Mrunal Thakur : ಬೇಸಿಗೆ ಬಿಸಿಯ ಮಧ್ಯ ಕಣ್ತಂಪು ಮಾಡಿತು ಮೃಣಾಲ್ ಮೈಮಾಟ..! ಫೋಟೋಸ್‌ ಇಲ್ಲಿವೆ..

Tue, 07 May 2024-6:06 pm,

ಸೀತಾರಾಮ್ ಖ್ಯಾತಿಯ ಮೃಣಾಲ್ ಠಾಕೂರ್ ಸಿನಿಮಾ ಆಯ್ಕೆಯಲ್ಲಿ ಜಾಣತನ ಪ್ರದರ್ಶನ ಮಾಡ್ತಾರೆ. ಜನರಿಗೆ ಇಷ್ಟವಾಗುವ ಕಥೆಯನ್ನ ಆರಿಸಿಕೊಳ್ಳುತ್ತಾರೆ. ಆಯಾ ಸಿನಿಮಾಗಳಲ್ಲಿನ ಪಾತ್ರಗಳಿಗೆ ತಮ್ಮ ಅದ್ಭುತ ಅಭಿನಯದಿಂದ ಜೀವ ತುಂಬುತ್ತಾರೆ.   

ಇತ್ತೀಚೆಗೆ ಮುಂಬೈನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಮೃಣಾಲ್‌ ಭಾಗವಹಿಸಿದ್ದರು. ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿ, ತಮ್ಮ ಅದ್ಭುತ ನೋಟ ಮತ್ತು ಗ್ಲಾಮರ್‌ನಿಂದ ಎಲ್ಲರನ್ನೂ ಬೆರಗುಗೊಳಿಸಿದರು.  

ಮೃಣಾಲ್‌ ರ‍್ಯಾಂಪ್ ವಾಕ್ ಮಾಡುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿವೆ.   

ಮೃಣಾಲ್ ಠಾಕೂರ್ ತೊಟ್ಟಿದ್ದ ಲೆಹೆಂಗಾದ ಮೇಲೆ ಎಲ್ಲರ ಕಣ್ಣು ಬಿದ್ದಿದ್ದು, ಕೆಂಪು ಬಣ್ಣ ಲೆಹೆಂಗಾ ಮುತ್ತುಗಳಿಂದ ಕೂಡಿದೆ. ತುಂಬಾ ಗ್ರ್ಯಾಂಡ್ ಲುಕ್ ಲೆಹಂಗಾವನ್ನು ತಮ್ಮ ಡಿಸೈನರ್ ಅನು ವಿನ್ಯಾಸಗೊಳಿಸಿದ್ದಾರೆ ಎಂದು ಮೃಣಾಲ್ ಠಾಕೂರ್ ಹೇಳಿಕೊಂಡಿದ್ದಾರೆ.  

ಕೆಂಪು ಬಣ್ಣದ ಲೆಹೆಂಗಾವನ್ನು ಪೂರ್ಣಗೊಳಿಸಲು ಸುಮಾರು 1400 ಗಂಟೆಗಳನ್ನು ತೆಗೆದುಕೊಂಡಿದ್ದಾರೆ ಅಂತ ಮೃಣಾಲ್‌ ತಿಳಿಸಿದರು.   

ಮೃಣಾಲ್ ಠಾಕೂರ್ ಅವರು ತಮ್ಮ ಲೆಹೆಂಗಾದ ಶ್ರೇಯಸ್ಸು ಅನ್ನು ಸಂಪೂರ್ಣವಾಗಿ ತಮ್ಮ ವಿನ್ಯಾಸಕಾರರಿಗೆ ಸಲ್ಲುತ್ತದೆ ಅಂತ ಹೇಳಿಕೊಂಡಿದ್ದಾರೆ.   

ಜರ್ಸಿ ಮತ್ತು ಸೂಪರ್ 30 ಚಿತ್ರಗಳಿಂದ ಪ್ರಸಿದ್ಧರಾದ ಮೃಣಾಲ್ ಠಾಕೂರ್‌ಗೆ ಸೀತಾರಾಮಂ ಸಿನಿಮಾ ಒಂದು ಒಳ್ಳೆ ಕ್ರೇಜ್‌ ನೀಡಿತು.  

ಹಾಯ್ ನನ್ನಾ, ಫ್ಯಾಮಿಲಿ ಸ್ಟಾರ್ ಸಿನಿಮಾಗಳ ಮೂಲಕ ಇತ್ತೀಚಿಗೆ ತೆರೆ ಮೇಲೆ ಕಾಣಿಸಿಕೊಂಡ ನಟಿ, ಸಧ್ಯ ಪೂಜಾ ಮೇರಿ ಜಾನ್ ಹಿಂದಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link