ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪಿದ್ದಾರಾ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ!
ಬ್ಯೂಟಿಫುಲ್ ನಟಿ ಜೆನಿಫರ್ ಕೊತ್ವಾಲ್ ಅವರಿಗೆ ಚಿಕ್ಕಂದಿನಿಂದಲೂ ಮಾಡ್ಲಿಂಗ್ ಕ್ಷೇತ್ರದ ಮೇಲೆ ಬಹಳ ಆಸಕ್ತಿ ಇತ್ತು.
ಜೆನಿಫರ್ ಸಾಕಷ್ಟು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿದ್ದರು.
ಕಾಸ್ಮೆಟಿಕ್ ಕಂಪನಿ ಒಂದರ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾಗ ನಟಿ ಜೆನಿಫರ್ ಅವರಿಗೆ ಶಿವರಾಜ್ ಕುಮಾರ್ ನಟನೆಯ ಜೋಗಿ ಸಿನಿಮಾದ ಅವಕಾಶ ದೊರೆಯಿತು.
ಕೆಲವೇ ಕೆಲವು ಸಿನಿಮಾಗಲಲ್ಲಿ ನಟಿಸಿರುವ ಜೆನಿಫರ್ ಬಹು ಬೇಗನೇ ಸೆಲಿಬ್ರಿಟಿ ಪಟ್ಟ ಪಡೆದರು.
ಜೋಗಿ ಮೂಲಕ ಜನಪ್ರಿಯತೆ ಪಡೆದ ಜೆನಿಫರ್ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.
ಕಾಲಕ್ರಮೇಣ ಜೆನಿಫರ್ ಅವರಿಗೆ ಅವಕಾಶಗಳು ಕಡಿಮೆಯಾದವು.
ಆ ನಂತರ ವೈಯಕ್ತಿಕ ಬದುಕಿನತ್ತ ಗಮನಹರಿಸಿದ ಜೆನಿಫರ್ ಬೆಂಗಳೂರನ್ನು ತೊರೆದರು.
ತವರೂರು ಮುಂಬೈಗೆ ಹೋದರು. ಅಲ್ಲಿ ಜೆನಿಫರ್ ತಮ್ಮ ತಂದೆ ತಾಯಿಯ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾರೆ.