ನಿಮಗೆ ನಟಿ ಮಾಧವಿ ನೆನಪಿದೆಯಾ..? ಅವರ ಗಂಡ ಮತ್ತು ಮಕ್ಕಳು ಯಾರು, ಈಗ ಹೇಗಿದ್ದಾರೆ, ಎಲ್ಲಿದ್ದಾರೆ ಗೊತ್ತೆ..!

Fri, 02 Aug 2024-8:49 pm,

ನಟಿ ಮಾಧವಿ 90 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಹೊರಹೊಮ್ಮಿದರು. ಕನ್ನಡಕ್ಕೆ ಮಾತ್ರ ಸೀಮಿತವಾಗಿರದೆ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.  

1981 ರಲ್ಲಿ ತೆರೆಕಂಡ ಘರ್ಜನೆ ಎಂಬ ಸಿನಿಮಾದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದ ಮೂಲಕ ಮಾಧವಿಯವರು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾದರು.   

ಈ ಚಿತ್ರದ ನಂತರ ಮಾಧವಿಯವರಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಬಂದವು. ಅದರಂತೆ, ಹಾಲು ಜೇನು, ಗರುಡ ರೇಖೆ, ಗಂಡುಗಲಿ ರಾಮಾ, ಚಿನ್ನದಂತ ಮಗ, ಗೆದ್ದ ಮಗ, ಶಿವಕನ್ಯೆ, ಮಲಯ ಮಾರುತ, ಶೃತಿ ಸೇರಿದಾಗ, ಜೀವನ ಜೈತ್ರ, ಆಕಸ್ಮಿಕ, ಒಡಹುಟ್ಟಿದವರು, ಸೇರಿದಂತೆ ಹಲವಾರು ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ..   

1996 ರಲ್ಲಿ ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ಮಾಧವಿ ವಿವಾಹವಾದರು, ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗವನ್ನು ತೊರೆದರು.  

ಸಧ್ಯ ತಮ್ಮ ಪತಿಯೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಅವರಿಗೆ ದೇಬಾನಿ ಶರ್ಮಾ, ಪ್ರಿಸ್ಸಿಲ್ಲಾ ಶರ್ಮಾ ಮತ್ತು ಎವೆಲಿನ್ ಶರ್ಮಾ ಎಂಬ ಮೂವರು ಪುತ್ರಿಯರಿದ್ದಾರೆ.  

ಅವರ ಮೂವರು ಪುತ್ರಿಯರು ಮಾಧವಿಯಷ್ಟೇ ಫೇಮಸ್ ಆಗಿದ್ದಾರೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ.  

ನಟಿ ಮಾಧವಿ ಅವರಂತೆ ಮಗಳು ಕೂಡ ಸೌಂದರ್ಯವತಿ ಅಂತ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.  

ತಾಯಿಯಂತೆ ಹೆಣ್ಣು ಮಕ್ಕಳು ಕೂಡ ಚಿತ್ರರಂಗಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.  

ನಟಿ ಮಾಧವಿ ಗುರುತಿಸಲಾಗದಷ್ಟು ಬದಲಾಗಿದ್ದಾರೆ ಎಂದು ನೆಟಿಜನ್‌ಗಳು ಕಾಮೆಂಟ್‌ ಮಾಡುತ್ತಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link