ಮುದ್ದಾದ ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌..ತಾಯಿ ಮಗು ಕ್ಷೇಮ ಎಂದ ಡಾರ್ಲಿಂಗ್‌ ಕೃಷ್ಣ

Thu, 05 Sep 2024-8:27 am,

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 14, 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ, ಮದುವೆಯಾಗಿ ಮೂರು ವರ್ಷಗಳ ನಂತರ ತಮ್ಮ ಮೊದಲನೆಯ ಮಗುವಿಗೆ ಜನ್ಮ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಸ್ಟಾರ್‌ ಕಪಲ್‌ ಕೃಷ್ನ ಹಾಗೂ ಮಿಲನಾ ನಾಗರಾಜ್‌ ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.  

2021ರ ಫೆಬ್ರವರಿ 14ರಂದು ಈ ಜೋಡಿ ಮದುವೆಯಾಗಿದ್ದು, ಮದುವೆಯಾಗಿ ಮೂರು ವರ್ಷಗಲ ನಂತರ ತಮ್ಮ ಪ್ರೀತಿಗೆ ಸಾಕ್ಷಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  

ಈ ಮುಂಚೆ ತಾವು ಪೋಷಕರಾಗಲಿರುವ ಖುಷಿಯನ್ನು ಪೂರ್ಣವಾಗಿ ಅನುಭವಿಸುವಂತೆ ಈ ಜೋಡಿ, ಬೇಬಿ ಬಂಪ್‌ ಫೋಟೋಶೂಟ್‌ ಮಡಿಸಿ ಸಾಮಾಜಿಕ ಜಾಲತನದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೊಟೋಗಳು ಸಾಮಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದವು.

ಇತ್ತೀಚೆಗಷ್ಟೆ ಮಿಲನಾ ನಾಗರಾಜ್‌ ಅವರ ಸೀಮಂತ ಕಾರ್ಯವನ್ನು ಅದ್ದೂರಯಾಗಿ ಮಾಡಲಾಗಿತ್ತು.

ಸೀಮಂತ ಸಮಾರಂಭದಲ್ಲಿ ಮಿಲನಾ ನಾಗರಾಜ್‌ ಹಸಿರು ಸೀರೆಯನ್ನುಟ್ಟು, ದಂತದ ಗೊಂಬೆಯಂತೆ ಎಲ್ಲರ ಗಮನ ಸೆಳೆದರು.

ಇದೀಗ ಮಿಲನಾ ನಾಗರಾಜ್‌ ಅವರಿಗೆ 35 ವರ್ಷ ವಯಸ್ಸು, ತಮ್ಮ ಗರ್ಭವಾಸ್ತೆಯನ್ನು ಎಂಜಾಯ್‌ ಮಾಡುತ್ತಾ ಈ ಸುಂದರ ಕ್ಷಣಗಳ ಫೋಟೊಗಲನ್ನು ಹಂಚಿಕೊಳ್ಳುತ್ತಾ ನಟಿ ಸಾಮಾಜಿಕ ಜಾಲತಾನದಲ್ಲಿ ತಮ್ಮ ಅಭಿಮಾನಿಗಳಗೆ ಅಪ್ಡೇಟ್ಸ್‌ ನೀಡುತ್ತಿದ್ದರು.

ಈ ಜೋಡಿ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಡಾರ್ಲಿಂಗ್‌ ಕೃಷ್ಣ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಾಮಜಿಕ ಜಾಲತಾಣದಲ್ಲಿ ಮಗು ಹುಟ್ಟಿರುವ ಸಂತಸ ಸುದ್ದಿಯನ್ನು ಹಂಚಿಕೊಂಡಿರುವ ಡಾರ್ಲಿಂಗ್‌ ಕೃಷ್ನ ತಾಯಿ ಹಾಗೂ ಮಗು ಇಬ್ಬರು ಕೂಡ ಕ್ಷೇಮವಾಗಿದ್ದಾರೆ ಎಂದು ಹೇಳಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link