ಪುಟಾಣಿ `ಗೊಂಬೆ`ಗೆ ಜನ್ಮ ನೀಡಿದ ನಟಿ ನೇಹಾ ಗೌಡ ತಂದೆ ಯಾರು ಗೊತ್ತಾ? ಬಿಗ್‌ ಬಾಸ್‌ ವೇದಿಕೆಯಲ್ಲೇ ಇವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ರು ಕಿಚ್ಚ ಸುದೀಪ್‌.. ಅಷ್ಟೊಂದು ಫೇಮಸ್‌ ವ್ಯಕ್ತಿ!

Fri, 01 Nov 2024-3:15 pm,

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ, ಗೊಂಬೆ ಎಂದೇ ಖ್ಯಾತಿ ಪಡೆದಿದ್ದ ನಟಿ ನೇಹಾ ರಾಮಕೃಷ್ಣ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದ ಅವರು, ಮಗಳ ಆಗಮನದ ಸಂತಸವನ್ನು ಬಹಿರಂಗಪಡಿಸಿದ್ದಾರೆ.

 

ನೇಹಾ ಅವರು 2013 ರಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಿಂದಾಗಿ ಖ್ಯಾತಿಯನ್ನು ಪಡೆದರು. ಆ ನಂತರ ತೆಲುಗು ಧಾರಾವಾಹಿ ‘ಸ್ವಾದಿ ಚಿನುಕುಲು’ವಿನಲ್ಲಿಯೂ ನಟಿಸಿ, ಭಾರೀ ಜನಮನ್ನಣೆ ಪಡೆದರು.

 

ಅಂದಹಾಗೆ ಇವರಷ್ಟೇ ಅಲ್ಲದೆ, ಇವರ ತಂದೆಯೂ ಭಾರೀ ಫೇಮಸ್‌ ವ್ಯಕ್ತಿ. ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ನೇಹಾ ಅವರು ಆಗಮಿಸಿದ್ದ ಸಂದರ್ಭದಲ್ಲಿ ಕಿಚ್ಚ ಸುದೀಪ್‌, ನೇಹಾ ತಂದೆಯನ್ನು ನೋಡಿದ ತಕ್ಷಣ ಓಡೋಡಿ ಬಂದು ಕಾಲಿಗೆ ಬಿದ್ದು ನಮಸ್ಕರಿಸಿದ್ದರು.

 

ಆ ಸಂದರ್ಭದಲ್ಲಿ ಎಲ್ಲರೂ ಅಚ್ಚರಿಗೊಂಡಿದ್ದರು. ಅಷ್ಟಕ್ಕೂ ನೇಹಾ ಅವರ ತಂದೆ ಯಾರೆಂಬುದು ಅನೇಕರಿಗೆ ಪ್ರಶ್ನೆಯಾಗಿ ಕಾಡಿತ್ತು. ಇನ್ನು ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

 

ನಟಿ ನೇಹಾ ಅವರ ತಂದೆ ಪ್ರಖ್ಯಾತ ಮೇಕಪ್‌ ಕಲಾವಿದ ರಾಮಕೃಷ್ಣ. ಇವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

 

ಮೇಕಪ್ ಕಲಾವಿದ ಎನ್‌ ಕೆ ರಾಮಕೃಷ್ಣ ಅವರು, ರಂಗಭೂಮಿಯಲ್ಲಿ ಮೇಕಪ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು .

ZEENEWS TRENDING STORIES

By continuing to use the site, you agree to the use of cookies. You can find out more by Tapping this link