ಕನ್ನಡಿಗರೇ ಹುಬ್ಬೇರಿಸುವಂತೆ ಮುದ್ದಾಗಿ ಕನ್ನಡ ಮಾತನಾಡೋ ನಟಿ ಪೂಜಾ ಗಾಂಧಿ ನಿಜವಾದ ವಯಸ್ಸೆಷ್ಟು ಗೊತ್ತಾ?

Sat, 10 Aug 2024-2:15 pm,

ಕನ್ನಡದ ಪ್ರಖ್ಯಾತ ನಟಿಯರಲ್ಲಿ ಪೂಜಾ ಗಾಂಧಿ ಕೂಡ ಒಬ್ಬರು. ಮಳೆ ಹುಡುಗಿ ಎಂದೇ ಖ್ಯಾತಿ ಪಡೆದ ಇವರು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು.

ಪೂಜಾ ಗಾಂಧಿ ಹುಟ್ಟಿದ್ದು 7 ಅಕ್ಟೋಬರ್ 1983 ರಲ್ಲಿ. 2006 ರಲ್ಲಿ ತೆರೆಕಂಡ ಮುಂಗಾರು ಮಳೆ ಸಿನಿಮಾದ ಮೂಲಕ ಭರ್ಜರಿ ಯಶಸ್ಸು ಕಂಡರು.

 

ಇನ್ನು ಪೂಜಾ ಗಾಂಧಿಯವರು ಒಂದು ದಶಕದಲ್ಲಿ ಐದು ಭಾಷೆಗಳಲ್ಲಿ ಸುಮಾರು 50 ಚಲನಚಿತ್ರಗಳಲ್ಲಿ ನಟಿಸಿದ್ದಾರೆ.  ದಿ ಬೆಂಗಳೂರು ಟೈಮ್ಸ್ ಇವರನ್ನು "2012 ರ 25 ಅತ್ಯಂತ ಅಪೇಕ್ಷಣೀಯ ಮಹಿಳಯರ ಪಟ್ಟಿಯಲ್ಲಿ ಇರಿಸಿದೆ.

 

2001 ರಲ್ಲಿ ರಾಜ್ ಬಬ್ಬರ್ ಜೊತೆಗಿನ ಹಿಂದಿ ಚಲನಚಿತ್ರ ಖತ್ರೋನ್ ಕೆ ಖಿಲಾಡಿ ಮೂಲಕ ತಮ್ಮ ಸಿನಿ ಜರ್ನಿ ಪ್ರಾರಂಭಿಸಿದರು.

 

ಕನ್ನಡದಲ್ಲಿ ಮುಂಗಾರು ಮಳೆ (2006), ಮಿಲನ (2007), ಕೃಷ್ಣ (2007), ತಾಜ್ ಮಹಲ್ (2008), ಬುದ್ಧಿವಂತ (2008), ಅನು (2009), ಗೋಕುಲ (2009) ಮುಂತಾದ  ಯಶಸ್ವಿ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

 

ದಂಡುಪಾಳ್ಯ (2012), ದಂಡುಪಾಳ್ಯ 2 (2017) ಮತ್ತು ದಂಡುಪಾಳ್ಯ 3 (2018) ಸರಣಿ ಚಲನಚಿತ್ರಗಳ ಯಶಸ್ಸಿನ ನಂತರ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.

 

ಇನ್ನು 2016 ರಲ್ಲಿ, ಕನ್ನಡ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ದಕ್ಷಿಣ ಕೊರಿಯಾದ KEISIE ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸಹಯೋಗದೊಂದಿಗೆ ಗವರ್ನಿಂಗ್ ಕೌನ್ಸಿಲ್ ಆಫ್ ಕಾನ್ಫೆಡರೇಶನ್ ಆಫ್ ಇಂಟರ್ನ್ಯಾಷನಲ್ ಅಕ್ರೆಡಿಟೇಶನ್ ಕಮಿಷನ್ (CIAC) ನಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಕೂಡ ಪಡೆದಿದ್ದಾರೆ.

 

ಇನ್ನು ರಾಜಕೀಯದಲ್ಲೂ ಒಂದಷ್ಟು ಕಾಲ ಗುರುತಿಸಿಕೊಂಡಿರುವ ಪೂಜಾ ಇದೀಗ ತಮ್ಮ ವೃತ್ತಿಯತ್ತ ಗಮನ ಹರಿಸುತ್ತಿದ್ದಾರೆ. ಅಂದಹಾಗೆ ಇವರ ವಯಸ್ಸು ೪೦ ವರ್ಷ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link