ಯುವತಿಯರ ಒತ್ತಾಯದ ಮೆರೆಗೆ...! ಕೀರ್ತಿ ಸುರೇಶ್‌ ಮಲ್ಟಿ ಕಲರ್ ಫ್ಲೋರಲ್ ಸೀರೆಯ ಬೆಲೆ ಮತ್ತು ವಿಶೇಷತೆ.. ಇಲ್ಲಿದೆ..

Tue, 30 Jul 2024-2:23 pm,

ನಾಗ್ ಅಶ್ವಿನ್ ನಿರ್ದೇಶನದ ʼಮಹಾನಟಿʼ  ಸಿನಿಮಾ ಕೀರ್ತಿ ಸುರೇಶ್ ಅವರ ಜೀವನದಲ್ಲಿ ಮಹತ್ವದ ತಿರುವು ನೀಡಿತು. ದಿವಂಗತ ನಟಿ ಸಾವಿತ್ರಿ ಅವರ ಜೀವನಾಧಾರಿತ ಈ ಬಯೋಪಿಕ್‌ನಲ್ಲಿ ಕೀರ್ತಿ ಸುರೇಶ್‌ ಅದ್ಭುತವಾಗಿ ಅಭಿನಯಿಸಿದ್ದಾರೆ.. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯೂ ಪಡೆಯಿತು..   

ಸಾಮಿ 2, ಸಂದಕೋಜಿ 2 ಮತ್ತು ಸರ್ಕಾರ್‌ನಂತಹ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಜನಿ, ವಿಜಯ್, ಸೂರ್ಯ, ಧನುಷ್, ವಿಕ್ರಮ್ ಮುಂತಾದ ಹಲವು ನಾಯಕ ನಟರೊಂದಿಗೆ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೀರ್ತಿ ಸುರೇಶ್ ಅಭಿನಯದ ʼರಘುದತ್ತʼ ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ.  

ʼರಘು ದತ್ತʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್, ಪ್ರಚಾರದ ವೇಳೆ ಧರಿಸಿದ್ದ ಸೀರೆ ಯುವತಿಯರ ಗಮನಸೆಳೆದಿದೆ. ಈ ಕುರಿತು ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಸದ್ಯ ಫ್ಯಾಶನ್ ಲೋಕದಲ್ಲಿ ಫ್ಲೋರಲ್ ಸೀರೆಗಳು ಟ್ರೆಂಡ್ ಶುರುವಾಗಿದ್ದು, ಸೀರೆ ಕುರಿತು ನೆಟ್ಟಿಗರು ಸರ್ಚ್‌ ಮಾಡುತ್ತಿದ್ದಾರೆ..   

ಸದ್ಯ ನಟಿ ಕೀರ್ತಿ ಹೂವಿನ ಸೀರೆ ಉಟ್ಟಿರುವ ಸ್ಟೈಲಿಶ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಕರಕುಶಲತೆಗೆ ಹೆಸರುವಾಸಿಯಾದ ಹೆಸರಾಂತ ಬ್ರ್ಯಾಂಡ್ ತೊರಾನಿ ಈ ಸೀರೆಯನ್ನು ಸಿದ್ಧಮಾಡಿದೆ. ಕಪ್ಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾದ ಈ ಸೀರೆಯು ಹಳದಿ, ಹಸಿರು, ಗುಲಾಬಿ ಮತ್ತು ಕೆಂಪು ಮುಂತಾದ ಬಹು ಬಣ್ಣಗಳಲ್ಲಿ ದೊಡ್ಡ ಹೂವಿನ ಮಾದರಿಗಳಿಂದ ಅಲಂಕರಿಸಲ್ಪಟ್ಟಿದೆ.   

ಹಸಿರು ಮತ್ತು ಬೆಳ್ಳಿಯ ಟೋನ್‌ಗಳಲ್ಲಿ ರಚಿಸಲಾದ ಬಾರ್ಡರ್ ಸೀರೆಯ ಸೌಂದರ್ಯವನ್ನು ಹೆಚ್ಚಿಸಿದೆ. ಕೀರ್ತಿ ತನ್ನ ಸೀರೆಗೆ ಹೊಂದಿಕೆಯಾಗುವಂತೆ ಹಾಲ್ಟರ್ ನೆಕ್ ಮತ್ತು ಬ್ಯಾಕ್‌ಲೆಸ್ ಬ್ಲೌಸ್ ಧರಿಸಿದ್ದಾರೆ. ಈ ಸೀರೆಯ ಬೆಲೆ ರೂ. 61,000 ಎನ್ನಲಾಗಿದೆ..  

ಸೀರೆಗೆ ಮ್ಯಾಚ್‌ ಆಗುವಂತೆ ಸಣ್ಣ ಕಿವಿಯೋಲೆಗಳೊಂದಿಗೆ ಬಿಳಿ ಮುತ್ತಿನ ಚೋಕರ್ ಧರಿಸಿದ್ದ ಕೀರ್ತಿ, ಗೋಲ್ಡನ್ ಐ ಶ್ಯಾಡೋ ಮತ್ತು ಲೈಟ್ ಲಿಪ್‌ಸ್ಟಿಕ್‌ನೊಂದಿಗೆ ಮುದ್ದಾಗಿ ಕಾಣುತ್ತಿದ್ದರು. ಸುಂದರವಾದ ಜಡೆ ಒಂದು ಬದಿಗೆ ಕೆಂಪು ಗುಲಾಬಿ ಮುಡಿದು ಸಖತ್‌ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link