ನಟಿ ಮಾನ್ವಿತಾ ಕಾಮತ್’ಗೆ ಕೂಡಿ ಬಂತು ಕಂಕಣಭಾಗ್ಯ: ಸಿನಿರಂಗದ ಈ ಖ್ಯಾತ ವ್ಯಕ್ತಿಯನ್ನೇ ಮದ್ವೆಯಾಗಲಿದ್ದಾರೆ ಟಗರು ಪುಟ್ಟಿ

Fri, 12 Apr 2024-2:36 pm,

ಆರ್ ಜೆ ಆಗಿ ವೃತ್ತಿ ಆರಂಭಿಸಿದ ಮಾನ್ವಿತಾ ಕಾಮತ್ ನಂತರ ಸ್ಯಾಂಡಲ್ವುಡ್’ಗೆ ಎಂಟ್ರಿ ಕೊಟ್ಟರು. ಮೊದಲು ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾದಲ್ಲಿ ಅಭಿನಯಿಸಿದ ಮಾನ್ವಿತಾ ಜನಪ್ರಿಯತೆ ಪಡೆದುಕೊಂಡರು.

ಅದಾದ ಬಳಿಕ ಟಗರು ಸಿನಿಮಾದ ಮೂಲಕ ಹೆಸರು ಗಳಿಸಿದ ಮಾನ್ವಿತಾ, ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದರು.

ಅಂದಹಾಗೆ ನಟಿ ಮಾನ್ವಿತಾ ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಮದುವೆಯ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಮೈಸೂರು ಮೂಲದ ಅರುಣ್ ಎಂಬವರನ್ನು ನಟಿ ಮಾನ್ವಿತಾ ವಿವಾಹವಾಗಲಿದ್ದಾರೆ. ಅಂದಹಾಗೆ ಅರುಣ್ ಕೂಡ ಸಿನಿರಂಗಕ್ಕೆ ಚಿರಪರಿಚಿತರು ಎನ್ನಲಾಗಿದೆ.

ಇನ್ನು ಏಪ್ರಿಲ್ 30ರಂದು ಅರಶಿನ ಶಾಸ್ತ್ರ ಮತ್ತು ಮೇ 1ರಂದು ವಿವಾಹ ನಡೆಯಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link