ಶಮಿ ಜೊತೆ 2ನೇ ಮದುವೆಯಾಗೋಕೆ ರೆಡಿಯಾದ ಖ್ಯಾತ ನಟಿ… ಆದ್ರೆ ಈ ಷರತ್ತಿನ ಮೇಲೆ!!
ವಿಶ್ವಕಪ್’ನಲ್ಲಿ ಇದುವರೆಗೆ 16 ವಿಕೆಟ್’ಗಳನ್ನು ಕಬಳಿಸಿರುವ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್’ಗಳನ್ನು ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಈ ಪ್ರದರ್ಶನದಿಂದಾಗಿ ಶಮಿಗೆ ಪ್ರಶಂಸೆಗಳ ಸುರಿಮಳೆ ಹರಿದುಬಂದಿತ್ತು.
ರಾಜಕೀಯ ನಾಯಕರಿಂದ ಹಿಡಿದು ಬಾಲಿವುಡ್’ನವರೆಗೂ ಶಮಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಈ ಎಲ್ಲದರ ಜೊತೆಗೆ ನಟಿ ಪಾಯಲ್ ನೇರವಾಗಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಸದ್ಯ ಈ ಪ್ರಸ್ತಾಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಟಿ ಪಾಯಲ್ ಘೋಷ್ ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಈ ನಡುವೆ 'ಮೀ ಟೂ' ಆಂದೋಲನದ ಆರೋಪಗಳಿಂದ ಪಾಯಲ್ ಗಮನ ಸೆಳೆದಿದ್ದರು.
ಇದೀಗ ಮೊಹಮ್ಮದ್ ಶಮಿಗೆ ಮದುವೆಯ ಪ್ರಸ್ತಾಪ ಮಾಡುವ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಪಾಯಲ್ ಘೋಷ್ ಟ್ವೀಟ್ ಮಾಡಿ ಶಮಿಗೆ ಮದುವೆ ಪ್ರಸ್ತಾಪ ಇಟ್ಟಿದ್ದು, ಒಂದು ಪ್ರಮುಖ ಷರತ್ತು ಹಾಕಿದ್ದಾರೆ.
"ಶಮಿ ನೀವು ಮೊದಲು ಇಂಗ್ಲೀಷ್ ಅನ್ನು ಸುಧಾರಿಸಿ, ಹಾಗಿದ್ರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ" ಎಂದು ಪಾಯಲ್ ಘೋಷ್ ಮೊಹಮ್ಮದ್ ಶಮಿಗೆ ಮದುವೆ ಪ್ರಸ್ತಾಪ ನೀಡಿದ್ದಾರೆ. ಈ ಪೋಸ್ಟ್’ಗೆ ನೆಟಿಜನ್’ಗಳು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.