ಚಾನ್ಸ್ ಕೊಡ್ತೀನಿ ಅಂತಾ ಕರೆದುಕೊಂಡು ಬಂದು... ನಟಿ ನೀತು ಶೆಟ್ಟಿಗೂ ಆಗಿತ್ತಂತೆ ʻಮೀ ಟೂʼ ಅನುಭವ! ಬಂದಿತ್ತಂತೆ ಬ್ಯಾನ್ ಬೆದರಿಕೆ!
ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಒಂದು ಸಮಿತಿ ಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.
ಇದಕ್ಕೆ ಸಂಬಂಧಪಟ್ಟಂತೆ ಮಹತ್ವದ ಸಭೆ ನಡೆಸಲಾಗಿತ್ತು. ಸಭೆ ಬಳಿಕ ಮಾತಾಡಿದ ನಟಿ ನೀತು ಶೆಟ್ಟಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ನನಗೂ ಆ ಕೆಟ್ಟ ಅನುಭವ ಆಗಿದೆ. ಕೆಲವರು ಕಿರುಕುಳ ನೀಡಿದ್ದಾರೆ. ನಮ್ಮಲ್ಲೂ ಕೆಟ್ಟದಾಗಿ ಮುಟ್ಟಿ ಮಾತನಾಡಿಸುವ ಜನರಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಚಿಕ್ಕವಳಿದ್ದಾಗಲೇ ಕಿರುಕುಳ ಆಗಿದ್ದ ಕಾರಣ ನನಗೆ ತುಂಬಾ ಭಯ ಇದೆ ಎಂದಿದ್ದಾರೆ.
ಯಾವುದೋ ಹುಡುಗಿಗೆ ನಿನಗೆ ಸಿನಿಮಾದಲ್ಲಿ ಚಾನ್ಸ್ ಕೊಡ್ತಿನಿ ಅಂತ ಕರೆದುಕೊಂಡು ಬಂದು ಬಳಸಿಕೊಳ್ಳುತ್ತಾರೆ. ಇದನ್ನು ನಾನು ಕಣ್ಣಲ್ಲಿ ನೋಡಿದಿನಿ ಎಂದು ನೀತು ಹೇಳಿದ್ದಾರೆ.
ಕೆಲವು ಹುಡಗಿಯರು ಆ ದೊಡ್ಡ ನಟಿಯರು ಇದೇ ಥರ ಮಾಡಿದಾರೆ ಅಂತ ಅಂದುಕೊಳ್ತಾರೆ. ಇಲ್ಲ ಆ ಥರ ಇಲ್ಲವೇ ಇಲ್ಲ, ನಿಮ್ಮ ಆತ್ಮಸಾಕ್ಷಿನಾ ಬಿಡಬೇಡಿ ಎಂದು ನೀತು ಶೆಟ್ಟಿ ಹೇಳಿದ್ದಾರೆ.
ಕಮಿಟಿ ರಚನೆ ಆಗಲೇಬೇಕು. ನಟಿಯರಿಗೆ ರಕ್ಷಣೆ ಸಿಗಬೇಕು ಎಂದು ನೀತು ಶೆಟ್ಟಿ ಆಗ್ರಹಿಸಿದ್ದಾರೆ.