Actress Weight Loss: ತೂಕ ಇಳಿಕೆಗಾಗಿ ಅಕ್ಕಿ, ಗೋಧಿ ತ್ಯಜಿಸಿದ ನಟಿ ಈಗ ಹೇಗಿದ್ದಾರೆ!
ಫಿಟ್ನೆಸ್ ಫ್ರೀಕ್ಸ್ ಪಟ್ಟಿಯಲ್ಲಿ ಅನೇಕ ಸೆಲೆಬ್ರಿಟಿಗಳು ಸೇರಿದ್ದಾರೆ. ಪ್ರತಿಯೊಬ್ಬರೂ ಈ ಸೆಲೆಬ್ರಿಟಿಗಳ ಫಿಟ್ನೆಸ್ ದಿನಚರಿಯನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಟಿ ಎರಿಕಾ ಫರ್ನಾಂಡೀಸ್ ಅವರ ಡಯಟ್ ಪ್ಲಾನ್ ಅನ್ನು ನಿಮಗಾಗಿ ತಂದಿದ್ದೇವೆ.
ನಟಿ ಎರಿಕಾ ಫೆರ್ನಾಂಡಿಸ್ ಅವರ ಫಿಟ್ನೆಸ್ ನೋಡಿದ ಪ್ರತಿಯೊಬ್ಬರೂ ಅದರ ರಹಸ್ಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ತನ್ನ ಫಿಟ್ನೆಸ್ ಮಂತ್ರದ ಬಗ್ಗೆ ತಿಳಿಸಿರುವ ಎರಿಕಾ ಅವರು ತಾವು ಅಕ್ಕಿ ಹಾಗೂ ಗೋಧಿ ಖಾದ್ಯಗಳನ್ನು ತಿನ್ನುವುದಿಲ್ಲ. ಇದು ತೂಕವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ, ಏಕೆಂದರೆ ಇವೆರಡೂ ಗ್ಲುಟನ್ ಅನ್ನು ಹೊಂದಿರುತ್ತವೆ, ಇದು ಬಹಳಷ್ಟು ತೂಕವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಇದರೊಂದಿಗೆ ಎರಿಕಾ ತಮ್ಮ ಫಿಟ್ ನೆಸ್ ಗಾಗಿ ಮಾಂಸಾಹಾರಿ ಆಹಾರಕ್ಕೂ ಗುಡ್ ಬೈ ಹೇಳಿದ್ದಾರೆ. ಎರಿಕಾ ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಸಸ್ಯಾಹಾರಿ ಆಹಾರಗಳನ್ನು ಮಾತ್ರ ಸೇವಿಸುತ್ತಾರಂತೆ.
ಎರಿಕಾ ಫೆರ್ನಾಂಡಿಸ್ ಕಟ್ಟುನಿಟ್ಟಾದ ತಾಲೀಮು ದಿನಚರಿಯನ್ನು ಅನುಸರಿಸುತ್ತಾರೆ. ಎರಿಕಾ ಜಿಮ್‌ನಿಂದ ಯೋಗ ಮತ್ತು ಪೈಲೇಟ್ಸ್‌ವರೆಗೆ ಹಲವು ಕಠಿಣ ಕಸರತ್ತುಗಳನ್ನೂ ಮಾಡುತ್ತಾರೆ. ನಟಿಯ ದೇಹವನ್ನು ನೋಡಿದ ನಂತರ, ಅವರು ಅದನ್ನು ಹೆಚ್ಚು ಕಾಳಜಿ ವಹಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.
'ಕಸೌತಿ ಜಿಂದಗಿ ಕಿ 2' ನಲ್ಲಿ ಪ್ರೇರಣಾ ಪಾತ್ರವನ್ನು ನಿರ್ವಹಿಸುವ ಎರಿಕಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ತಮ್ಮ ಬೋಲ್ಡ್ ಚಿತ್ರಗಳು ಮತ್ತು ವೀಡಿಯೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.