ನಟಿ ಪದ್ಮಜಾ ರಾವ್ ಗಂಡ ಯಾರು ಗೊತ್ತಾ? ಇವರ ಮಗ ಅಂತೂ ಫುಲ್ ಫೇಮಸ್ ವ್ಯಕ್ತಿ!
ಕಿರುತೆರೆ ಮಾತ್ರವಲ್ಲ ಬೆಳ್ಳಿ ತೆರೆಯಲ್ಲೂ ಮಿಂಚಿದವರು ಪದ್ಮಜಾ ರಾವ್. ಚಿತ್ರರಂಗಕ್ಕೆ ಬರುವ ಮುನ್ನ ಪದ್ಮಜಾ ರಾವ್ ಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಪದ್ಮಜಾ ರಾವ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ಆದರೆ ಇದಕ್ಕೆ ಅವಕಾಶವಿರಲಿಲ್ಲ.
ಮನೆಯಲ್ಲಿ ಹಿರಿಯ ಮಗಳಾದ ಕಾರಣ ಒಂದು ಹುಡುಗನನ್ನು ಹುಡುಕಿ ಪದ್ಮಜಾ ಅವರಿಗೆ ಮದುವೆ ಮಾಡಿದರು. ಮದುವೆ ಬಳಿಕ ಆಕ್ಟಿಂಗ್ ಮಾಡಲು ಗಂಡನ ಮನೆಯವರಿಂದಲೂ ಪ್ರೋತ್ಸಾಹ ದೊರೆಯಲಿಲ್ಲ ಎಂದು ಪದ್ಮಜಾ ರಾವ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಅದೇ ಕಾರಣಕ್ಕೆ ಡಿವೋರ್ಸ್ ಪಡೆದು ಗಂಡನ ಮನೆ ಬಿಟ್ಟು ಬಂದೆ. ಅಷ್ಟರಲ್ಲಿ ಮಗ ಹುಟ್ಟಿದ್ದ, ಅವನಿಗೆ ಆಗ ಎರಡು ವರ್ಷ ವಯಸ್ಸಾಗಿತ್ತು ಎಂದು ಪದ್ಮಜಾ ರಾವ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ನಂತರ ಮತ್ತೊಂದು ಮದುವೆ ಆದರು. ಆಗ ಅವರಿಗೆ 30 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಹೀರೋಯಿನ್ ಆಗುವ ಅವಕಾಶ ಇರದ ಕಾರಣ ವೈಶಾಲಿ ಕಾಸರವಳ್ಳಿ ಅವರ ಮೂಡಲ ಮನೆ ಧಾರಾವಾಹಿ ಮೂಲಕ ಬಣ್ಣ ಹಚ್ಚಿ ನಟನೆಗೆ ಎಂಟ್ರಿ ಕೊಟ್ಟರು.
ನಟಿ ಪದ್ಮಜಾ ರಾವ್ ಅವರ ಮಗ ಕೂಡ ಸಖತ್ ಫೇಮಸ್ ಆಗಿದ್ದಾರೆ. ಇವರ ಮಗನ ಹೆಸರು ಸಂಜೀವ್. ಪ್ರಾಣಿ ಪ್ರಿಯರಾಗಿರುವ ಸಂಜೀವ್, ಪ್ರಾಣಿ ಅಭಯ ಕೇಂದ್ರ ನಡೆಸುತ್ತಾರೆ. 50 ಕ್ಕಿಂತ ಹೆಚ್ಚು ವಿವಿಧ ಪ್ರಾಣಿಗಳನ್ನು ಸಾಕುತ್ತಿದ್ದಾರೆ.
ಪದ್ಮಜಾ ರಾವ್ ಅವರ ಎರಡನೇ ಪತಿ ಅವರ ನಟನೆಗೆ ಸಪೋರ್ಟಿವ್ ಆಗಿದ್ದಾರೆ. ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಲಾಗುತ್ತದೆ.