ಮನೆಯ ಮೇಲೆ ಐಟಿ ದಾಳಿ.. 21ನೇ ವಯಸ್ಸಿಗೆ, ಲವ್‌, ಎಂಗೇಜ್‌ಮೆಂಟ್‌, ಬ್ರೇಕಪ್..‌ ಆದರೂ ಸಿನಿರಂಗದಲ್ಲಿ ಮಿಂಚುತ್ತಿರುವ ಕನ್ನಡತಿ ಈಕೆ!

Tue, 03 Sep 2024-3:25 pm,

ಈ ನಟಿ ತುಂಬಾ ಫೇಮಸ್. ಕೋಟಿಗಟ್ಟಲೆ ಗಳಿಸುತ್ತಾರೆ. ಸದ್ಯ ಸೌತ್‌ನಿಂದ ಬಾಲಿವುಡ್‌ವರೆಗೂ ತಮ್ಮ ಸಿನಿಮಾಗಳಿಂದ ಅಭಿಮಾನಿಗಳ ಹೃದಯವನ್ನೇ ಆಳುತ್ತಿದ್ದಾರೆ. ಇವರೊಂದಿಗೆ ಸಿನಿಮಾ ಮಾಡೋಕೆ ಅಂತಾನೇ ಅನೇಕ ನಿರ್ದೇಶಕರು ಡೇಟ್‌ ಸಲುವಾಗಿ ಕಾಯುತ್ತಿದ್ದಾರೆ..  

ಆಕೆ ಬೇರೆ ಯಾರೂ ಅಲ್ಲ, ನ್ಯಾಶನಲ್ ಕ್ರಶ್ ಎಂದೇ ಕರೆಯಲ್ಪಡುವ ರಶ್ಮಿಕಾ ಮಂದಣ್ಣ.ಇ ಇವರು ತಮ್ಮ ವಿಭಿನ್ನ ಶೈಲಿಯ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿ ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬೆಳೆದಿದ್ದಾರೆ..  

5 ಏಪ್ರಿಲ್ 1996 ರಂದು ಕರ್ನಾಟಕದಲ್ಲಿ ಜನಿಸಿದ ರಶ್ಮಿಕಾ ಮಂದಣ್ಣ ತಮ್ಮದೇ ಆದ ಬಿಜಿನೆಸ್‌ ಹೊಂದಿದ್ದಾರೆ.. ನಟಿ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ.. ನಟಿಗೆ ಶಿಮಾನ್ ಮಂದಣ್ಣ ಎಂಬ ತಂಗಿ ಕೂಡ ಇದ್ದಾರೆ. ಇಬ್ಬರ ವಯಸ್ಸಿನಲ್ಲೂ 16 ವರ್ಷಗಳ ವ್ಯತ್ಯಾಸವಿದೆ ಎನ್ನಲಾಗಿದೆ.   

ಪುಷ್ಪಾ ಟು ಅನಿಮಲ್‌ನಂತಹ ಸೂಪರ್‌ಹಿಟ್ ಚಿತ್ರಗಳ ಭಾಗವಾಗಿದ್ದ ರಶ್ಮಿಕಾ ಮಂದಣ್ಣ ಮಾಡೆಲಿಂಗ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2014 ರಲ್ಲಿ ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಸ್ಪರ್ಧೆಯನ್ನು ಗೆದ್ದರು. ಇದರೊಂದಿಗೆ ಅವರ ಮಾಡೆಲಿಂಗ್ ವೃತ್ತಿಜೀವನ ಪ್ರಾರಂಭವಾಯಿತು.   

ರಶ್ಮಿಕಾ ಕನ್ನಡ ಚಿತ್ರ 'ಕಿರಿಕ್ ಪಾರ್ಟಿ' ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಇದೇ ಸಿನಿಮಾದಲ್ಲಿ ಸಹ ನಟನಾಗಿದ್ದ ರಕ್ಷಿತ್‌ ಶೆಟ್ಟಿ ಅವರನ್ನು ಪ್ರೀತಿಸಿದ್ದರು.. ಇಬ್ಬರೂ 3 ಜುಲೈ 2017ರಲ್ಲಿ ನಿಶ್ಚಿತಾರ್ಥವನ್ನೂ ಮಾಡಿಕೊಂಡರು.. ಆದರೆ ಈ ಸಂಬಂಧ 2018 ರಲ್ಲಿ ಮುರಿದುಬಿತ್ತು. ವರದಿ ಪ್ರಕಾರ, ನಟಿಯ ನಿವ್ವಳ ಮೌಲ್ಯ 45 ಕೋಟಿ ರೂ. 2020ರಲ್ಲಿ ನಟಿಯ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link