ಈ ಬಾಹುಬಲಿ ನಟನನ್ನ ಪ್ರೀತಿಸುತ್ತಿದ್ದ ಕಾಜಲ್‌ ಆತ ರಿಜೆಕ್ಟ್‌ ಮಾಡಿದಕ್ಕೆ ಬೇರೆ ಮದುವೆಯಾದ್ರಾ..!?

Sun, 04 Aug 2024-6:58 pm,

ಒಂದು ದಶಕದ ಹಿಂದೆ, 16 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಹುಡುಗನೂ ಕಾಜಲ್ ಅಗರ್ವಾಲ್‌ ನೆಚ್ಚಿನ ನಟಿಯಾಗಿದ್ದರು. ಈ ನಟಿ ಸಿನಿಮಾವನ್ನ ಎಲ್ಲರೂ ಮಿಸ್‌ ಮಾಡದೇ ನೋಡುತ್ತಿದ್ದರು..   

2007ರಲ್ಲಿ ತೆರೆಕಂಡ ‘ಲಕ್ಷ್ಮೀ ಕಲ್ಯಾಣಂ’ ಎಂಬ ತೆಲುಗು ಚಿತ್ರದ ಮೂಲಕ ಸೌತ್‌ಸಿನಿ ಇಂಡಸ್ಟ್ರಿಗೆ ಈ ಸುಂದರಿ ಎಂಟ್ರಿ ಕೊಟ್ಟರು. ಮೊದಲ ಚಿತ್ರ ಫ್ಲಾಪ್ ಆಗಿದ್ದರೂ ಎರಡನೇ ಚಿತ್ರ ಅಷ್ಟಾಗಿ ಕಾಜಲ್‌ಗೆ ಕ್ರೇಜ್ ನೀಡಲಿಲ್ಲ..   

ಆದರೆ ಕಾಜಲ್ ಸೌಂದರ್ಯಕ್ಕೆ ಹುಡುಗರು ಮನಸೋತಿದ್ದರು. ಅದಾದ ನಂತರ ರಾಮ್ ಚರಣ್ ಜೊತೆಗಿನ ಮಗಧೀರ ಸಿನಿಮಾ ಈ ಸುಂದರಿಯನ್ನು ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಮಾಡಿತು. ಮಿತ್ರವಿಂದಾ ಮತ್ತು ಇಂದು ಎಂಬ ಎರಡು ಪಾತ್ರದಲ್ಲಿ ಈ ನಟಿ ಅಭಿನಯಿಸಿದ್ದರು..  

ಈ ಸಿನಿಮಾದ ನಂತರ ಕಾಜಲ್ ಕೆರಿಯರ್ ಗ್ರಾಫ್ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಅದರ ನಂತರ, ಡಾರ್ಲಿಂಗ್, ವೃಂದಾವನಂ ಮತ್ತು ಮಿಸ್ಟರ್ ಪರ್ಫೆಕ್ಟ್‌ನಂತಹ ಬ್ಯಾಕ್ ಟು ಬ್ಯಾಕ್ ಹಿಟ್‌ ಚಿತ್ರಗಳೊಂದಿಗೆ ಟಾಲಿವುಡ್ ನಲ್ಲಿ ಸ್ಟಾರ್‌ಗಿರಿ ಪಡೆದರು..  

ಸುಮಾರು ಒಂದು ದಶಕದ ಕಾಲ ಈ ಚೆಲುವೆ ಟಾಲಿವುಡ್‌ ಅನ್ನು ಆಳಿದರು. ಕಳೆದ ವರ್ಷ ಬಾಲಯ್ಯ ಜೊತೆಗಿನ 'ಭಗವಂತ ಕೇಸರಿ' ಸಿನಿಮಾದ ಮೂಲಕ ಹಿಟ್ ಪಡೆದರು. ಸದ್ಯ ಈ ಬ್ಯೂಟಿ ಕೈಯಲ್ಲಿ ಮೂರ್ನಾಲ್ಕು ಪ್ರಾಜೆಕ್ಟ್ ಇದೆ.  

ಈ ಬ್ಯೂಟಿ ರಾಣಾ ದಗ್ಗುಬಾಟಿ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿದ್ದರು ಎಂಬ ವದಂತಿಗಳಿವೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ನೇನೆ ರಾಜು ನೇನೇ ಮಂತ್ರಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮೇಲಾಗಿ ಈ ಸಿನಿಮಾದಲ್ಲಿ ಇವರಿಬ್ಬರು ಗಂಡ ಹೆಂಡತಿಯಾಗಿ ನಟಿಸಿದ್ದರು..  

ಕಾಜಲ್ ರಾಣಾಳನ್ನು ಪ್ರೀತಿಸುತ್ತಾಳೆ ಎಂದು ಹಲವು ವರದಿಗಳು ಬಂದಿದ್ದವು. ಆದರೆ ರಾಣಾಗೆ ಈ ಲವ್‌ ಬೇಡವಾದ ಕಾರಣ ಗೌತಮ್ ನನ್ನು ಪ್ರೀತಿಸಿ ಕೆಲ ವರ್ಷಗಳ ನಂತರ ಮದುವೆಯಾದರು ಅಂತ ಸುದ್ದಿ ಹಬ್ಬಿತ್ತು..  

ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಣಾ ಮತ್ತು ಕಾಜಲ್‌ ಉತ್ತಮ ಸ್ನೇಹಿತರು. ಮೇಲಾಗಿ ಕಾಜಲ್‌ ಗೌತಮ್ ಕಿಚ್ಚಲು ಅವರನ್ನ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಮದುವೆಗೆ ದಾರಿ ಮಾಡಿಕೊಟ್ಟಿತು.. ಈಗ ಈ ಜೋಡಿಗೆ ಒಬ್ಬ ಮಗನಿದ್ದಾನೆ. ಸುಖ ಜೀವನ ನಡೆಸುತ್ತಿದ್ದಾರೆ..  

ಅಲ್ಲದೆ, ಕಾಜಲ್‌ ಸಿನಿಮಾ ಮಾತ್ರವಲ್ಲದೆ ಹಲವು ವೆಬ್ ಸಿರೀಸ್ ಗಳನ್ನೂ ನಟಿಸುತ್ತಿದ್ದಾರೆ. ಸುಂದರಿಯ ವೆಬ್ ಸೀರೀಸ್ ‘ಘೋಸ್ಟಿ’ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link