ಗಜ ಚಿತ್ರದ ನಟಿ ನವ್ಯಾ ನಾಯರ್ ಅವರ ಮಗ ಇವರು..!
ನಟಿ ನವ್ಯಾ ನಾಯರ್ ಎಂತಹ ಪಾತ್ರ ನೀಡಿದರು ಅದಕ್ಕೆ ಜೀವ ತುಂಬುವ ಪ್ರತಿಭೆ. ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅಲ್ಪಾವಧಿಯಲ್ಲಿಯೇ ಫೇಮಸ್ ಆದವರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಗಜ ಸಿನಿಮಾದಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರ ಮನಗೆದ್ದವರು.
21 ಜನವರಿ 2010 ರಂದು ಪ್ರಖ್ಯಾತ ಉದ್ಯಮಿ ಸಂತೋಷ್ ಮೆನನ್ ಅವರೊಂದಿಗೆ ನಟಿ ನವ್ಯಾ ನಾಯರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮದುವೆ ಬಳಿಕ ಸಿನಿರಂಗಕ್ಕೆ ಗುಡ್ ಬೈ ಹೇಳಿದರು. ಬೆಂಗಳೂರಿನಿಂದ ಮುಂಬೈಗೆ ಹಾರಿ ಅಲ್ಲಿಯೇ ನೆಲೆಸಿದ್ದಾರೆ. ಈ ಜೋಡಿಗೆ ಓರ್ವ ಗಂಡು ಮಗನಿದ್ದಾನೆ.
ನೋಡಲು ಸಖತ್ ಯಂಗ್ ಆಗಿ ಕಾಣುವ ನವ್ಯಾ ನಾಯರ್ ಅವರಿಗೆ 13 ವರ್ಷದ ಮಗನಿದ್ದಾನೆ. ಈ ಮುದ್ದಿನ ಮಗನ ಹೆಸರು ಸಾಯಿಕೃಷ್ಣ.
ನಟಿ ನವ್ಯಾ ನಾಯರ್ ಇತ್ತೀಚೆಗೆ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದರ ಕೆಲವು ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಲವು ವರ್ಷಗಳ ನಂತರ ಒರುತಿ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ನವ್ಯಾ ನಾಯರ್ ಯತ್ನಿಸಿದರು.
ಆದರೆ ಹೇಳಿಕೊಳ್ಳುವಂತಹ ಯಶಸ್ಸು ಸಿಗದ ಕಾರಣ ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.