ನಟಿ ಖುಷ್ಬೂ ಸುಂದರ್‌ ಮಗಳನ್ನು ಎಂದಾದರೂ ನೋಡಿದ್ದೀರಾ..? ತಾಯಿಯ ಸೌಂದರ್ಯವನ್ನೇ ಬೀಟ್‌ ಮಾಡುವಂತಿದ್ದಾಳೆ ಈ ಬ್ಯೂಟಿ..!

Wed, 23 Oct 2024-5:43 pm,

Actress Kushoo daughter: ರವಿಚಂದ್ರನ್‌ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ದ ಎವರ್‌ಗ್ರೀನ್‌ ನಟಿ ಖುಷ್ಭೂ ಅವರ ಪುತ್ರಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲು ಸಜ್ಜಾದಂತೆ ಕಾಣುತ್ತಿದೆ. ಆಗಿನ ಕಾಲದಲ್ಲಿ ನಟಿ ಖುಷ್ಭೂ ಅವರು ತಮ್ಮ ಸೌಂದರ್ಯದಿಂದ ಸಿನಿಮಾ ಇಂಡಸ್ಟ್ರಿಯನ್ನು ಆಳಿದ್ದವರು, ಇದೀಗ ನಟಿ ಅತ್ಯಂತ ಸೌಂದರ್ಯವತಿ ಅಂದುಕೊಂಡರೆ, ನಟಿಯ ಮಗಳು ತಾಯಿಯನ್ನು ಮೀರಿಸುವ ಸೌಂದರ್ಯವತಿಯಂತೆ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಖುಷ್ಭೂ ಮಗಳ ಫೋಟೋಗಳು ವೈರಲ್‌ ಆಗುತ್ತಿದ್ದು, ನಟಿಯ ಮಗಳ ಸೌಂದರ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. 

ನಟಿ ಖುಷ್ಭೂ ಒಂದು ಕಾಲದಲ್ಲಿ ಸೌತ್‌ ಫಿಲಿಂ ಇಂಡಸ್ಟ್ರಿಯಲ್ಲಿ ಸ್ಟಾರ್‌ ಹೀರೋಯಿನ್‌ ಆಗಿ ಮೆರೆದಂತವರು. 90 ರ ದಶಕದಲ್ಲಿ,  ಅವರು ತಮ್ಮ ಸೌಂದರ್ಯ ಹಾಗೂ ನಟನೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದಂತವರು. ಈ ನಟಿ ಅನೇಕ ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಲಿವುಡ್‌, ಸ್ಯಾಂಡಲ್‌ವುಡ್‌, ಟಾಲಿವುಡ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ನಟಿ, ಸೌತ್‌ನಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ನಟಿ ಖುಷ್ಭೂ ಅವರ ಸೌಂದರ್ಯಕ್ಕೆ ಹಾಗೂ ಅವರ ನಟನೆಗೆ ಮನಸೋಲದ ಅಭಿಮಾನಿಗಳೆ ಇಲ್ಲ, ಇಂದಿಗೂ ಕೂಡ ಈ ನಟಿಯನ್ನು ತಮ್ಮ ಹೃಯದಲ್ಲಿಟ್ಟು ಪೂಜಿಸುವ ಅಭಿಮಾನಿಗಳಿದ್ದಾರೆ. 

ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಖುಷ್ಬೂ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದಾರೆ. ಇದೀಗ ನಟಿ ಖುಷ್ಭೂ ಅವರ ಮಗಳ ಲೇಟೆಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಖುಷ್ಬೂ 1991 ರಲ್ಲಿ ನಟ ಪ್ರಭು ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಪ್ರಭುವಿಗೆ ಅದಾಗಲೇ ಮದುವೆ ಆಗಿದ್ದರಿಂದ ಅವರ ಮದುವೆಗೆ ತಂದೆ ಮತ್ತು ಹೆಂಡತಿ ಒಪ್ಪಿರಲಿಲ್ಲ. ಪರಿಣಾಮವಾಗಿ, ಮದುವೆಯಾದ ಮೂರು ತಿಂಗಳ ನಂತರ ಅವರು ಬೇರ್ಪಟ್ಟರು.  

ಆ ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಖುಷ್ಬೂ 2000ರಲ್ಲಿ ನಿರ್ದೇಶಕ ಸುಂದರ್ ಸಿ ಅವರನ್ನು ವಿವಾಹವಾದರು. ಅವರಿಗೆ ಆವಂತಿಕಾ ಮತ್ತು ಆನಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.   

ಈ ಮಧ್ಯೆ, ಲಂಡನ್‌ನಲ್ಲಿ ಓದುತ್ತಿರುವ ಖುಷ್ಭೂ ಅವರ ಹಿರಿಯ ಮಗಳು ಆವಂತಿಕಾ ಇತ್ತೀಚೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೋಗಳಲ್ಲಿ ನಟಿಯ ಮಗಳು ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link