಫೈಟರ್ ಆಗಬೇಕೆಂಬುದು ಆಕೆಯ ಕನಸಾಗಿತ್ತು. ವಾಸ್ತವವಾಗಿ ದಿಶಾ ಮನೆಯಲ್ಲಿ ಎಲ್ಲಾ ಸರ್ಕಾರಿ ನೌಕರರು.
ಈಕೆಯ ತಂದೆ ಪೊಲೀಸ್ ಅಧಿಕಾರಿ ಮತ್ತು ತಾಯಿ ಆರೋಗ್ಯ ಇಲಾಖೆ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ದಿಶಾ ಅವರ ಸಹೋದರ ಲೆಫ್ಟಿನೆಂಟ್ ಕರ್ನಲ್. ದಿಶಾ ಕೂಡ ತನ್ನ ಸಹೋದರನ ಪ್ರೇರಣೆಯಿಂದ ದೇಶ ಸೇವೆಯ ಭಾಗವಾಗಲು ಬಯಸಿದ್ದಳು.
ಇದರ ಭಾಗವಾಗಿ ಸೇನೆಯಲ್ಲಿ ಫೈಟರ್ ಜೆಟ್ ಗಳನ್ನು ಹಾರಿಸಿ ತರಬೇತಿ ಪಡೆಯುವ ಪೈಲಟ್ ಆಗಲು ಬಯಸಿದ್ದಳು. ಈ ತರಬೇತಿಗೆ ಸಂಬಂಧಿಸಿದ ಪರೀಕ್ಷೆಗೂ ಸಿದ್ಧವಾಗಿದ್ದಳು.
ನಿರೀಕ್ಷೆಗೂ ಮೀರಿದ ಸಿನಿಮಾ ಆಫರ್ ಬಂದಿದ್ದರಿಂದ ಆ ದಿಕ್ಕಿನತ್ತ ಸಾಗಿದೆ. ಹಾಗಾಗಿ ಸರ್ಕಾರಿ ನೌಕರಿ ಪಡೆಯುವ ದಿಕ್ಕು ಸಿನಿಮಾಗಳತ್ತ ಬಂತು ಅಂತ ನಟಿ ಹೇಳಿಕೊಂಡಿದ್ದಾರೆ..