Neha Shetty Hot Photos : ಫ್ಯಾನ್ಸ್‌ ನಿದ್ದೆ ಕದ್ದ ನೇಹಾ ನಶೆಯ ನೋಟ..!

Wed, 16 Nov 2022-6:15 pm,

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನೇಹಾ, ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ನಟಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ.

ಸದ್ಯ ನೇಹಾ ಕನ್ನಡಸಿನಿರಂಗದಿಂದ ಟಾಲಿವುಡ್‌ಗೆ ಹಾರಿದ್ದಾರೆ. ಸ್ಯಾಂಡಲ್​ವುಡ್​ಗೆ ಯಾವಾಗ ಕಮ್​ಬ್ಯಾಕ್ ಮಾಡ್ತಾರೆ ಎನ್ನುವುದು ಅಭಿಮಾನಿಗಳಲ್ಲಿರುವ ಕುತೂಹಲ. 

ಡಿಜೆ ಟಿಲ್ಲು ಚಿತ್ರದಲ್ಲಿ ನಾಯಕಿ ನೇಹಾ ಶೆಟ್ಟಿ ಮಾಡಿದ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಯಂಗ್ ಹೀರೋ ಸಿದ್ದು ಜೊನ್ನಲಗಡ್ಡ ಜೊತೆ ನೇಹಾ ಸಖತ್‌ ರೊಮ್ಯಾನ್ಸ್ ನೋಡಿ ಯುವ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ.

ಪುರಿ ಜಗನ್ನಾಥ್ ನಿರ್ಮಾಣದ ಮೆಹಬೂಬಾ ಸಿನಿಮಾದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ನಟಿ ಪ್ರೇಕ್ಷಕರಿಗೆ ಪರಿಚಯವಾದರೂ. ಆದ್ರೆ ಡಿಜೆ ಟಿಲ್ಲು ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದರು.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ʼಮುಂಗಾರು ಮಳೆ 2ʼ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ನಟಿ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ತೆಲುಗು ಚಿತ್ರರಂಗದಲ್ಲಿ ನೇಹಾ ಬಹು ಬೇಡಿಕೆಯ ನಟಿ. 

ಕಲರ್ ಫುಲ್ ಸಿನಿ ಲೋಕದಲ್ಲಿ ಕೆಲವು ಹೀರೋಯಿನ್ ಗಳು ಎಷ್ಟೇ ಸಿನಿಮಾ ಮಾಡಿದರೂ ಸಹ ಕ್ರೇಜ್ ಮಾತ್ರ ಕೆಲ ನಾಯಕಿಯರಿಗೆ ಇರುತ್ತದೆ. ಅಂತಹ ಪಟ್ಟಿಯಲ್ಲಿ ನೇಹಾ ಶೆಟ್ಟಿ ಕೂಡಾ ಒಬ್ಬರು.

ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಮಂಗಳೂರು ಹುಡುಗಿ ಫ್ಯಾನ್ಸ್‌ಗಳಿಗೆ ತಮ್ಮ ಸೌಂದರ್ಯದ ಮೂಲಕ ಶಾಕ್‌ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ನೇಹಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ನೇಹಾ ನಶೆಯ ನೋಟ ಫ್ಯಾನ್ಸ್‌ ನಿದ್ದೆ ಕದ್ದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link