Actress Meera : 42ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಖ್ಯಾತ ನಟಿ !
ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮೀರಾ ವಾಸುದೇವನ್ ಗೋಲ್ಮಾಲ್ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು.
20 ವರ್ಷಗಳಿಂದ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ಖಳನಟನಾಗಿರುವ ಜಾನ್ ಕೊಕ್ಕನ್ ಜೊತೆ ಕೆಲವು ವರ್ಷಗಳ ಹಿಂದೆ ಮದುವೆಯಾದರು.
ಬಳಿಕ ನಟಿ ಮೀರಾ ವಾಸುದೇವನ್ ಮತ್ತು ಜಾನ್ ಕೊಕ್ಕನ್ ವಿಚ್ಛೇದನ ಪಡೆದರು. ವಿಶಾಲ್ ಅಗರ್ವಾಲ್ ಅವರನ್ನು ಸಹ ನಟಿ ಮೀರಾ ಮದುವೆಯಾಗಿದ್ದರು. ಈಗ ಮೀರಾ ಮೂರನೇ ಮದುವೆಯಾಗಿದ್ದಾರೆ.
ಮೀರಾಗೆ ಈಗ 42 ವರ್ಷ. ಈ ವಯಸ್ಸಿನಲ್ಲಿ ತನಗಿಂತ 6 ವರ್ಷ ಚಿಕ್ಕವನ ಜೊತೆ ಸಪ್ತಪದಿ ತುಳಿದಿದ್ದಾರೆ. ಮೂರನೇ ಮದುವೆಯಾಗಿರುವ ವ್ಯಕ್ತಿಯ ಹೆಸರು ವಿಪಿನ್ ನಯಂಗಮ್.
ವಿಪಿನ್ ನಯಂಗಮ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟ. ವಿಪಿನ್-ಮೀರಾ ವಾಸುದೇವನ್ ಅವರ ವಿವಾಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.