ನಟಿ ಜ್ಯೋತಿಕಾ ತಂಗಿ ಕನ್ನಡದ ಹೆಸರಾಂತ ನಟಿ! ರವಿಚಂದ್ರನ್, ಶಿವಣ್ಣನ ಜೊತೆ ನಟಿಸಿದ್ದ ಬ್ಯೂಟಿ... 49 ವರ್ಷವಾದ್ರೂ ಇನ್ನೂ ಸಿಂಗಲ್ ಆಗಿದ್ದಾರೆ ಈ ಅತಿಲೋಕ ಸುಂದರಿ
ತಮಿಳು ಸಿನಿರಂಗದಲ್ಲಿ ತನ್ನದೇ ಆದ ವಿಶೇಷ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಜ್ಯೋತಿಕಾ ಸರವಣನ್.
ನಟಿ, ನಿರ್ಮಾಪಕಿಯಾಗಿರುವ ಜ್ಯೋತಿಕಾ ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳ ಜೊತೆಗೆ ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ.
50 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜ್ಯೋತಿಕಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಫಿಲ್ಮಂಫೇರ್ ಪ್ರಶಸ್ತಿಗಳು ದಕ್ಷಿಣ, ನಾಲ್ಕು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ.
ಜ್ಯೋತಿಕಾ ಅವರ ತಂದೆ ಪಂಜಾಬಿ ಹಿಂದೂ ಮತ್ತು ತಾಯಿ ಮುಸ್ಲಿಂ. ಇವರ ತಂದೆ ಚಂದರ್ ಸದನಾ, ಚಲನಚಿತ್ರ ನಿರ್ಮಾಪಕರಾಗಿದ್ದು, ತಾಯಿ ಸೀಮಾ ಸದನಾ. ಇನ್ನು ಸೀಮಾ ಅವರು ಎರಡು ಮದುವೆಯಾಗಿದ್ದು, ಮತ್ತೋರ್ವ ಪತಿಯ ಮಗಳೇ ನಟಿ ನಗ್ಮಾ. ಜ್ಯೋತಿಕಾ ಅವರ ಮಲತಂಗಿ.
1990 ರ ದಶಕದಲ್ಲಿ ಜನಪ್ರಿಯ ನಾಯಕ ನಟಿಯಾಗಿದ್ದ ನಗ್ಮಾ, 1990 ರಲ್ಲಿ ಸಲ್ಮಾನ್ ಖಾನ್ ಜೊತೆ ಬಾಘಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದು ಹಿಂದಿ ಚಿತ್ರರಂಗದ ವರ್ಷದ ಏಳನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿತ್ತು.
ಇನ್ನು ನಗ್ಮಾ ಅವರು ತೆಲುಗು, ಹಿಂದಿ, ತಮಿಳು ಮತ್ತು ಭೋಜ್‌ಪುರಿ ಚಲನಚಿತ್ರಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಇನ್ನುಳಿದಂತೆ ಮಲಯಾಳಂ, ಕನ್ನಡ, ಬೆಂಗಾಲಿ, ಪಂಜಾಬಿ, ಮರಾಠಿ ಮುಂತಾದ ಹಲವಾರು ಪ್ರಾದೇಶಿಕ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.